ಕುಂದಾಪುರ : ಸ್ನೇಹಿತನನ್ನು ಆತನ ಸ್ನೇಹಿತನೇ ಗುಂಡಿಟ್ಟು ಕೊಲೆಗೈದ ಪ್ರಕರಣವೊಂದು ಶುಕ್ರವಾರ ತಡರಾತ್ರಿ ಬೈಂದೂರಿನ ಹೆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮ್ಯಾಕೋಡ್ ಎಂಬಲ್ಲಿ ನಡೆದಿದ್ದು, ಪ್ರಕರಣ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಹತ್ಯೆಗೀಡಾದ ಯುವಕನನ್ನು ಬೈಂದೂರು ಕಂಬದಕೋಣೆಯ ಹಳಗೇರಿ ನಿವಾಸಿ ಪ್ರಶಾಂತ್ ಶೆಟ್ಟಿ (23) ಎಂದು ಗುರುತಿಸಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನ ಸ್ನೇಹಿತ ಅಂಕಿತ್ ಶೆಟ್ಟಿ (23) ಮೇಲೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಅಂಕಿತ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ನಿನ್ನೆ ರಾತ್ರಿ ಎಣ್ಣೆ ಪಾರ್ಟಿ ಮುಗಿಸಿಕೊಂಡು ಮ್ಯಾಕೋಡ್ ಸಮೀಪದ ಕಾಡಿಗೆ ಶಿಖರಿಗೆ ತೆರಳಿದ್ದು, ಇಂದು ಮುಂಜಾನೆ ಪ್ರಶಾಂತ್ ಶೆಟ್ಟಿ ಶವ ಕಾಡಿನಲ್ಲಿ ಪತ್ತೆಯಾಗಿದೆ. ಪ್ರಶಾಂತ್ ಎದೆ ಭಾಗಕ್ಕೆ ಗುಂಡೇಟು ತಗುಲಿದ್ದು, ಈತನ ಸ್ನೇಹಿತನೇ ಗುಂಡಿಟ್ಟು ಕೊಲೆಗೈದಿರಬೇಕೇಂದು ಶಂಕಿಸಲಾಗಿದೆ.
ಹೆಚ್ಚಿನ ವಿವರ ಹಾಗೂ ಚಿತ್ರ …
ಬೈಂದೂರಿನಲ್ಲಿ ಸ್ನೇಹಿತನಿಂದಲೇ ಸ್ನೇಹಿತನ `ಶಿಕಾರಿ’: ಗೆಳೆಯನಿಗೆ ಗುಂಡಿಕ್ಕಿದವನ ಬಂಧನ
Comments are closed.