ಕರಾವಳಿ

ನಾಲ್ವರು ಆರೋಪಿಗಳಿಗಾಗಿ ಶೋಧ : ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ

Pinterest LinkedIn Tumblr

Four_accused_Surching

ಮಂಗಳೂರು, ಜು.15 ; ನಗರದ ವಿವಿಧ ಭಾಗಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಸಾರ್ವಜನಿಕರ ಮೊರೆ ಹೋಗಿದ್ದಾರೆ.

ಸಂದೀಪ್ ಶೆಟ್ಟಿ ಕೊಲೆ ಪ್ರಕರಣ ಹಾಗೂ ದರೋಡೆ ಯತ್ನ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಸಿದ್ದ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಪಾಂಡೇಶ್ವರ ಸಮೀಪದ ಮಂಕಿಸ್ಟ್ಯಾಂಡ್‌ನ ಶಾಂತಾ ಆಲ್ವಾ ಮಿಷನ್ ಕಂಪೌಂಡ್‌ನ ನಿವಾಸಿ ವಿಜಯ್ ಯಾನೆ ಮಂಕಿಸ್ಟ್ಯಾಂಡ್ ವಿಜಯ್ (30), ಮಂಕಿಸ್ಟ್ಯಾಂಡ್‌ನ ಶಾಂತಾ ಆಲ್ವಾ ಮಿಷನ್ ಕಂಪೌಂಡ್‌ನ ನಿವಾಸಿ ಸಂಪತ್ ಬಂಗೇರಾ (20), ವೆಲೇನ್ಸಿಯ ಸಮೀಪದ ಗೋರಿಗುಡ್ಡೆ ಪರ್ಪಲ್ ಸ್ಟ್ರೀಟ್ ಲೇನ್‌ ನಿವಾಸಿ ಮೆಲ್ರಿಕ್ (19), ಅಶೋಕನಗರ ಆರನೇ ಬಿ ಕ್ರಾಸ್‌ನ ಪ್ರವೀಣ ಯಾನೆ ಚೋಟು (23) ತಲೆ ಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ.

ಇವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಐಪಿಸಿ 402, 399, 143, 147, 148, 149, 307, 324, 341, 504, 506 ಕಲಂ ಅಡಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.ಇವರ ಇರುವಿಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸ ಬಹುದು ಅಥವಾ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

ಪೊಲೀಸ್ ನಿರೀಕ್ಷಕರು, ಮಂಗಳೂರು ಉತ್ತರ ಠಾಣೆ, ಮೊ.ನಂ – 9480805338

ಪೊಲೀಸ್ ಉಪ ನಿರೀಕ್ಷಕರು, ಮಂಗಳೂರು ದಕ್ಷಿಣ ಠಾಣೆ, ಮೊ.ನಂ – 9480805346

ಮಂಗಳೂರು ದಕ್ಷಿಣ ಠಾಣೆ, ದೂರವಾಣಿ ನಂಬ್ರ – 08242220518

ಪೊಲೀಸ್ ಕಂಟ್ರೋಲ್ ರೂಮ್. ದೂರವಾಣಿ ನಂಬ್ರ – 100, 0824-2220800

ಈ ಕೆಳಗಿನ ಜಾಲತಾಣಗಳ ಮುಖೇನಾ ಕೂಡಾ ಸಂಪರ್ಕಿಸಬಹುದಾಗಿದೆ.

Twitter: mangalurucitypolice

facebook:Mangaluru city police

Mobil App: Mangaluru city police

Email: compolmlr1@gmail.com

dcplomlr@gmail.com

dcpcrimemlr@gmail.com

Comments are closed.