ಕರಾವಳಿ

ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ : ಬಟ್ಟೆ ಚೀಲ ವಿತರಿಸಲು ಮನಪಾ ನಿರ್ಧಾರ.

Pinterest LinkedIn Tumblr

mcc_meet_photo_1

ಮಂಗಳೂರು, ಜೂ.30: ರಾಜ್ಯ ಸರಕಾರದ ಅಧಿಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳ ಮೂಲಕ ಒಂದು ಲಕ್ಷ ಬಟ್ಟೆ ಚೀಲಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಹರಿನಾಥ್ ತಿಳಿಸಿದರು.

ಮನಪಾ ಸಾಮಾನ್ಯ ಸಭೆಯಲ್ಲಿ ಇಂದು ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಉಚಿತವಾಗಿ ವಿತರಿಸಲಾಗುವ ಬಟ್ಟೆ ಚೀಲಗಳನ್ನು ಅನಾವರಣಗೊಳಿಸಿ, ಅದನ್ನು ಉಪ ಮೇಯರ್, ಹಿರಿಯ ಸದಸ್ಯರು, ವಿಪಕ್ಷ ನಾಯಕರಿಗೆ ವಿತರಿಸಿದರು.

mcc_meet_photo_2 mcc_meet_photo_4 mcc_meet_photo_5

ಪ್ರಥಮ ಹಂತದಲ್ಲಿ ಸಾರ್ವಜನಿಕರಿಗಾಗಿ 15,000 ಬಟ್ಟೆ ಚೀಲಗಳನ್ನು ವಿತರಿಸಲು ಟೆಂಡರ್ ಮೂಲಕ ಖರೀದಿಸಲಾಗಿದೆ. ನಗರದ ನಾಲ್ಕು ಶಾಲೆಗಳ ಮೂಲಕ ಮಕ್ಕಳಿಂದ ಮನೆಗಳಿಗೆ ಈ ಚೀಲಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ನಗರದಲ್ಲಿ ಒಟ್ಟು 1 ಲಕ್ಷ ಚೀಲಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವ ಮೂಲಕ ಸ್ವಚ್ಛ ಮಂಗಳೂರಿಗೆ ಸಹಕರಿಸಬೇಕು ಎಂದು ಮೇಯರ್ ಈ ಸಂದರ್ಭ ಮನವಿ ಮಾಡಿದರು.

ಪ್ಲಾಸ್ಟಿಕ್ ನಿಷೇಧ ಹೋರ್ಡಿಂಗ್ ಹಾಗೂ ಫ್ಲೆಕ್ಸ್ಗಳಿಗೆ ಅನ್ವಯವಾಗುವುದಿಲ್ಲವೇ ಎಂದು ಸದಸ್ಯರಾದ ಸುಧೀರ್ ಶೆಟ್ಟಿ, ನವೀನ್ ಡಿಸೋಜ ಸೇರಿದಂತೆ ಅನೇಕ ಸದಸ್ಯರು ಸಭೆಯಲ್ಲಿ ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಮೇಯರ್ ಹರಿನಾಥ್, ಪ್ಲಾಸ್ಟಿಕ್ ಬ್ಯಾನರ್ ಹಾಗೂ ಫ್ಲೆಕ್ಸ್ಗಳ ಬಗ್ಗೆ ಹೈಕೋರ್ಟಿ‌ನಿಂದ ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದರು.

Comments are closed.