ಅಂತರಾಷ್ಟ್ರೀಯ

ಸಿಗರೇಟ್ ಸೇದುದರಿಂದ ಲೈಂಗಿಕ ಶಕ್ತಿ ಕುಗ್ಗುತ್ತೆ..! ಪುರುಷರ ವೀರ್ಯವು ವಿಕಾರಗೊಳ್ಳುತ್ತೆ…ಇನ್ನೇನು ಪರಿಣಾಮ ಬೀಳುತ್ತೆ…ಈ ವರದಿ ಓದಿ…

Pinterest LinkedIn Tumblr

smoking

ನವದೆಹಲಿ: ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶವನ್ನು ಸಿಗರೇಟ್ ಪ್ಯಾಕ್’ನಲ್ಲೇ ಹಾಕಿ ಎಚ್ಚರಿಸಲಾಗುತ್ತದೆ. ಆದರೆ, ಹೇಗಿದ್ದರೂ ಸಾಯುತ್ತೇವೆ… ಸಿಗರೇಟ್ ಸೇದಿ ಸತ್ತರೆ ಆಯ್ತು ಬಿಡಿ ಎಂಬ ಉಡಾಫೆ ಮನೋಭಾವ ಧೂಮಪಾನಿಗಳಲ್ಲಿರುತ್ತದೆ. ಆದರೆ, ಸಿಗರೇಟ್’ನಿಂದ ಸಾವಿಗಿಂತಲೂ ನಿಮಗೆ ಯಾತನೆ ಎನಿಸುವ ಅಪಾಯಗಳಿರುತ್ತವೆ. ಜೀವನಪೂರ್ತಿ ನೀವು ತಲೆತಗ್ಗಿಸುವಂತಾಗುತ್ತದೆ. ಸಿಗರೇಟ್ ಹಾಗೂ ಮಾದಕವಸ್ತು ಸೇವನೆಯಿಂದ ಪುರುಷ ಮತ್ತು ಮಹಿಳೆ ಇಬ್ಬರ ಸಂತಾನೋತ್ಪನ್ನ ಶಕ್ತಿ ಕುಗ್ಗುತ್ತದೆ.

ಹೆಚ್ಚು ಸಿಗರೇಟ್ ಸೇದುವವರ ಪುರುಷರ ವೀರ್ಯವು ವಿಕಾರಗೊಳ್ಳುತ್ತದೆ. ಅಂಡಾಣುವನ್ನು ಸೇರುವಷ್ಟು ಶಕ್ತಿ ಆ ವೀರ್ಯಕ್ಕಿರುವುದಿಲ್ಲ. ವೀರ್ಯ ಪ್ರಮಾಣ ಕಡಿಮೆಯಾಗುತ್ತದೆ. ವೀರ್ಯದ ಅಕಾರ ವಿರೂಪಗೊಳ್ಳುತ್ತದೆ. ಅಂಡಾಣುವನ್ನು ಸೇರಿದರೂ ಅದರಿಂದ ಅಗುವ ಗರ್ಭಧಾರಣೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ನಿರ್ವೀರ್ಯ ಪುರುಷರ ಪೈಕಿ ಬಹುತೇಕ ಮಂದಿ ಧೂಮಪಾನಿಗಳಾಗಿದ್ದವರೆಂಬುದು ಅನೇಕ ಸಮೀಕ್ಷೆಗಳಿಂದ ದೃಢಪಟ್ಟಿದೆ. ಹೀಗಾಗಿ, ಧೂಮಪಾನವು ಮನುಷ್ಯನ ದೈಹಿಕ ಆರೋಗ್ಯವನ್ನು ಹಾಳು ಮಾಡುವುದಷ್ಟೇ ಅಲ್ಲ, ಆತನ ಬಾಳನ್ನೇ ನರಕವಾಗಿಸುತ್ತದೆ.

ಇನ್ನು, ಮಹಿಳೆಯರಿಗೂ ಈ ಧೂಮಪಾನ ಇದೇ ದುಷ್ಪರಿಣಾಮ ಬೀರುತ್ತದೆ. ಅವರ ಸಂತಾನೋತ್ಪನ್ನ ಶಕ್ತಿಯೂ ಕುಂಠಿತಗೊಳ್ಳುತ್ತದೆ.

Comments are closed.