ಮಂಗಳೂರು, ಜೂ.11: ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ಎರಡು ಮೀನುಗಾರಿಕಾ ದೋಣಿ ಸಹಿತ 22 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸುಮಾರು 10 ನಾಟಿಕಲ್ ಮೈಲು ದೂರದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಹಳೇ ಬಂದರಿಗೆ ಕರೆತಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಜೂ.೧ರಿಂದ ಯಾಂತ್ರಿಕ ಮೀನುಗಾರಿಕೆ ನಿಷೇಧಿದಕ್ಕೆ ಸರ್ಕಾರ ಆದೇಶ ನೀಡಿದ್ದು, ಆದರೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಮೀನುಗಾರರು ಈ ಕಡೆಗೆ ಬಂದಿದ್ದಾರೆ.
ವಶಕ್ಕೆ ಪಡೆದ ದೋಣಿಗಳ ಪೈಕಿ ಒಂದು ಯಾಂತ್ರೀಕೃತ ಹಾಗೂ ಇನ್ನೊಂದು ಗಿಲ್‌ನೆಟ್. ದೋಣಿಗಳಿದ್ದ ಮೀನುಗಳನ್ನು ಧಕ್ಕೆಯಲ್ಲಿ ಹರಾಜು ಹಾಕಲಾಗಿದೆ. ವಶಕ್ಕೆ ಪಡೆದ ದೋಣಿ ಹಾಗೂ ಮೀನುಗಾರರು ಸದ್ಯ ಮೀನುಗಾರಿಕಾ ಇಲಾಖೆಯ ವಶದಲ್ಲಿದ್ದು, ಕರಾವಳಿ ಕಾವಲು ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.
ಜೂನ್ ಹಾಗೂ ಜುಲೈ ತಿಂಗಳು ಮೀನು ಸಂತತಿ ವೃದ್ದಿಯಾಗುವ ಸಮಯ. ಈ ಸಮಯದಲ್ಲಿ ಮೀನುಗಾರಿಕೆ ನಿಷೇಧಿಸಿದೆ. ಈ ಸಮಯದಲ್ಲಿ ಕೇರಳ, ತಮಿಳುನಾಡಿಗಳಿಂದ ಮೀನುಗಾರರು ಗಡಿ ದಾಟಿ ಬರುತ್ತಾರೆ. ಕರಾವಳಿ ಕಾವಲು ಪಡೆ ಹಾಗೂ ಕರಾವಳಿ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ. ಮೀನುಗಾರರು ದಂಡ ಪಾವತಿಸಿದ ಬಳಿಕವಷ್ಟೇ ವಾಪಾಸ್ ತೆರಳಲು ಅವಕಾಶ ನೀಡಲಾಗುವುದು. ದಂಡದ ಹಣ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ. ಹಿಡಿದ ಮೀನುಗಳ ದೋಣಿಯ ಲೆಕ್ಕಾಚಾರದ ಬಳಿಕ ದಂಡದ ಮೊತ್ತ ನಿರ್ಧಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.