ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನಲ್ ಸಮಿತಿಯು ವತಿಯಿಂದ ಬೃಹಹತ್ ಮಟ್ಟದ ಇಫ್ತಾರ್ ಕೂಟವು ಇತ್ತೀಚೆಗೆ ಇಲ್ಲಿನ ನೋಫಾ ಇಸ್ತಿರಾಹ ದಲ್ಲಿ ನಡೆಯಿತು. ಕಳೆದ ಮೂರು ವರ್ಷಗಳಿಂದ ಪವಿತ್ರ ರಂಝಾನ್ ನಲ್ಲಿ ಭಾರೀ ಮಟ್ಟದ ಇಫ್ತಾರ್ ಸಂಗಮಗಳನ್ನು ಕೆಸಿಎಫ್ ಆಯೋಜಿಸುತ್ತಾ ಬರುತ್ತಿದೆ. ಈ ಬಾರಿ ನಡೆದ ಕಾರ್ಯ ಕ್ರಮದಲ್ಲಿ ರಿಯಾದ್ ಪ್ರಾಂತದ ವಿವಿಧ ಕಡೆಗಳಿಂದ ಮಹಿಳೆಯರು ಮಕ್ಕಳೂ ಸೇರಿದಂತೆ ಸುಮಾರು ಸಾವಿರದಷ್ಟು ಮಂದಿ ಭಾಗವಹಿಸುದ್ದು ಪರಿಸರದ ಕನ್ನಡಿಗ ಬಾಂದವರ ಪಾಲಿಗೆ ಇದೊಂದು ಕುಟುಂಬ ಮಿಲನವಾಗಿ ಮಾರ್ಪಟ್ಟಿತು.
ಇಫ್ತಾರ್ ನ ಬಳಿಕ ನಡೆದ ಸಭಾ ಕಾರ್ಯ ಕ್ರಮದ ಲ್ಲಿ ಕೆಸಿಎಫ್ ರಿಯಾದ್ ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಕೆಸಿಎಫ್ ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಎಸ್ಎಸ್ಎಫ್ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಜಾರಿಗೆ ತಂದಿರುವ ಶೈಕ್ಷಣಿಕ ಹಾಗೂ ಧರ್ಮ ಜಾಗೃತಿಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಕೇವಲ ಹೆಸರಿಗೆ ಮಾತ್ರ ಮುಸ್ಲಿಮರು ಎನಿಸಿಕೊಂಡಿರುವ ರಾಜ್ಯದ ಉತ್ತರದ ಆರು ಜಿಲ್ಲೆಗಳ ಒಳನಾಡು ಭಾಗಗಳ ಮುಸ್ಲಿಂ ಬಾಹುಳ್ಯ ಫ್ರದೇಶಗಳನ್ನು ಗುರುತಿಸಿಕೊಂಡು ಆಲ್ಲಿ ಅವರಿಗೆ ಪ್ರಾಥಮಿಕ ವಿದ್ಯಾ ಕೇಂದ್ರಗಳನ್ನು ತೆರೆಯಾಗಿದೆ. ಇದಕ್ಕಾಗಿ ಸಂಘಟನೆಯ ಮೇಲ್ನೋಟದಲ್ಲಿ ” ಇಹ್ಸಾನ್” ಎಂಬ ತಂಡವು ಕಳೆದ ಕೆಲವು ವರ್ಷಗಳಿಂದ ರಾಜ್ಯದ ಗದಗ, ಹಾವೇರಿ, ಬಳ್ಳಾರಿ , ದಾವಣಗೆರೆ, ಚಿತ್ರ ದುರ್ಗ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ತನ್ನ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಮೊದಲ ಹಂತದಲ್ಲಿ ಧರ್ಮದ ಗಂಧ ಗಾಳಿಯೂ ಇಲ್ಲದ ಈ ಭಾಗದ ಮುಸ್ಲಿಮರಿಗೆ ಇಸ್ಲಾಮೀ ನಂಬಿಕೆಯ ಮೂಲ ಭೂತ ಅರಿವನ್ನು ಮೂಡಿಸುವುದು ಮತ್ತು ನಮಾಝ್ ನಂಥಹ ಪ್ರಾಥಮಿಕ ಆಚರಣೆಗಳ ಬಗ್ಗೆ ತರಬೇತಿ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಈ ಅಗತ್ಯಕ್ಕಾಗಿ ಕರಾವಳಿ ಜಿಲ್ಲೆಗಳಿಂದ ನುರಿತ ದೀನೀ ಬೋಧಕರನ್ನು ವರ್ಷಂಪ್ರತಿ ಈ ಕಡೆಗಳಿಗೆ ಕಳಿಹಿಸಲಾಗುತ್ತಿದೆ. ಈ ನಿಟ್ಟಿನಿಲ್ಲಿ ಪ್ರಸ ಕ್ತ ರಂಝಾನಿನಲ್ಲಿ ಸುಮಾರು 130 ಮಂದಿ ತರಬೇತಿ ಪಡೆದ ವಿದ್ವಾಂಸರನ್ನು ಆ ಕಡೆಗೆ ಕಳುಹಿಸಲಾಗಿದೆ. ವಸತಿ ಸೌಕರ್ಯವೂ ಸೇರಿದಂತೆ ಅತ್ಯಂತ ಕನಿಷ್ಠ ಮಟ್ಟದ ಜೀವನ ಸ್ಥಿತಿಯನ್ನು ಸಹಿಸಿಕೊಂಡು ‘ದಾಇ’ ಗಳು ಅಲ್ಲಿ ತಮ್ಮ ಉದಾತ್ತ ಸೇವೆಯನ್ನು ಅರ್ಪಿಸಲು ಮಂದೆ ಬರುವುದು ಒಂದು ದೊಡ್ಡ ತ್ಯಾಗವೇ ಆಗಿದೆ. ಈಯೆಲ್ಲ ಚಟುವಟಿಕೆಗಳಿಗೆ ಆರ್ಥಿಕ ಹಾಗೂ ನೈತಿಕ ಬೆಂಬಲವನ್ನು ಕೆಸಿಎಫ್ ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಮುಸ್ಲಿಮರು ಎದುರಿಸುತ್ತಿರುವ ಆರ್ಥಿಕ ದುಸ್ಥಿತಿ ಹಾಗೂ ಅಲ್ಲಿನ ಶೈಕ್ಷಣಿಕ ಹೀನಾಯತೆಯನ್ನು ಪ್ರತಿಬಿಂಬಿಸುವ ಸಾಕ್ಷ್ಯ ಚಿತ್ರವನ್ನು ಈ ವೇಳೆ ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ಮುಖಂಡ ಆದಂ ಮಂಜನಾಡಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಹಮೀದ್ ಸುಳ್ಯ, ಅಬೂಬಕ್ಕರ್ ಸಾಲೆತ್ತೂರು, ಲತೀಫ್ ಯೂನಿವರ್ಸಲ್ , ಕಾರ್ಯದರ್ಶಿ ಫಾರೂಕ್ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು.
ಮುಂಬೈ ತಾಜುಶ್ಶರೀಅಃ ಇದರ ಮೌಲಾನಾ ಅಬ್ದುಲ್ ಅಝೀಝ್ ರಝ್ವಿ ತಂಡದಿಂದ ನಅತೇ ಶರೀಫ್ ನಡೆಯಿತು
ಕೆಸಿಎಫ್ ಪ್ರಾಂತೀಯ ಕೋಶಾಧಿಕಾರಿ ಹನೀಫ್ ಬೆಳ್ಳಾರೆ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು.
Comments are closed.