ಕರಾವಳಿ

ಫೇಸ್ ಬುಕ್ ನಲ್ಲಿ ಮತ್ತೆ ವಾರ್ ಮುಂದುವರಿಸಿದ ಅನುಪಮಾ ಶೆಣೈ ! ರಾಜೀನಾಮೆ ಬಳಿಕ ಹಾಕಿದ ಸ್ಟೇಟಸ್….

Pinterest LinkedIn Tumblr

Anupama

ಬೆಂಗಳೂರು: ನಾನು ಫೇಸ್ ಬುಕ್ ಖಾತೆಯನ್ನೇ ಹೊಂದಿಲ್ಲ ಎಂದು ಡಿವೈಎಸ್ ಪಿ ಅನುಪಮಾ ಶೆಣೈ ಹೇಳಿಕೆ ನೀಡಿದ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಮತ್ತೆ ಸ್ಟೇಟಸ್ ಅಪ್ಡೇಟ್ ಆಗಿದೆ.

ಇಂದು ಮೃತ ಡಿಕೆ ರವಿಯವರ ಹುಟ್ಟು ಹಬ್ಬವಾಗಿದ್ದು, ಅವರಿಗೆ ಫೆಸ್ಬುಕ್ ನಲ್ಲಿ ಶುಭಾಶಯ ತಿಳಿಸಿದ್ದಾರೆ. ನೀವು ಇವತ್ತು ನಮ್ಮೊಂದಿಗೆ ಇಲ್ಲದೇ ಇರಬಹುದು. ನಿಮ್ಮ ಸೇವೆ, ಜನಪರ ಕಾಳಜಿ ಯಾವಾಗಲೂ ನೆನಪಲ್ಲಿದೆ. ಒಬ್ಬ ದಕ್ಷ ಅಧಿಕಾರಿಯನ್ನು ಕಳೆದುಕೊಂಡ ದುಃಖ ಇದ್ದೇ ಇದೆ. ಮಣ್ಣು ಹಾಕಿ ಮುಚ್ಚಿದರೂ ಇವತ್ತಲ್ಲ, ನಾಳೆ ಸತ್ಯ ಹೊರ ಬರಲೇಬೇಕು. ಅದಕ್ಕಾಗಿಯೇ ಕಾಯ್ತಾ ಇದ್ದೇವೆ… ಮತ್ತೆ ಹುಟ್ಟಿ ಬನ್ನಿ….ಹುಟ್ಟು ಹಬ್ಬದ ಶುಭಾಶಯಗಳು.

#Facebook ಮಿತ್ರರೇ ಭೀಷ್ಮ ಪಿತಾಮಹಾ ಎಂದಿನಂತೆ
ಅಸಹಾಯತೆ ವ್ಯಕ್ತಪಡಿಸಿದ್ದಾರೆ.
ನಾನು ನಿಮಿತ್ತ ಮಾತ್ರ
ಕುರುಕ್ಷೇತ್ರ ಯುದ್ಧ ನಡೆಯಲೇಬೇಕು ಎಂದಿದ್ದಾರೆ.

#ರಾಜದ್ರೋಹ!

#ಸಂವಿಧಾನ ನಿನ್ನಪ್ಪನ ಮನೆ ಆಸ್ತಿಯಲ್ಲ
#ದುರ್ಯೋದನಾ ಯಾರಿಗೆ ಹೆದರಿಸ್ತಿದ್ದೀಯಾ…ಬೋಳಿಮಗನೇ!
#ಜನತಾ ನ್ಯಾಯಾಲಯ
#ದ್ರೌಪದಿಗೆ ಆಗಿದ್ದು 1857ರ ಅಪಮಾನ
#ಇದು ಗಂಡ ಹೆಂಡಿರ ಜಗಳವಲ್ಲ…
#ಮಾಧ್ಯಮ ಮಿತ್ರರೇ ಒಗ್ಗಟ್ಟಿನಲ್ಲಿ ಬಲವಿದೆ.

ಹೀಗೆ ಫೇಸ್ ಬುಕ್ ನಲ್ಲಿ ಕೆಟ್ಟ ಭಾಷೆ ಬಳಸಿ ಸ್ಟೇಟಸ್ ಅಪ್ ಡೇಟ್ ಮಾಡಲಾಗಿದೆ.

ಗುರುವಾರವಷ್ಟೇ ತಾನು ಫೇಸ್ ಬುಕ್ ಅಕೌಂಟ್ ಹೊಂದೇ ಇಲ್ಲ ಎಂದು ಅನುಪಮಾ ಶೆಣೈ ಹೇಳಿಕೆ ನೀಡಿದ್ದು, ಹಾಗಾದರೆ ಫೇಸ್ ಬುಕ್ ಖಾತೆ ಯಾರದ್ದು? ಅಪ್ ಡೇಟ್ ಮಾಡುತ್ತಿರುವವರು ಯಾರು? ಶೆಣೈ ಈ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬ ಸಾವಿರಾರು ಪ್ರಶ್ನೆಗಳು ಎದುರಾಗುತ್ತಿವೆ.

Comments are closed.