ಕರಾವಳಿ

ಮಲ್ಪೆ ಬೀಚ್; ಕಡಲ ಧೈತ್ಯ ಅಬ್ಬರ; ಬೃಹತ್ ಗಾತ್ರದ ಅಲೆಗಳಿಗೆ ರಸ್ತೆ, ಸೇತುವೆ ಮಾಯ

Pinterest LinkedIn Tumblr

ಉಡುಪಿ: ಹಿಂದೆಂದೂ ಕಾಣದ ರೀತಿಯಲ್ಲಿ ಮಲ್ಪೆ ಬೀಚ್ ನಲ್ಲಿ ಕಡಲಕೊರೆತ ಉಂತಾಗಿದೆ. ಬೃಹತ್ ಗಾತ್ರದ ಅಲೆಗಳಿಗೆ ಸಂಪರ್ಕ ಸೇತುವೆ ಹಾಗೂ ಇಂಟರ್ ಲಾಕ್ ರಸ್ತೆ ಆಹುತಿಯಾಗಿದೆ.

Udupi_Malpe_Kadalkoretha (2) Udupi_Malpe_Kadalkoretha (5) Udupi_Malpe_Kadalkoretha (3) Udupi_Malpe_Kadalkoretha (6) Udupi_Malpe_Kadalkoretha (4) Udupi_Malpe_Kadalkoretha (1)

ಮಲ್ಪೆ ಬೀಚ್ ನ ಉತ್ತರ ಭಾಗದಲ್ಲಿ ಸಂಪರ್ಕ್ಜಕ್ಕಾಗಿ ಇತ್ತೀಚಿಗೆ ಸೇತುವೆ ಹಾಗೂ 10 ಲಕ್ಷರೂ ವೆಚ್ಚದ ಇಂಟರ್ ಲಾಕ್ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿತ್ತು. ಈ ರಸ್ತೆ ಸುನಾಮಿ ರೀತಿಯಲ್ಲಿ ದಡಕ್ಕೆ ಅಪ್ಪಲಿಸುವ ಅಲೆಗಳಿಗೆ ಆಹುತಿಯಾಗಿದೆ.

ಮಲ್ಪೆ ಬೀಚ್ ನಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿರುವ ಕಡಲ ಕೊರೆತ ಉಗ್ರ ಸ್ವರೂಪ ತಾಳಿದ್ದು ಅಪಾಯದಲ್ಲಿದ್ದ ಇಂಟರ್ ಲಾಕ್ ರಸ್ತೆ ಕಡಲಪಾಲಾಗಿದೆ. ಈ ಮೂಲಕ ಜನರು ಸಂಪರ್ಕ ಕಳೆದು ಕೊಳ್ಳುವಂತಾಗಿದೆ. ಬೃಹತ್ ಅಲೆಗಳ ಅಬ್ಬರವನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಆದರೆ ನೀರಿಗೆ ಇಳಿಯದಂತೆ ಪ್ರವಾಸಿಗರನ್ನು ಎಚ್ಚರಿಸಲಾಗುತ್ತಿದೆ. ಈಗಾಗಲೇ ಗಾಳಿಗೆ ಮಲ್ಪೆ ಬೀಚ್ ನಲ್ಲಿ ಹಾಕಲಾದ ಹಟ್ ಗಳು ಹಾರಿ ಹೋಗಿದ್ದು ಉಗ್ರ ಸ್ವರೂಪದ ಅಲೆಗಳು ಕಡಲಿನಿಂದ ಮೇಲ್ ಭಾಗಕ್ಕೆ ಬರುತ್ತಿದೆ. ಈಗಾಗಲೇ ಬೀಚ್ ಬದಿಯ ಅಂಗಡಿಗಳಿಗೂ ನೀರು ನುಗ್ಗುತ್ತಿದ್ದು ಅಂಗಡಿ ಮಾತ್ರವಲ್ಲದೇ ಕಡಲ ತಡಿಯ ನಿವಾಸಿಗಳೂ ಆತಂಕದಲ್ಲಿದ್ದಾರೆ.

ಇದನ್ನೂ ಓದಿರಿ:

 

ಮಲ್ಪೆ ಬೀಚಿನಲ್ಲಿ ಕಡಲ್ಕೊರೆತ; ಆವರಣಗೋಡೆ ಕಡಲಪಾಲು; ಇಂಟರ್ಲಾಕ್ ರಸ್ತೆ ಅಪಾಯದಲ್ಲಿ

Comments are closed.