ಮಂಗಳೂರು,ಜೂ.16: ರಾಷ್ಟ್ರೀಯ ಹಿಂದೂ ಜನಜಾಗೃತಿ ಸಮಿತಿ ಅಶ್ರಯದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬುಧವಾರ ಮಂಗಳೂರಿನ ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ರಾಷ್ಟ್ರೀಯ ಹಿಂದೂ ಆಂದೋಲನ ಹಮ್ಮಿಕೊಂಡಿರುವ ಪ್ರತಿಭಟನಕಾರರು, ಸಾಧ್ವಿ ಪ್ರಜ್ಞಾಸಿಂಗ್‌ಗೆ 8 ವರ್ಷಗಳ ಕಾಲ ಕಿರುಕುಳ ನೀಡಿದ ಪೊಲೀಸರು ಹಾಗೂ ಅಂದು ಆಡಳಿತದಲ್ಲಿದ್ದವರ ಮೇಲೆ ಕ್ರಮ ಕೈಗೊಳ್ಳಬೇಕು, ಓಂನ ಲಾಭವನ್ನು ಗಮನದಲ್ಲಿಟ್ಟುಕೊಂಡು ಯೋಗದಿನದ ಯೋಗಕ್ರಿಯೆಯಲ್ಲಿ ಓಂ ಉಪಯೋಗವನ್ನು ಕಡ್ಡಾಯಗೊಳಿಸಬೇಕು, ಹರಿಪರ್ವತವನ್ನು ಕೋಹ-ಎ-ಮಾರನ್ ಎಂದು ನಾಮಕರಣವನ್ನು ರದ್ದುಪಡಿಸಿ ಕಾಶ್ಮೀರದ ಇಸ್ಲಾಮೀಕರಣವನ್ನು ತಡೆಗಟ್ಟಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಮುಖಂಡರುಗಳಾದ ಪ್ರಭಾಕರ ಪಡಿಯಾರ, ಸಂಗೀತಾ ಪ್ರಭು, ಧರ್ಮೇಂದ್ರ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
Comments are closed.