ಉಡುಪಿ: ಕುಮಾರಿ ಸುಚಿತ್ರ, ನಿಟ್ಟೂರು, ಇವರು ಇತ್ತೀಚೆಗೆ ವಿಪರೀತ ಸುರಿದ ಮಳೆಯಿಂದ ನೆರೆಯಲ್ಲಿ ಮೃತಪಟ್ಟಿದ್ದು ಇದರ ಪರಿಹಾರವಾಗಿ ಪ್ರಾಕೃತಿಕ ವಿಕೋಪದ ನಿಧಿಯಿಂದ ಮಂಜೂರಾದ ರೂ.೪ ಲಕ್ಷದ ಚೆಕ್ಕನ್ನು ಸಚಿವ ಪ್ರಮೋದ್ ಮಧ್ವರಾಜ್‌ರವರು ತಮ್ಮ ಕಛೇರಿಯಲ್ಲಿ ಸಂತ್ರಸ್ತರ ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಜನಾರ್ಧನ ತೋನ್ಸೆ , ತಾಲೂಕು ಪಂಚಾಯತ್ ಸದಸ್ಯರಾದ ಧನಂಜಯ್ , ಭೂ ನ್ಯಾಯ ಮಂಡಳಿ ಸದಸ್ಯ ಪೃಥ್ವೀರಾಜ್ ಶೆಟ್ಟಿ, ಸುಜಯ ಪೂಜಾರಿ , ಸಂಜೀವ ಜತ್ತನ್ , , ಅಶೋಕ್ ಸಾಲಿನ್ಸ್ , ಮನೋಹರ್ ಸಾಲಿನ್ಸ್ , ಸತೀಶ್ ಜತ್ತನ್ , ಮಹೇಶ್ ಎಂ. ಸತೀಶ್ ಎಂ. ಮೊದಲಾದವರು ಉಪಸ್ಥಿತರಿದ್ದರು.
Comments are closed.