ಮಂಗಳೂರು,ಜುಲೈ.19 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ವಿಜಯಪುರ, ಬೆಳಗಾವಿ ಹಾಗೂ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಸೇಖರ್ ಅವರು ಈ ಆಜ್ಞೆಯನ್ನು ಹೊರಡಿಸಿರುತ್ತಾರೆ.
ಗೂಂಡಾ ಕಾಯ್ದೆಯಡಿಯಲ್ಲಿ ಜೈಲು ಸೇರಿದ ಆರೋಪಿಗಳನ್ನು ಜೊಕಟ್ಟೆಯ ವಿಶ್ವನಾಥ ಪೂಜಾರಿ @ ಕೊಡಿಕೆರೆ ವಿಶ್ವ @ ವಿಶ್ವ (33), ಬಜ್ಪೆ ಸಮೀಪದ ಅದ್ಯಪಾಡಿ ನಿವಾಸಿ ಹನೀಫ್ @ ಹನೀಫ್ ಅದ್ಯಪಾಡಿ (37) ಹಾಗೂ ಕಾವೂರು ಶಾಂತಿನಗರದ ಮುಸ್ತಪಾ (30 ) ಎಂದು ಹೆಸರಿಸಲಾಗಿದೆ.
ವಿಶ್ವನಾಥ ಪೂಜಾರಿ @ ಕೊಡಿಕೆರೆ ವಿಶ್ವ @ ವಿಶ್ವ. ಪ್ರಾಯ- 33 ವರ್ಷ, ತಂದೆ- ಯೊಗೀಶ್ ಕೊಟ್ಯಾನ್. ವಾಸ ತೋಕುರು, ಜೊಕಟ್ಟೆ ಮಂಗಳೂರು. ಈತನ ಮೇಲೆ ಕೊಲೆ, ಕೊಲೆಗೆ ಯತ್ನ, ದರೋಡೆಗೆ ಸಂಚು, ಹಲ್ಲೆ, ದೊಂಬಿ, ಅಪರಾಧಿಕ ಒಳಸಂಚು ಮತ್ತು ಕೊಲೆ ಬೆದರಿಕೆ ಸೇರಿದಂತೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿವಿದ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿದ್ದು ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈತನ ಅಪರಾಧ ಕೃತ್ಯವನ್ನು ನಿಯಂತ್ರಿಸಲು ಚೆಲುವರಾಜ, ಪಿ.ಐ ಸುರತ್ಕಲ್ ಪೊಲೀಸ್ ಠಾಣೆ, ಉದಯ್ ನಾಯಕ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ ಹಾಗೂ ಶ್ರೀ ಶಾಂತರಾಜು ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ರವರುಗಳ ವರದಿ ಮತ್ತು ಶಿಪಾರಸ್ಸಿನಂತೆ ಚಂದ್ರಸೇಖರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿರುತ್ತಾರೆ.
ಹನೀಫ್ @ ಹನೀಫ್ ಅದ್ಯಪಾಡಿ ಪ್ರಾಯ- 37 ವರ್ಷ, ತಂದೆ- ಪಿ.ಕೆ.ಹಮ್ಮಬ್ಬ, ವಾಸ- ಹೊಸನಗರ, ಬಜ್ಪೆ, ಮಂಗಳೂರು. ಈತನ ಮೇಲೆ ಕೊಲೆ, ಕೊಲೆಗೆ ಯತ್ನ ಮತ್ತು ಹಲ್ಲೆ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿದ ಠಾಣೆಗಳಲ್ಲಿ ಸುಮಾರು 6 ಪ್ರಕರಣಗಳು ದಾಖಲಾಗಿದ್ದು ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈತನ ಅಪರಾಧ ಕೃತ್ಯವನ್ನು ನಿಯಂತ್ರಿಸಲು ನಾಗರಾಜ, ಪಿ.ಐ ಬಜ್ಪೆ ಪೊಲೀಸ್ ಠಾಣೆ, ಉದಯ್ ನಾಯಕ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ ಹಾಗೂ ಶ್ರೀ ಶಾಂತರಾಜು ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ರವರುಗಳ ವರದಿ ಮತ್ತು ಶಿಪಾರಸ್ಸಿನಂತೆ ಚಂದ್ರಸೇಖರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿರುತ್ತಾರೆ.
ಮುಸ್ತಪಾ, ಪ್ರಾಯ- 30 ವರ್ಷ, ತಂದೆ- ಇಬ್ರಾಹಿಂ, ವಾಸ- ಶಾಂತಿನಗರ, ಕಾವೂರು ಮಂಗಳೂರು. ಈತನ ಮೇಲೆ ಕೊಲೆ ಮತ್ತು ಕೊಲೆಗೆ ಯತ್ನ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿದ ಠಾಣೆಗಳಲ್ಲಿ ಸುಮಾರು 4 ಪ್ರಕರಣಗಳು ದಾಖಲಾಗಿದ್ದು ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈತನ ಅಪರಾಧ ಕೃತ್ಯವನ್ನು ನಿಯಂತ್ರಿಸಲು ನಟರಾಜ್, ಪಿ.ಐ ಕಾವೂರು ಪೊಲೀಸ್ ಠಾಣೆ, ಉದಯ್ ನಾಯಕ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ ಹಾಗೂ ಶಾಂತರಾಜು ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ರವರುಗಳ ವರದಿ ಮತ್ತು ಶಿಪಾರಸ್ಸಿನಂತೆ ಚಂದ್ರಸೇಖರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿರುತ್ತಾರೆ.
Comments are closed.