ಉಡುಪಿ: ಇಲ್ಲಿನ ಕಡಲ ತೀರದಲ್ಲಿ ಕಡಲಕೊರೆತ ತೀವ್ರಗೊಂಡಿದೆ. ಮಲ್ಪೆ ಬೀಚ್ ನಲ್ಲಿ ಕಡಲ ಕೊರೆತಕ್ಕೆ ಆವರಣ ಗೋಡೆಯೇ ಕಡಲಪಾಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಮುದ್ರ ಬಿರುಸುಗೊಂಡಿದ್ದು ಮಲ್ಪೆ ಬೀಚ್ ಬಳಿ ಈ ಬಾರಿಯೂ ಕಡಲಕೊರೆತ ಕಂಡುಬಂದಿದೆ.
ಈ ಸಲ ಬೀಚ್ ನ ಉತ್ತರ ಭಾಗದಲ್ಲಿ ಬಹು ಪ್ರಮಾಣದಲ್ಲಿ ಕಡಲ್ಕೊರೆತ ಕಂಡು ಬಂದಿದೆ. ಬೀಚ್ ನಿಂದ ಪುಟಾರ್ಡ್ ಗೆಸ್ಟ್ ಹೌಸ್ ತನಕ ಸುಮಾರಿ ೧ಕಿ.ಮೀ ನಷ್ಟು ಉದ್ದಕ್ಕೆ ಕಡಲಕೊರೆತ ಉಂಟಾಗಿದೆ. ಹೊಸದಾಗಿ ನಿರ್ಮಿಸಲಾದ ಇಂಟರ್ ಲಾಕ್ ರಸ್ತೆ ಕುಸಿಯುವ ಭೀತಿಯಲ್ಲಿದ್ದು ಈಗಾಗಲೇ ಆವರಣಗೋಡೆ ಕಡಲಪಾಲಾಗಿದೆ.
ಈ ಬಗ್ಗೆ ಸಂಬಂದಪಟ್ಟವರು ಶೀಘ್ರ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳಬೇಕಿದೆ.
Comments are closed.