ಕರಾವಳಿ

ನಾಳೆ ನಾಡಿನಾದ್ಯಂತ ಈದುಲ್ ಫಿತ್ರ್ : ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬ – ನಮಾಝ್ ವೇಳಾ ಪಟ್ಟಿ ಬಿಡುಗಡೆ

Pinterest LinkedIn Tumblr

ramjan_day_photo

ಮಂಗಳೂರು, ಜು.5: ಸೋಮವಾರ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಬುಧವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲು ದ.ಕ ಜಿಲ್ಲಾ ಖಾಝಿ ಮೌಲಾನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆಂದು ಕೇಂದ್ರ ಜುಮಾ ಮಸೀದಿಯ ಖಜಾಂಜಿ ಎಸ್.ಎಂ ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಿನ್ನೆ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಜು.6ರಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುವುದು ಎಂದು ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲಾ ಖಾಝಿ ಅಲ್‌ ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬ – “ಈದುಲ್ ಫಿತ್ರ್”

ಈದುಲ್ ಫಿತ್ರ್ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬವಾಗಿದೆ. ಎಲ್ಲಾ ಧರ್ಮಿಯ ಸಹೋದರರ ನಡುವೆ ಪ್ರೀತಿ,ವಿಶ್ವಾಸ,ಭ್ರಾತೃತ್ವ ಸುದೃಢವಾಗಲು, ನಮ್ಮ ಸೌಹಾರ್ದತೆಯ ಪರಂಪರೆಯನ್ನು ಇನ್ನಷ್ಟು ಬಲಪಡಿಸಲು ಈದ್ ನಮಗೆ ಪ್ರೇರಣೆಯಾಗಲಿ ಎಂದು ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಒಂದು ತಿಂಗಳ ಕಠಿಣ ಉಪವಾಸದ ಸಮಾರೋಪವಾಗಿದೆ ಈದುಲ್ ಫಿತ್ರ್. ಹಸಿವು-ದಾಹ, ಲೈಂಗಿಕ ಆಸಕ್ತಿ, ನಿದ್ದೆ ಇವೆಲ್ಲವುಗಳ ಮೇಲಿನ ನಿಯಂತ್ರಣ ಉಪವಾಸದ ಉದ್ದೇಶವಾಗಿದೆ. ಸ್ವಚ್ಛ ನಾಲಗೆ ಮತ್ತು ಸ್ವಚ್ಛ ಮನಸ್ಸು ಉಪವಾಸದ ಗುರಿಯಾಗಿದೆ. ವಿವೇಕ, ಸಹನೆ, ಉಪವಾಸದ ಪಾಠಗಳಾಗಿವೆ. ದುರ್ಬಲರ ಮತ್ತು ಹಕ್ಕು ವಂಚಿತರ ದುಃಖ ಮತ್ತು ಬವಣೆಗಳನ್ನು ಅರಿಯುವ ಸಂದರ್ಭವೂ ಆಗಿದೆ.

ಒಂದು ತಿಂಗಳ ಉಪವಾಸದ ತರಬೇತಿಯ ಕೊನೆಯಲ್ಲಿ ಆಚರಿಸಲ್ಪಡುವ ಈದುಲ್ ಫಿತ್ರ್ ಬದುಕನ್ನು ಸುಧಾರಿಸಲು ಮತ್ತು ಕ್ರಮಬದ್ಧಗೊಳಿಸಲು ನಮಗೆ ಪ್ರೇರಣೆಯಾಗಲಿ ಎಂದು ತಿಳಿಸಿದ್ದಾರೆ.

ಈದ್ ನಮ್ಮೆಲ್ಲರ ಹೃದಯಗಳನ್ನು ಜೋಡಿಸಲಿ. ನಮ್ಮ ನಾಡಿನ ಉತ್ತಮ ನಾಳೆಗಾಗಿ, ನೈತಿಕ ಸಮಾಜದ ನಿರ್ಮಾಣಕ್ಕಾಗಿ ಒಂದುಗೂಡಿ ಕ್ರಿಯಾಶೀಲರಾಗಲು ಈದ್ ನಮಗೆ ಶಕ್ತಿ ನೀಡಲಿ. ಪ್ರೀತಿ ಬತ್ತಿ ಹೋಗುತ್ತಿರುವ ಜಗತ್ತಿನಲ್ಲಿ ಈದುಲ್ ಫಿತ್ರ್ ಪ್ರೀತಿಯ, ಭ್ರಾತೃತ್ವದ ಅಲೆಗಳನ್ನು ಸೃಷ್ಟಿಸಲಿ. ದೇವನ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ತಿಳಿಸಿದ ಅವರು ದ.ಕ. ಜಿಲ್ಲೆಯ ಸಮಸ್ತ ಜನತೆಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಬುಧವಾರ ವಿವಿಧ ಮಸೀದಿಗಳಲ್ಲಿ ಈದುಲ್ ಫಿತರ್ ವಿಶೇಷ ನಮಾಝ್ ನಡೆಯಲಿದ್ದು, ನಮಾಝ್ ವೇಳಾ ಪಟ್ಟಿ ಈ ಕೆಳಗಿನಂತಿದೆ.

ಈದುಲ್ ಫಿತ್ರ್ ನಮಾಝ್ ವೇಳಾ ಪಟ್ಟಿ : ದ.ಕ ಜಿಲ್ಲಾ ಖಾಝಿ ಘೋಷಣೆ

ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆಗೆ ಈದ್ ನಮಾಝ್ ನಡೆಯಲಿದೆ. ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಗ್ಗೆ 9ಕ್ಕೆ ಈದ್ ನಮಾಝ್ ನಡೆಯಲಿದೆ. ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು: 9, ಕೇಂದ್ರ ಶಾಫಿ ಜುಮಾ ಮಸೀದಿ ಮುಲ್ಕಿ: 8:45, ಕದಿಕೆ ಕೆಂದ್ರ ಜುಮಾ ಮಸೀದಿ: 8:30, ಮುಕ್ಕ ಜುಮಾ ಮಸೀದಿ 8:15, ಅಲ್ ಖುಬಾ ಜುಮಾ ಮಸೀದಿ ಕೊಲ್ನಾಡು: 9, ಮುಲ್ಕಿ ಅಂಗರಗುಡ್ಡೆ ಜುಮಾ ಮಸೀದಿ 8:30 ತೋಕೂರು ಅನಫಿ ಜುಮಾ ಮಸೀದಿ 8:30.

ಪುತ್ತೂರು ಕೇಂದ್ರ ಜುಮಾ ಮಸೀದಿ- ಬೆಳಿಗ್ಗೆ 8:30, ಪುತ್ತೂರು ಬದ್ರಿಯಾ ಜುಮಾ ಮಸೀದಿ-8:40, ಬಪ್ಪಳಿಗೆ ಜುಮಾ ಮಸೀದಿ-8:30, ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ-8 ಗಂಟೆಗೆ. ಸಂಟ್ಯಾರ್ ಜುಮಾ ಮಸೀದಿ-8 ಗಂಟೆಗೆ, ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಸಲಫಿ ಮಸೀದಿ ಬೆಳಿಗ್ಗೆ 6:30, ಗ್ರಾಮಾಂತರದ ಬಹುತೇಕ ಮಸೀದಿಗಳಲ್ಲಿ ಬೆಳಿಗ್ಗೆ 9ಗಂಟೆಗೆ ಈದ್ ನಮಾಝ್ ನಡೆಯಲಿರುವುದು

ನಿಮ್ರಾ ಜುಮಾ ಮಸೀದಿ ಮುಕ್ಕಚ್ಚೇರಿ-ಬೆಳಗ್ಗೆ 7:30, ಕೋಡಿಜಾಲ್: ರಿಫಾಯಿ ಜುಮಾ ಮಸ್ಜಿದ್-ಬೆಳಗ್ಗೆ 8:30 ತೊಕ್ಕೊಟ್ಟು: ಮಸ್ಜಿದ್ ದಾರುಸ್ಸಲಾಮ್-ಬೆಳಗ್ಗೆ 7:30 ಅಜ್ಜಿನಡ್ಕ: ಬೈತುಲ್ಲಾಹ್ ಸಲಫಿ ಮಸ್ಜಿದ್-ಬೆಳಗ್ಗೆ 7:45 ಅಜಿಲಮೊಗರು ಜುಮಾ ಮಸೀದಿ-ಬೆಳಗ್ಗೆ 9 ಪುತ್ತೂರು ಕೇಂದ್ರ ಜುಮಾ ಮಸೀದಿ-ಬೆಳಗ್ಗೆ 8:30 ಪುತ್ತೂರು ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 9 ಸಾಲ್ಮರ ಸೈಯದ್ ಮಲೆ ಜುಮಾ ಮಸೀದಿ-ಬೆಳಗ್ಗೆ 8:30 ಕಲ್ಲೇಗ ಜುಮಾ ಮಸೀದಿ-ಬೆಳಗ್ಗೆ 8:30 ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿ-ಬೆಳಗ್ಗೆ 8 ಕೂರ್ನಡ್ಕ ಫೀರ್ ಮೊಹಲ್ಲಾ ಮಸೀದಿ-ಬೆಳಗ್ಗೆ 7 ಪರ್ಲಡ್ಕ ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 9 ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8 ಸಂಟ್ಯಾರು ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 8 ಸಲಫಿ ಜುಮಾ ಮಸೀದಿ ಎಪಿಎಂಸಿ ರಸ್ತೆ-ಬೆಳಗ್ಗೆ 6:45

ಬದ್ರಿಯಾ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ- ಬೆಳಗ್ಗೆ 8:30 ನೂರುದ್ದೀನ್ ಜುಮಾ ಮಸೀದಿ ಬೋಗೊಡಿ-ಬೆಳಗ್ಗೆ 8:30 ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ-ಬೆಳಗ್ಗೆ 8:30 ಕಕ್ಕಿಂಜೆ ಜುಮಾ ಮಸೀದಿ-ಬೆಳಗ್ಗೆ 8:15

ಈದುಲ್ ಫಿತ್ರ್ ನಮಾಝ್ ವೇಳಾ ಪಟ್ಟಿ :ಉಡುಪಿ ಜಿಲ್ಲಾ ಖಾಝಿ ಘೋಷಣೆ

ಉಡುಪಿ ಉಡುಪಿ ದೊಡ್ಡಣಗುಡ್ಡೆ ರಹ್ಮಾನಿಯಾ ಜುಮಾ ಮಸೀದಿ-ಬೆಳಗ್ಗೆ 8:15 ಆತ್ರಾಡಿ ಜುಮಾ ಮಸೀದಿ-ಬೆಳಗ್ಗೆ 8:30 ಕಾರ್ಕಳ ಜಾಮಿಯ ಮಸೀದಿ-ಬೆಳಗ್ಗೆ 9 ಕಾರ್ಕಳ ತಾಲೂಕು ಕಚೇರಿ ಮದೀನಾ ಮಸೀದಿ-ಬೆಳಗ್ಗೆ 8 ಆನೆಕೆರೆ ಮಸ್ಜಿದುಲ್ ರಯ್ಯಿನ್ ಜುಮಾ ಮಸೀದಿ- ಬೆಳಗ್ಗ್ಗೆ 8:45 ಸಾಣೂರು ಜುಮಾ ಮಸೀದಿ-ಬೆಳಗ್ಗೆ 8:30

ಬೈಲೂರು ಜಾಮಿಯ ಮಸೀದಿ-ಬೆಳಗ್ಗೆ 9 ಬೈಲೂರು ತ್ವಾಹಾ ಜುಮಾ ಮಸೀದಿ-ಬೆಳಗ್ಗೆ 8:30 ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿ-ಬೆಳಗ್ಗೆ 8:30 ಎಣ್ಣೆಹೊಳೆ ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 9 ಬಜಗೋಳಿ ನೂರುಲ್ ಹುದಾ ಮಸೀದಿ-ಬೆಳಗ್ಗೆ 8:30 ನೆಲ್ಲಿಕಾರ್ ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8.:30 ಪುಲಿಕೇರಿ ಜುಮಾ ಮಸೀದಿ-ಬೆಳಗ್ಗೆ 7:30 ಅಜೆಕಾರು ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 9 ಗಂಟೆ ಮಿಯ್ಯರು ಸುನ್ನಿ ಜಾಮಿಯ ಮಸೀದಿ-ಬೆಳಗ್ಗೆ 9 ಗಂಟೆ

ಹೊಸ್ಮಾರು ಮುಹಿಯುದ್ದೀನ್ ಜುಮಾ ಮಸೀದಿ-ಬೆಳಗ್ಗೆ 8:30 ಹೊಸ್ಮಾರು ರಝಾ ಜುಮಾ ಮಸೀದಿ-ಬೆಳಗ್ಗೆ 9 ಶಿರ್ಲಾಲು ಜುಮಾ ಮಸೀದಿ-ಬೆಳಗ್ಗೆ 9 ರೆಂಜಾಳ ಜುಮಾ ಮಸೀದಿ-ಬೆಳಗ್ಗೆ 8:30 ಮುನಿಯಾಲು ರಹ್ಮಾನಿಯಾ ಜುಮಾ ಮಸೀದಿ-ಬೆಳಗ್ಗ್ಗೆೆ 9 ನಿಟ್ಟೆ ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 8:30 ಕುಕ್ಕುಂದೂರು ಜುಮಾ ಮಸೀದಿ-ಬೆಳಗ್ಗೆ 8:30 ಕಂಪಾನ್ ಬದ್ರಿಯಾ ಜುಮಾ ಮಸೀದಿ-ಬೆಳಗ್ಗೆ 8:30

( ಉಡುಪಿ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ, ಉಡುಪಿ ಅಂಜುಮಾನ್ ಮಸೀದಿಯಲ್ಲಿ ಬೆಳಗ್ಗೆ 9:15 ಹಾಗೂ ಇಂದ್ರಾಳಿ ನೂರಾನಿ ಮಸೀದಿಯಲ್ಲಿ ಬೆಳಗ್ಗೆ 7:45ಕ್ಕೆ ಈದ್ ನಮಾಝ್ ನಡೆಯಲಿದೆ. ಉಡುಪಿಯ ನಾಯರ್‍ಕೆರೆ, ಉಪ್ಪಿನಕೋಟೆ, ತೋನ್ಸೆ ಜದೀದ್, ಕಟಪಾಡಿ, ಮಣಿಪುರ, ಕೊಳಂಬೆ ಮದೀನಾ, ಇಂದಿರಾನಗರ, ಸಾಸ್ತಾನ ಖ್ವುತುಲ್ ಇಸ್ಲಾಮ್, ಕನ್ನಂಗಾರ್, ಉದ್ಯಾವರ ಸಂಪಿಗೆನಗರ ಖಾದಿಮ್ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ ಈದ್ ನಮಾಝ್ ನಡೆಯಲಿದೆ. ಆದಿಉಡುಪಿ, ಸಂತೋಷ್ ನಗರ, ಕಾಪು ಕೊಂಬಗುಡ್ಡೆ, ಕೋಡಿಬೆಂಗ್ರೆ ಜಾಮೀಯ, ಗುಜ್ಜರಬೆಟ್ಟು ಮೊಹಿಯುದ್ದೀನ್, ಹೈಕಾಡಿ, ಮಾವಿನಕಟ್ಟೆ ಅಲ್‍ಮಾರೂಫ್ ಜುಮಾ ಮಸೀದಿಯಲ್ಲಿ ಬೆಳಗ್ಗೆ 8ಗಂಟೆ ಈದ್ ನಮಾಝ್ ಜರಗಲಿದೆ. ಮಣಿಪಾಲ ಜುಮಾ ಮಸೀದಿ ಹಾಗೂ ನೇಜಾರು ಉಮ್ಮೆ ಆಯಿಷಾ ಮಸೀದಿಯಲ್ಲಿ ಬೆಳಗ್ಗೆ 7:30ಕ್ಕೆ ಮತ್ತು ಮಲ್ಪೆ ಅಬೂಬಕರ್ ಸಿದ್ದೀಕ್, ಮಲ್ಪೆ ಮದೀನ, ಕೊಡವೂರು ಕಲ್ಮತ್, ಕಾಪು ಪೊಲಿಪು, ಮೂಳೂರು ಜುಮಾ, ಸಾಸ್ತಾನ ಗುಂಡ್ಮಿ ಜುಮಾ ಮಸೀದಿಯಲ್ಲಿ ಬೆಳಗ್ಗೆ 8:45ಕ್ಕೆ ನಮಾಝ್ ನಿರ್ವಹಿಸಲಾಗುತ್ತದೆ. ಹೂಡೆ ಖದೀಮ್, ನೇಜಾರು ಜಾಮೀಯ, ದೊಡ್ಡಣಗುಡ್ಡೆ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಬೆಳಗ್ಗೆ 8:15ಕ್ಕೆ, ಬಾರಕೂರು ಮಾಲಿಕ್ ದಿನಾರ್ ಜುಮಾ ಮಸೀದಿ, ಎರ್ಮಾಳ್, ಪಡುಬಿದ್ರಿ ಜುಮಾ ಮಸೀದಿಯಲ್ಲಿ ಬೆಳಗ್ಗೆ 9ಗಂಟೆ ಮತ್ತು ಪಲಿಮಾರು ಜುಮಾ ಮಸೀದಿಯಲ್ಲಿ ಬೆಳಗ್ಗೆ 9:30ಕ್ಕೆ ನಮಾಝ್ ನಡೆಯಲಿದೆ. ಕಾರ್ಕಳ ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 9ಗಂಟೆ, ತಾಲೂಕು ಕಚೇರಿ ಮದೀನ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆ, ಸಾಣೂರು ಜುಮಾ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ, ಬೈಲೂರು ಜಾಮೀಯ ಮಸೀದಿಯಲ್ಲಿ ಬೆಳಗ್ಗೆ 9 ಗಂಟೆ, ನಿಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ ಈದ್ ವಿಶೇಷ ನಮಾಝ್ ಜರಗಲಿದೆ. ಜಾಮಿಯಾ ಮಸ್ಜಿದ್ ಎರ್ಮಾಳು-ಹನಫೀ ಜಮಾತ್ ಬೆಳಿಗ್ಗೆ 8ಗಂಟೆಗೆ, ಶಾಫೀ ಜಮಾತ್ ಬೆಳಿಗ್ಗೆ 8:30ಕ್ಕೆ.)

Comments are closed.