ಉಡುಪಿ: ಹಂಗಾರಕಟ್ಟೆ ಶಿಪ್ ಬಳಿಯ ಹೊಳೆಯಲ್ಲಿ ಹಾಗೂ ಕೋಡಿ ಕಿನಾರೆಯ ಬಳಿ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಎರಡು ಮೂರ್ತಿಗಳು ಮಂಗಳವಾರದಂದು ದೊರೆತಿವೆ. ಹಂಗಾರಕಟ್ಟೆ ಶಿಪ್‌ಯಾರ್ಡ್ ಬಳಿ ದೊರೆತ ಮೂರ್ತಿಯು ಸೈಂಟ್ ಫಾದರ್ ಲಾರೆನ್ಸ್‌ದವರದ್ದಾಗಿದ್ದು, ಕೋಡಿಯಲ್ಲಿ ದೊರೆತ ಮೂರ್ತಿಯು ಸೈಂಟ್ ನೋರೆನ್ಹಾ ಅವರ ಮರದ ಮೂರ್ತಿಗಳಾಗಿದ್ದು ಸದ್ಯ ಸಾಸ್ತಾನ ಸಂತ ಅಂತೋನಿ ಚರ್ಚ್‌ನಲ್ಲಿ ಇರಿಸಲಾಗಿದೆ.
ಮಂಗಳವಾರ ಸ್ಥಳೀಯ ಕ್ರಿಶ್ಚಿಯನ್ ಪ್ರಮುಖರೋರ್ವರಿಗೆ ಹಂಗಾರಕಟ್ಟೆ ಸ್ಥಳೀಯರು ತಮ್ಮ ಧರ್ಮಕ್ಕೆ ಸೇರಿದ ಮರದ ಮೂರ್ತಿಯೊಂದು ತೇಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದಾಗಲೇ ವಾಟ್ಸಾಪ್ ಮೂಲಕ ಮೂರ್ತಿಯ ಚಿತ್ರಗಳು ಹರಿದಾಡುತ್ತಿದ್ದನ್ನು ಗಮನಿಸಿದ ಸಮಾಜ ಭಾಂಧವರು ಹಂಗಾರಕಟ್ಟೆ ಶಿಪ್‌ಯಾರ್ಡ್ ಬಳಿ ತೆರಳಿ ಮೂತಿಯನ್ನು ನೀರಿನಿಂದ ಮೇಲೆತ್ತಿ ತಂದಿದ್ದಾರೆ. ಈ ಕುರಿತು ಸ್ಥಳೀಯರನ್ನು ವಿಚಾರಿಸಿದಾಗ ಸುಮಾರು ಒಂದು ದಿನದ ಹಿಂದಿನಿಂದಲೇ ಈ ಮೂರ್ತಿ ತೇಲುತ್ತಿರುವುದನ್ನು ಗಮನಿಸಿದ್ದಾಗಿಯೂ, ಯಾವುದೇ ಸಮಸ್ಯೆಗೆ ಸಿಲುಕುವುದು ಬೇಡ ಎನ್ನುವ ಉದ್ದೇಶಕ್ಕೆ ಮೂರ್ತಿಯನ್ನು ಪರಿಶೀಲಿನಿ ಮೊಬೈಲ್‌ನಲ್ಲಿ ಚಿತ್ರ ತೆಗೆದು, ಅದರ ಮೂಲಕ ವಾರಸುದಾರರಿಗೆ ತಿಳಿಯಪಡಿಸುವ ಉದ್ದೇಶಕ್ಕೆ ವಾಟ್ಸಾಪ್‌ನಲ್ಲಿ ಹಾಕಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಕೋಡಿ ಕಿನಾರೆಯಲ್ಲಿ ಸಿರಿಯನ್ ಪಾದ್ರಿ ಫಾದರ್ ನೋರೊನ್ಹಾ ಅವರ ಮರದ ಮೂರ್ತಿ ಇರುವ ಕುರಿತು ವಾಟ್ಸಾಪ್ ಮೂಲಕ ಸುದ್ದಿ ಮತ್ತು ಚಿತ್ರ ಹರಿದಾಡುತ್ತಿರುವ ಬಗ್ಗೆ ಸ್ಥಳೀಯರೋರ್ವರು ಸಮಾಜ ಭಾಂಧವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಆ ಮೂರ್ತಿಯನ್ನು ಕೂಡ ಸಾಸ್ತಾನ ಚರ್ಚ್‌ಗೆ ತೆಗೆದುಕೊಂಡು ಹೋಗಲಾಗಿದ್ದು ಸದ್ಯ ಚರ್ಚ್‌ನ ಆವರಣದಲ್ಲಿ ಇರಿಸಲಾಗಿದೆ. ಸುಮಾರು ೫ ಅಡಿ ಎತ್ತರದ ಮರದ ಮೂರ್ತಿ ಇದ್ದಾಗಿದ್ದು, ಸುಮಾರು ೪೦ ಕೆಜಿ ತೂಕದಿಂದ ಕೂಡಿದ್ದು, ಇತ್ತೀಚೆಗಷ್ಟೆ ಬಣ್ಣ ಬಳಿದಂತಿದ್ದು, ಒಂದು ಮೂರ್ತಿಯ ಎಡ ಕೈಯ ಭಾಗ ತುಂಡಾಗಿದೆ.
ವಂದನೀಯ ಆರ್. ಝಡ್ ನೊರೋನ್ಹಾ ಅವರು ಬ್ರಹ್ವಾರ ಎಸ್.ಎಂ.ಎಸ್. ಚರ್ಚ್ ಸ್ಥಾಪಕರು ಮಾತ್ರವಲ್ಲದೇ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿಬೆಳೆಸುವ ಮೂಲಕ ಗುರುಗಳಾಗಿ ಎಲ್ಲರ ಪೂಜೆಗೆ ಪಾತ್ರರಾಗಿದ್ದರು.
Comments are closed.