ನವದೆಹಲಿ: ಸರ್ಕಾರಿ ಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಉಚಿತ ರಾಷ್ಟ್ರೀಯ ರೋಮಿಂಗ್ ಸೇವೆಯನ್ನು ಇನ್ನೂ ಒಂದು ವರ್ಷ ಕಾಲ ವಿಸ್ತರಿಸಿದೆ.
ಕಳೆದ ವರ್ಷ ಬಿಎಸ್‌ಎನ್‌ಎಲ್ ಈ ಯೋಜನೆ ಆರಂಭಿಸಿದ್ದು, ಗ್ರಾಹಕರಿಂದ ಈ ಬಗ್ಗೆ ಅದ್ಭುತ ಪ್ರತಿಕ್ರಿಯೆ ಬಂದಿರುವ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಭಾರಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ವರ್ಷ ಉಚಿತ ರೋಮಿಂಗ್ ವ್ಯವಸ್ಥೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಗ್ರಾಹಕ ವಿಭಾಗದ ನಿರ್ದೇಶಕ ಆರ್.ಕೆ ಮಿತ್ತಲ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಬಿಎಸ್‌ಎನ್‌ಎಲ್ ಶೇ. 1.67ರಷ್ಟು ಬೆಳವಣಿಗೆ ಕಂಡಿದ್ದರೆ, ಭಾರತೀ ಏರ್‌ಟೆಲ್ ಶೇ. 1.18ರಷ್ಟು, ವೊಡೋ ಫೋನ್ ಶೇ. 1.04, ಐಡಿಯಾ ಸೆಲ್ಯುಲಾರ್ ಶೇ. 0.85 ರಷ್ಟು ಬೆಳವಣಿಗೆ ಕಂಡಿವೆ.
Comments are closed.