ಕರಾವಳಿ

ರಾಷ್ಟ್ರೀಕೃತ ಬ್ಯಾಂಕುಗಳಿಗೆ ಜುಲೈ ತಿಂಗಳಲ್ಲಿ 11 ದಿನ ರಜೆ

Pinterest LinkedIn Tumblr

banking-job

ಮುಂಬರುವ ಜುಲೈ ತಿಂಗಳಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ 11 ದಿನ ರಜೆಗಳಿವೆ. ಜುಲೈಯಲ್ಲಿ ಮೂರು ದಿನ -12,13 ಹಾಗೂ 29ರಂದು- ಬ್ಯಾಂಕ್ ಉದ್ಯೋಗಿಗಳ ಮುಷ್ಕರವಿದೆ. ವಾರದ ರಜೆಗಳ ಹೊರತಾಗಿ ರಮಝಾನ್ ಹಬ್ಬವೂ ಕೂಡಾ ಜುಲೈಯಲ್ಲಿದೆ. ಆದ್ದರಿಂದ ಗ್ರಾಹಕರು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವುದು ಸೂಕ್ತ.

ಒಂದೇ ತಿಂಗಳಿನಲ್ಲಿ ಇಷ್ಟೊಂದು ರಜೆಗಳು ಇರುವುದರಿಂದ ಬ್ಯಾಂಕಿಂಗ್ ವ್ಯವಹಾರ, ವಿಶೇಷವಾಗಿ ಚೆಕ್ ಕ್ಲಿಯರೆನ್ಸ್ ಹಾಗೂ ಆನ್’ಲೈನ್ ಕ್ಲಿಯರೆನ್ಸ್ ವಿಳಂಬವಾಗುವ ಸಾಧ್ಯತೆಗಳಿವೆ.

ಸಾಲ ಮಂಜೂರಾತಿ ಪ್ರಕ್ರಿಯೆ, ಡಿಮಾಂಡ್ ಡ್ರಾಫ್ಟ್, ಹಾಗೂ ನಗದು ಜಮಾವಣೆಯಂತಹ ಸೇವೆಗಳು ಕೂಡಾ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಏಟಿಎಮ್ ಯಂತ್ರಗಳಲ್ಲಿ ಹಣ ಜಮಾವಣೆ ಮಾಡುವ ಕೆಲಸ ಬಹುತೇಕ ಬ್ಯಾಂಕ್’ಗಳು ಖಾಸಗಿ ಸಂಸ್ಥೆಗಳಿಗೆ ವಹಿಸಿರುವುದರಿಂದ ಏಟಿಎಮ್’ಗಳಲ್ಲಿ ಯಾವುದೇ ಸಮಸ್ಯೆಯಾಗಲಾರದು.

Comments are closed.