ಮಂಗಳೂರು / ಉಳ್ಳಾಲ: ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವತಿಯೊಬ್ಬಳು ರದ್ದಾಂತ ನಡೆಸಿ ಕೆಲ ಕಾಲ ಸ್ಥಳೀಯ ಜನರಿಗೆ ಪುಕ್ಕಟೆ ಮನೋರಂಜನೆ ನೀಡಿದ ಘಟನೆ ದೇರಳಕಟ್ಟೆ ಸಮೀಪದ ಕುತ್ತಾರು ಬಳಿ ಸೋಮವಾರ ಸಂಜೆ ನಡೆದಿದೆ.
ಯುವತಿಯೊಬ್ಬಳು ಕುತ್ತಾರು ಜಂಕ್ಷನ್‌ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ನಶೆ ಏರಿಸಿಕೊಂಡಂತೆ ವರ್ತಿಸುತ್ತ, ಸಿಕ್ಕಸಿಕ್ಕವರಿಗೆ ಬೈದಾಡುತ್ತಾ ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಾದ್ಧಾಂತ ಮಾಡುವ ಮೂಲಕ ನಾಗರಿಕರು ಮತ್ತು ಪೊಲೀಸರನ್ನು ಈ ಯುವತಿ ಬೆಸ್ತು ಬೀಳಿಸಿದ್ದಾಳೆ.
ಮಾತ್ರವಲ್ಲದೇ ಮುಡಿಪು ಐಟಿ ಕಂಪೆನಿಯಲ್ಲಿ ಎಂಜಿನಿಯರಿಂಗ್ ಕೆಲಸದಲ್ಲಿದ್ದೇನೆ ಎಂದು ಹೇಳಿಕೊಂಡು, ಸಾರ್ವಜನಿಕರನ್ನು ನಿಂದಿಸುತ್ತಿ ದ್ದ ಆಕೆಯನ್ನು ಉಳ್ಳಾಲ ಪೊಲೀಸರ ಸಹಾಯದಿಂದ ಪೊಲೀಸ್ ವಾಹನದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ಮಾನಸಿಕ ರೋಗಿಗಳ ವಿಭಾಗಕ್ಕೆ ದಾಖಲಿಸಿಲಾಗಿದೆ.
ಸುಮಾರು 28 ವಯಸ್ಸಿನ ಇಂಜಿನಿಯರಿಂಗ್ ಪದವಿಧರೆಯಾಗಿರುವ ಯುವತಿ ಜೀನ್ಸ್ ಪ್ಯಾಂಟ್ ಜಾಕೆಟ್ ಹಾಕಿ ಬಂದು ಕುತ್ತಾರು ರಾಜರಾಜೇಶ್ವರೀ ದೇವಸ್ಥಾನದ ಬಳಿ ಸಿಗರೇಟ್ ಸೇದುತ್ತಾ ಸ್ಥಳೀಯವಾಗಿ ಬೊಬ್ಬೆ ಹಾಕಿಕೊಂಡು ಮಾತನಾಡುತ್ತ ದೇವಸ್ಥಾನದ ಒಳಗೆ ಬರಲು ಯತ್ನಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಈಕೆಯ ರಾದ್ದಾಂತಕ್ಕೆ ಜನರು ಸೇರಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದಾಗ ಆಂಗ್ಲ ಭಾಷೆಯಲ್ಲಿ ಪೊಲೀಸರನ್ನು ನಿಂದಿಸಲು ಪ್ರಾರಂಬಿಸಿದ್ದು, ತನನ್ನು ಮುಟ್ಟಿದರೆ ಕೇಸ್ ಹಾಕುತ್ತೇನೆ, ಕೋರ್ಟ್ ಮೆಟ್ಟಿಲು ಹತ್ತಿಸುತ್ತೇನೆ ಎಂದು ಪೊಲೀಸರನ್ನೇ ಗದರಿಸಲು ಪ್ರಾರಂಭಿಸಿದ್ದಾಳೆ ಎನ್ನಾಲಾಗಿದೆ.
ದೇವಸ್ಥಾನದ ಸುತ್ತಬ ತಿರುಗಾಡುತ್ತಿದ್ದ ಯುವತಿಯನ್ನು ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯರು ಸಂತೈಸಿದ್ದು, ಈ ಸಂದರ್ಭದಲ್ಲಿ ಆಕೆ ಊಟ ಕೇಳಿದ್ದು, ದೇವಸ್ಥಾನದಲ್ಲಿ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಉಳಿದಿದ್ದ ಆಹಾರವನ್ನು ನೀಡಿ ಆಕೆಯ ಮುಖಕ್ಕೆ ನೀರು ಹಾಕಿ ಸಂತೈಸಿದರು. ಈ ಸಂದರ್ಭದಲ್ಲಿ ಯುವತಿಯಿಂದ ಮಾಹಿತಿ ಪಡೆದು ಆಕೆಯ ಮನೆಗೆ ಮಾಹಿತಿ ನೀಡಿದ್ದು, ಮನೆಯಲ್ಲಿ ಆಕೆ ಕೆಲ ದಿನಗಳಿಂದ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವಿಚಾರ ತಿಳಳಿಸಿದರು ಎನ್ನಲಾಗಿದೆ. ಪೊಲೀಸರು ಯುವತಿಯನ್ನು ಪಿಸಿಆರ್ ವಾಹನದಲ್ಲಿ ಕುಳ್ಳಿರಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮನೆಯವರಿಗೆ ಹಸ್ತಾಂತರಿಸಿದರೆ ಎನ್ನಲಾಗಿದೆ.
ಮಾದಕ ಪದಾರ್ಥ ಸೇವಿಸಿ ಗಲಾಟೆ : ಸಂಶಯ
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಡ್ರಗ್ಸ್, ಸೇರಿದಂತೆ ಮಾದಕ ಪದಾರ್ಥಗಳನ್ನು ಸೇವಿಸುವ ವಿಚಾರದಲ್ಲಿ ಸುದ್ಧಿಗಳನ್ನು ನೋಡಿ ಈ ಯುವತಿಯೂ ಮಾದಕ ಪದಾರ್ಥ ಸೇವಿಸಿ ಗಲಾಟೆ ಮಾಡುತ್ತಿದ್ದಾಳೆ ಎಂದು ಸುದ್ಧಿಗಳು ಹರಿಯಲಾರಂಬಿಸಿತು.
ಈಕೆಯ ಮನೆಯವರಿಗೆ ಮಾಹಿತಿ ನೀಡಿದಾಗ ಈಕೆ ಮಾನಸಿಕವಾಗಿ ಚಿಕಿತ್ಸೆ ಪಡೆಯುತ್ತಿದ್ದಳು ಎನ್ನುವ ವಿಚಾರ ಆಕೆಯ ತಾಯಿ ಪೊಲೀಸರಿಗೆ ತಿಳಿಸಿದರೆನ್ನಲಾಗಿದ್ದು, ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ತಾನೂ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದೆ ಎಂದು ರಾದ್ದಾಂತ ಸಂದರ್ಭದಲ್ಲಿ ತಿಳಿಸುತ್ತಿದ್ದಳೆಂದು ತಿಳಿದು ಬಂದಿದೆ.ಕೊನೆಗೂ ಯುವತಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆಸ್ಪತ್ರೆಯಲ್ಲೂ ಆಕೆ ವಿಚಿತ್ರವಾಗಿ ಆಡುತ್ತಿದ್ದಳೆಂದು ನೆರೆದವರು ಹೇಳಿದ್ದಾರೆ.
Comments are closed.