ಮಂಗಳೂರು, ಜುಲೈ.11 : ನೀರುಮಾರ್ಗ ಕೆಲರಾಯ್ ಚರ್ಚ್ ಧರ್ಮಗುರು ಹಾಗೂ ಸೈಂಟ್ ಅನ್ಸ್ ಅಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯ ವಿಶಾಲ ಮೋನಿಸ್ ಎಂಬವರು ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿರುವ ಕೆಲರಾಯ್ ನಿವಾಸಿಗಳು ಹಾಗೂ ಕುಡುಪು ಗ್ರಾಮಸ್ಥರು ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ನೀರು ಮಾರ್ಗ ಸಮೀಪದ ಕೆಲರಾಯ್ ಸೈಂಟ್ ಅನ್ಸ್ ಅಂಗ್ಲ ಮಾಧ್ಯಮ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ವಿಶಾಲ ಮೋನಿಸ್ ಸುಮಾರು 40 ವರ್ಷಗಳ ಇತಿಹಾಸವಿರುವ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕುವ ಮೂಲಕ ರಸ್ತೆಯನ್ನು ಹಾಳುಗೆಡವಿದ್ದಾರೆ. ಇದರಿಂದ ಇದೀಗ ಸ್ಥಳೀಯರಿಗೆ ಇಲ್ಲಿ ಓಡಾಡಲು ಸರಿಯಾದ ರಸ್ತೆ ಇಲ್ಲದಂತಾಗಿದೆ. ಮಾತ್ರವಲ್ಲದೇ ಸಾರ್ವಜನಿಕ ಸೊತ್ತು ಹಾಳುಗೆಡವಿದ ಬಗ್ಗೆ ಕೇಳಲು ಹೋದ ಸ್ಥಳೀಯ ನಿವಾಸಿಗಳಿಗೆ ವಿಶಾಲ ಮೋನಿಸ್ ಅವರು ಜೀವಭಯ ಹುಟ್ಟಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶಾಲ ಮೋನಿಸ್ ಅವರನ್ನು ಪೊಲೀಸರು ಇ ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಹಾಗೂ ಅಗೆದು ಹಾಕಿರುವ ರಸ್ತೆಯನ್ನು ತತ್‌ಕ್ಷಣ ಮರು ನಿರ್ಮಾಣ ಮಾಡಬೇಕು ಎಂದು ಈ ಸಂದರ್ಭ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಪ್ರಾಸ್ಸಿಸ್, ಪುನೀತ್ ಕುಮಾರ್,ನವೀನ್ ಕುಮಾರ್, ಯಶವಂತ್ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
Comments are closed.