ವರದಿ : ಈಶ್ವರ ಎಂ. ಐಲ್
ಮುಂಬಯಿ : “ಒಂದು ಕಾಲದಲ್ಲಿ ನಾನು ತೀಯಾ ಸಮಾಜದಿಂದ ನೂರು ರೂಪಾಯಿ ವಿದ್ಯಾರ್ಧಿವೇತನ ಪಡೆದಿದ್ದು ಅದನ್ನು ಸಮಾಜ ಸೇವೆಯೊಂದಿಗೆ ಹಿಂದಿರುಗಿಸುತ್ತಿರುವೆನು. ಸಮಾಜದಿಂದ ಶೈಕ್ಷಣಿಕ ನೆರವು ಪಡೆದ ಮಕ್ಕಳು ದೊಡ್ಡವರಾದ ನಂತರ ಸಮಾಜಕ್ಕೆ ಸಮಾಜಾಭಿವೃದ್ದಿಗೆ ತಮ್ಮಿಂದಾಗುವ ರೀತಿಯಲ್ಲಿ ಪ್ರೊತ್ಸಾಹಿಸಬೇಕೆಂದರು. ಮಾಜಿ ಅಧ್ಯಕ್ಷ ದಿ. ಯು. ಕರ್ತಪ್ಪ ಅವರ ಸ್ಮರಣಾರ್ಥ ಕೆಲವು ವರ್ಷಗಳ ಹಿಂದೆ ಅವರ ಸುಪುತ್ರ ವಿಶ್ವನಾಥ ಯು. ಕೆ. ಅವರಿಂದ ಸಣ್ಣ ಮೊತ್ತದಲ್ಲಿ ಸ್ಥಾಪನೆಗೊಂಡ ಈ ವಿದ್ಯಾರ್ಥಿವೇತನ ಇಂದು ದಾನಿಗಳ ಸಹಕಾರದಿಂದ ದೊಡ್ಡ ಮೊತ್ತಕ್ಕೆ ತಲಪಿದ್ದು, ಇದಕ್ಕೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕಾಗೆದೆ” ಎಂದು ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ನುಡಿದರು.
ಜುಲೈ 3 ರಂದು ಘಾಟ್ಕೋಪರ್ ಪಂಥ ನಗರದ ತೀಯಾ ಸಮಾಜದ ಕಾರ್ಯಾಲಯದ ಪಕ್ಕದ ಮಿನಿ ಸಭಾಗೃಹದಲ್ಲಿ ತೀಯಾ ಸಮಾಜದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳನ್ನುದ್ದೇಶಿಸಿ ಅವರು ಮಾತಾನಾಡಿದರು.
ತೀಯಾ ಸಮಾಜದ ಬೋರ್ಡ್ ಆಫ್ ಟ್ರಸ್ಟನ ಕಾರ್ಯಧ್ಯಕ್ಷ ಅವರು ತನ್ನ ಮನದಾಳದ ಮಾತನ್ನು ಹೇಳುತ್ತಾ “ಇಂದು ಮಕ್ಕಳ ಉಪಸ್ಥಿತಿಯನ್ನು ನೋಡುವಾಗ ಆನಂದವಾಗುತ್ತಿ. ಈ ರೀತಿ ಮಕ್ಕಳು ತೀಯಾ ಸಮಾಜದ ಸಭೆ, ಸಮಾರಂಭಗಳಲ್ಲಿ ಉಪಸ್ಥಿತರಿದ್ದಲ್ಲಿ ನಮ್ಮಂತವರಿಗೆ ಸಮಾಜದ ವಿದ್ಯಾರ್ಥಿವೇತನ ನಿಧಿಗೆ ಹೆಚ್ಚಿನ ಮೊತ್ತ ನೀಡಲು ಉತ್ತೇಜನ ದೊರಕುತ್ತದೆ” ಎಂದರು.
ಸಮಾಜದ ಮಾಜಿ ಉಪಾಧ್ಯಕ್ಷ ವಿಶ್ವನಾಥ ಯು. ಕೆ. ಯವರು ವಿದ್ಯಾರ್ಥಿವೇತನ ನಿಧಿಯ ಬಗ್ಗೆ ಮಾಹಿತಿಯಿತ್ತರು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಶಿಕ್ಷಣ ತಜ್ನೆ, ಸೋಮಯ್ಯ ಕಾಲೇಜಿನ ಉಪ ಪ್ರಾಂಶುಪಾಲೆ ದಿವಿಜ ಚಂದ್ರಶೇಖರ ಅವರು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕೆಲವು ಉಪಯುಕ್ತ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಸಮಾಜದ ಟ್ರಸ್ಟಿ ರವಿ ಎಸ್. ಮಂಜೇಶ್ವರ್, ಉಪಾಧ್ಯಕ್ಷ ಟಿ. ಬಾಬು ಬಂಗೇರ, ಪ್ರಧಾನ ಕಾರ್ಯದರ್ಶಿ ಐಲ್ ಬಾಬು, ಕೋಶಾಧಿಕಾರಿ ರಮೇಶ್ ಉಳ್ಳಾಲ್, ಆರೋಗ್ಯ ನಿಧಿಯ ಕಾರ್ಯಾಧ್ಯಕ್ಷ ತಿಮ್ಮಪ್ಪ ಬಂಗೇರ ಉಪಸ್ಥಿತರಿದ್ದರು. ತೀಯಾ ಬೆಳಕು ಸಂಪಾದಕ ಶ್ರೀಧರ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
ವಿಧ್ಯಾರ್ಥಿ ವೇತನ ನಿಧಿಯ ದಾನಿಗಳಾದ ಟಿ. ಸುಂದರ್, ಆನಂದ ಕರ್ಕೇರ, ಭೂಷಣ್ ಬಂಗೇರ, ದಿನೇಶ್ ನಾರಾಯಣ್, ಸುಧಾಕರ ಉಚ್ಚಿಲ್, ಹರ್ಷದ್ ಕರ್ಕೇರ, ತೀಯಾ ಸಮಾಜದ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಗಂಗಾಧರ ಕಲ್ಲಾಡಿ, ಬಾಬು ಬೆಳ್ಚಡ, ದಿವ್ಯಾ ಕೋಟ್ಯಾನ್, ಉಜ್ವಲ ಚಂದ್ರಶೇಖರ್, ಪ್ರತಿಮಾ ಬಂಗೇರ, ಜೊತೆ ಕಾರ್ಯದರ್ಶಿ ಈಶ್ವರ ಎಂ. ಐಲ್, ಜೊತೆ ಕೋಶಾಧಿಕಾರಿ ಸುಂದರ್ ಐಲ್, ಮತ್ತಿತರ ಪದಾಧಿಕಾರಿಗಳು ಹಾಗೂ ದಾನಿಗಳು ಉಪಸ್ಥಿತರಿದ್ದರು.
Comments are closed.