ಮಂಗಳೂರು, ಜೂನ್ 24: ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 10 ದಿನಗಳ ಶಾಲಾ ಆರಂಭೋತ್ಸವದ ಕೊನೆಯ ದಿನದ ಅತಿಥಿ ನಾಡಿನ ಹಿರಿಯ ಚಿಂತಕ, ತತ್ವಜ್ಞಾನಿ ಲಕ್ಷ್ಮೀಶ ತೋಳ್ಪಾಡಿಯವರೊಂದಿಗೆ ಮಕ್ಕಳು ಹಾಗೂ ಶಿಕ್ಷಕರು ಅನೇಕ ತಾತ್ವಿಕ ವಿಚಾರಗಳ ಬಗ್ಗೆ ಸಂವಾದ ನಡೆಸಿದರು.
ಗದ್ದಲದ ನಂತರದ ಶಾಂತತೆಯ ಅನುಭವ ಕೋಪದಿಂದ ಶಾಂತತೆಗೆ ಬರುವ ದಾರಿ, ಹೇಗೆ ಇದೆಯೋ ಹಾಗೆ ನೋಡಬೇಕಾದ ಅಗತ್ಯ, ಒಳನೋಟ- ಮೇಲ್ನೋಟ ಇತ್ಯಾದಿಗಳ ಬಗ್ಗೆ ಆಳವಾಗಿ ಚರ್ಚೆ ನಡೆಸಿದರು. ಈ ಹಿನ್ನೆಲೆಯಲ್ಲಿ ತೋಳ್ಪಾಡಿಯವರನ್ನು ಕಂಡ ಬಗೆಯನ್ನು ವಿದ್ಯಾರ್ಥಿಗಳು ಅವರ ಸ್ವರೂಪ ಭಾವ ಭವಿಷ್ಯ ಚಿತ್ರ ದಲ್ಲಿ ರೇಖೆ, ಪ್ರತಿಮೆಗಳ ಮೂಲಕ ಬಿಂಬಿಸಿ, ಅವರಿಗೆ ಚಿತ್ರಗಳನ್ನು ಕಾಣಿಕೆಯಾಗಿ ಇತ್ತರು. ಚಿತ್ರದಲ್ಲಿ ಮೂಡಿರುವ ಕಲ್ಪನೆಗಳನ್ನು ಕಂಡು ತೋಳ್ಪಾಡಿಯವರು ಅಚ್ಚರಿ ವ್ಯಕ್ತಪಡಿಸಿದರು. ಇದರಿಂದ ವಿದ್ಯಾರ್ಥಿಗಳ ಸ್ವರೂಪವೂ ಗೊತ್ತಾಯ್ತು ಎಂದರು.
ಆರಂಭದಲ್ಲಿ ಖ್ಯಾತ ಸಾಹಿತಿ ಗುರುರಾಜಮಾರ್ಪಳ್ಳಿಯವರು ತೋಳ್ಪಾಡಿಯವರ ಪರಿಚಯ ಮಾಡಿದರು. ಪ್ರಾಂಶುಪಾಲೆ ಸುಮಂಗಲಾ ಸ್ವಾಗತಿಸಿದರು, ಸಂಸ್ಥೆಯ ನಿರ್ದೇಶಕರಾದ ಗೋಪಾಡ್ಕರ್ ವಂದಿಸಿದರು. ಈ ಸಂದರ್ಭದಲ್ಲಿ ಬೆಲ್ಜಿಯಂನ ಸಂಶೋಧಕ ಬಾಲಗಂಗಾಧರ್ ಯಸ್. ಅವರ ತಂಡದ ಫಿಲಿಪ್ಸ್ ಮತ್ತು ಪೀಚ್ ಉಪಸ್ಥಿತರಿದ್ದರು.
Comments are closed.