ಕರಾವಳಿ

ಉದ್ಯೋಗ ಕಳೆದುಕೊಂಡು ಖಿನ್ನತೆಯಿಂದ ಯುವಕ ಆತ್ಮಹತ್ಯೆ

Pinterest LinkedIn Tumblr

ಕಾಸರಗೋಡು, ಜೂ. 10 : ಗಲ್ಫ್ ಉದ್ಯೋಗ ಕಳೆದುಕೊಂಡು ಖಿನ್ನತೆಗೊಳಗಾಗಿದ್ದ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ರೈಲ್ವೆ ನಿಲ್ದಾಣ ಸಮೀಪದ ವಸತಿಗೃಹದಲ್ಲಿ ನಡೆದಿದೆ.

ಮೃತ ಪಟ್ಟ ವ್ಯಕ್ತಿಯನ್ನು ಪೆರ್ಲ ಶಿವಗಿರಿ ಬದಿಯಾರಿನ ನಿವಾಸಿ ಕೃಷ್ಣ(35) ಎಂದು ಗುರುತಿಸಲಾಗಿದೆ.ಈ ಹಿಂದೆ ಮಸ್ಕತ್‌ನ ಖಾಸಗಿ ಇಂಜಿನಿಯರಿಂಗ್ ಕಂಪೆನಿಯಲ್ಲಿ ಮೆಕಾನಿಕಲ್ ಇಂಜಿನೀಯರಿಂಗ್ ಆಗಿ ಕೆಲಸ ಮಾಡುತ್ತಿದ್ದರು ಕೆಲಸದ ಸಂದರ್ಭದಲ್ಲಿ ಯಂತ್ರಕ್ಕೆ ಸಿಲುಕಿ ಬಲ ಕೈಯ ಬೆರಳುಗಳು ತುಂಡರಿಸಲ್ಪಟ್ಟಿದ್ದವು. ಕೆಲ ತಿಂಗಳ ಕಾಲ ಮಸ್ಕತ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರು ತಿಂಗಳ ಹಿಂದೆ ಊರಿಗೆ ಬಂದಿದ್ದನು. ಕಂಪೆನಿಯ ಭಾರತದ ಬ್ರಾಂಚ್‌ನಲ್ಲಿ ಕೆಲಸ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ್ದರು.

ಇದರಂತೆ ಕೃಷ್ಣ ಊರಿಗೆ ಬಂದಿದ್ದನು. ಹಲವು ಬಾರಿ ಬೆಂಗಳೂರಿನ ಬ್ರಾಂಚ್‌ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಉದ್ಯೋಗ ಲಭಿಸದ ಬಗ್ಗೆ ಕೃಷ್ಣ ಹಲವರಲ್ಲಿ ಬೇಸರ ವ್ಯಕ್ತಪಡಿಸಿದ್ದನೆನ್ನಲಾಗಿದೆ. ಮಂಗಳವಾರದಂದು ಮಂಗಳೂರಿನಲ್ಲಿರುವ ಕಚೇರಿಗೆ ಅರ್ಜಿ ಸಲ್ಲಿಸಲು ತೆರಳಿದ್ದನು. ಅಲ್ಲಿಂದ ರೈಲು ಮೂಲಕ ಕಾಸರಗೋಡಿಗೆ ತಲುಪಿದ್ದು, ರೈಲ್ವೆ ನಿಲ್ದಾಣ ಸಮೀಪದ ವಸತಿಗೃಹದಲ್ಲಿ ತಂಗಿದ್ದು, ಅಲ್ಲಿಯೇ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

Comments are closed.