ಮಂಗಳೂರು : ನಗರದ ದೇರೆಬೈಲ್-ಕೊಂಚಾಡಿ ನಾಗಕನ್ನಿಕ ದೇವಸ್ಥಾನ ರಸ್ತೆಯ ಬಳಿ ವಾಸವಿರುವ ಬಿಲ್ಡರ್ ಪಿ.ನರಸಿಂಹ ರಾವ್ ರವರ ಮನೆಯಲ್ಲಿ ಜುಲೈ 2ರಂದು ನಡೆದ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾಗಿರುವ ಕಾವೂರು ಠಾಣಾ ಪೊಲೀಸರು ಆರೋಪಿಗಳಿಂದ ನಗದು ಹಾಗೂ ಕೆಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಅವರು, ಬಿಲ್ಡರ್ ಪಿ.ನರಸಿಂಹ ರಾವ್ ರವರ ಮನೆಯಲ್ಲಿ ಜುಲೈ 2ರಂದು ಮನೆಯವರೆಲ್ಲರೂ ಹೊರಗೆ ಹೋಗಿದ್ದ ಸಂದರ್ಭ ಮನೆಯ ಕಪಾಟಿನಲ್ಲಿದ್ದ ಸುಮಾರು 18 ಲಕ್ಷ ನಗದು ಹಣ ಹಾಗು 3 ಮೊಬೈಲ್ ಸೆಟ್ ಗಳನ್ನು ಕಳವುಮಾಡಿಕೊಂಡು ಪರಾರಿಯಾಗಿದ್ದ ಆರೋಪಿಗಳು ಕುಳಾಯಿಯ ಕಡೆ ಬಾಡಿಗೆ ಮನೆಯನ್ನು ಹುಡುಕಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ 11-30 ಕ್ಕೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಬಂಧಿತ ಆರೋಪಿಗಳನ್ನು ದಾರವಾಡ ಜಿಲ್ಲೆಯ ನವಲುಗುಂದ ನಿವಾಸಿ ಅಂಬಣ್ಣ ಬಸಪ್ಪ ಜಾಡರ್ ಆಲಿಯಾಸ್ ಅಂಬರೀಶ್ (25 ) ಹಾಗೂ ದಾರವಾಡ ಜಿಲ್ಲೆಯ ನವಲುಗುಂದ ನಿವಾಸಿ ಶ್ರೀಮತಿ ರಶೀದಾ ಅಲಿಯಾಸ್ ಕಾಜಿ (23 ) ಎಂದು ಗುರುತಿಸಲಾಗಿದೆ. ಆರೋಪಿಗಳು ತಾವೇ ಈ ಕೃತ್ಯ ನಡೆಸಿರುವುದಾಗಿ ಮಾಹಿತಿ ನೀಡಿದ್ದು ಆರೋಪಿಗಳಿಂದ ಕಳವು ಮಾಡಲಾದ ರೂ. 17,38,000/- ನಗದು ಹಣ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಬೆಳ್ಳಿ ಹಾಗು ಚಿನ್ನದ ಒಡವೆಗಳು ರೂ 9700/- ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ವಿವರಿಸಿದರು.
ದಿನಾಂಕ 02/07/2016 ರಂದು ಸಂಜೆ 4-30 ಗಂಟೆಗೆ ಮಂಗಳೂರು ನಗರದ ದೇರೆಬೈಲ್-ಕೊಂಚಾಡಿ ನಾಗಕನ್ನಿಕ ದೇವಸ್ಥಾನ ರಸ್ತೆಯ ಬಳಿ ವಾಸವಿರುವ ಬಿಲ್ಡರ್ ಪಿ.ನರಸಿಂಹ ರಾವ್ ರವರ ಮನೆಯಲ್ಲಿ ಮನೆಯವರೆಲ್ಲರೂ ಹೊರಗೆ ಹೋಗಿ ಮನೆಗೆ ವಾಪಾಸ್ಸು ಬಂದಾಗ ಮನೆಯ ಕಪಾಟಿನಲ್ಲಿದ್ದ ಸುಮಾರು 18 ಲಕ್ಷ ನಗದು ಹಣವನ್ನು ಹಾಗು 3 ಮೊಬೈಲ್ ಸೆಟ್ಗಳನ್ನು ಕಳವುಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮನೆಯಲ್ಲಿ ಆಳವಡಿಸಿದ್ದ ಸಿಸಿಟಿವಿ ಫೋಟೆಜ್ನ್ನು ಗಮನಿಸಿದಾಗ ಮನೆಯ ಸೆಕ್ಯೂರಿಟಿ ಗಾರ್ಡ್ ಮತ್ತು ಮನೆಯ ಕೆಲಸದಾಕೆಯು ಕಳ್ಳತನವನ್ನು ಮಾಡಿರುವ ಬಗ್ಗೆ ಸ್ಪಷ್ಟ ಮಾಹಿತಿಯಂತೆ ಎಸಿಪಿ ಉದಯ ನಾಯಕ್ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿ ಕಳುಹಿಸಿಕೊಡಲಾಗಿತ್ತು. ಅದರಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಯುಕ್ತರು ತಿಳಿಸಿದರು.
ಸದ್ರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ನಿರೀಕ್ಷಕರಾದ ಎಂ,ಎ ನಟರಾಜ್,ಪಿಎಸ್ಐ ಉಮೇಶ್ ಕುಮಾರ್ ಎಂ,ಎನ್, ಎ,ಎಸ್,ಐ ವನಜಾಕ್ಷಿ ಸಿಬ್ಬಂದಿಗಳಾದ ವಿಶ್ವನಾಥ, ರಾಮಣ್ಣ ಶೆಟ್ಟಿ, ಬಾಲಕೃಷ್ಣ, ರಾಜಶೇಖರ ಗೌಡ, ಗಣೇಶ ಕುಮಾರ್, ಯಶವಂತ ರೈ, ರವರು ಪ್ರಮುಖ ಪಾತ್ರ ವಹಿಸಿರುವುದಾಗಿ ಅಯುಕ್ತರು ತಿಳಿಸಿದ್ದಾರೆ.
ಮನೆಗೆಲಸದವರನ್ನು ನೇಮಿಸುವಾಗ ಎಚ್ಚರಿಕೆ ವಹಿಸಲು ಕಮಿಶನರ್ ಸೂಚನೆ :
ಪ್ರತಿಯೊಬ್ಬರು ನಾಗರೀಕರು ಕೆಲಸದವರನ್ನು ಸೇರಿಸಿಕೊಳ್ಳುವ ಮುನ್ನು ಅವರ ಪೂರ್ವಪರಗಳನ್ನ ತಿಳಿದುಕೊಳ್ಳಬೇಕು. ಹಾಗೂ ಅವರಿಂದ ಅಧೀಕೃತ ಫೋಟೋ ಐಡಿ ಕಾರ್ಡ್ ಹಾಗು ಯಾವುದೇ ಕೇಸುಗಳ ಇಲ್ಲವೆಂಬ ಬಗ್ಗೆ ಪೊಲೀಸ್ ವರೀಫಿಕೇಶನ್ ಮಾಡಿಸಿಕೊಂಡಿರುವ ಬಗ್ಗೆ ದಾಖಲೆ ಪಡೆದುಕೊಳ್ಳಬೇಕು. ಸಾರ್ವಜನಿಕರು ಮನೆಗಳಿಗೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಸಿಸಿ ಕ್ಯಾಮೆರಗಳನ್ನು ಆಳವಡಿಕೊಳ್ಳವುವಂತೆ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿರುತ್ತಾರೆ.
Comments are closed.