ಉಳ್ಳಾಲ, ಜೂನ್.18: ತೊಕ್ಕೊಟ್ಟು ಸಮೀಪದ ಕೊಲ್ಯ ಜಾಯ್ ಲ್ಯಾಂಡ್ ಶಾಲೆ ಮುಂಭಾಗದಲ್ಲಿ ರೈಲು ಡಿಕ್ಕಿ ಹೊಡೆದು ನವವಿವಾಹಿತರೋರ್ವರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಕೊಲ್ಯ ಸಾರಸ್ವತ ಕಾಲನಿ ನಿವಾಸಿ ಪ್ರಶಾಂತ್ ಮೂಲ್ಯ (35) ಎನ್ನಲಾಗಿದ್ದು, ಶನಿವಾರದಂದು ಮನೆಯಲ್ಲೇ ಇದ್ದ ಇವರು ತೊಕ್ಕೊಟ್ಟು ಕಡೆಗೆ ಹೋಗಿ ಮನೆಗೆ ವಾಪಸ್ಸಾಗುವಾ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ನವವಿವಾಹಿತರಾಗಿದ್ದ ಪ್ರಶಾಂತ್ ಎರಡು ತಿಂಗಳ ಹಿಂದೆಯಷ್ಟೇ ಮಾಡೂರಿನ ಯುವತಿಯನ್ನು ವಿವಾಹವಾಗಿದ್ದರು. ಹೆತ್ತವರಿಗೆ ಓರ್ವನೇ ಪುತ್ರನಾಗಿದ್ದ ಇವರು ಹುಟ್ಟು ಅಂಗವೈಕಲ್ಯತೆಯನ್ನು ಹೊಂದಿದ್ದರು. ಸೋಮೇಶ್ವರ ಪಂಚಾಯಿತಿನ ಗ್ರಂಥಾಲಯದಲ್ಲಿ ಖಾಯಂ ಉದ್ಯೋಗಿಯಾಗಿದ್ದ ಇವರು ಪಿಗ್ಮಿ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.