ಮಂಗಳೂರು,ಜುಲೈ.19: ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳದ ಸಂಚಾಲಕ ಎಚ್.ಎಂ.ಅಶ್ರಫ್ ರನ್ನು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಗಳೂರು ಉತ್ತರ ಠಾಣೆ ಪೊಲೀಸರು ಫೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಜಾನ್ ಮೊಂತೆರೊ ಎಂಬುವರು ತನ್ನ ಪತ್ನಿ ಹಾಗೂ ಮಗಳ ಜೊತೆಗೆ ಶಾಪಿಂಗ್‍ಗಾಗಿ ಕಾರ್‌ನಲ್ಲಿ ಹೊರಟಿದ್ದ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಅಶ್ರಫ್ ಅವಾಚ್ಯವಾಗಿ ನಿಂದಿಸಿ, ಮೂವರ ಮೇಲೂ ಹಲ್ಲೆ ನಡೆಸಿರುವ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಶ್ರಫ್ ವಿರುದ್ಧ ಐಪಿಸಿ ಸೆಕ್ಷನ್ 427, 323, 354ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ :
ಬಲ್ಮಠ ಬಳಿಯ ಸಹರಾ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನ ಜಾನ್ ಮೊಂತೆರೊ ಎಂಬುವರು ತನ್ನ ಪತ್ನಿ ಹಾಗೂ ಮಗಳ ಜೊತೆಗೆ ಶಾಪಿಂಗ್‍ಗಾಗಿ ಕಾರ್‌ನಲ್ಲಿ ಹೊರಟಿದ್ದ ವೇಳೆ ಅಶ್ರಫ್ ತನ್ನ ಕಾರನ್ನು ಮಧ್ಯೆ ನಿಲ್ಲಿಸಿ ರಸ್ತೆ ಬ್ಲಾಕ್ ಮಾಡಿದ್ದು, ಈ ಸಂದರ್ಭ ಮೊಂತೆರೊ ಅವರು ಪಕ್ಕಕ್ಕೆ ಸರಿಯುವಂತೆ ಅಶ್ರಫ್ ನಲ್ಲಿ ಕೇಳಿಕೊಂಡಾಗ ಅಶ್ರಫ್ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಇವರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಅಶ್ರಪ್ ಕೆಟ್ಟ ಮಾತಿನ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ.ಇದರಿಂದ ಕೋಪಗೊಂಡ ಮೊಂತೆರೊ ಅವರು ಅವಾಚ್ಯ ಶಬ್ದ ಬಳಸದಂತೆ ಎಚ್ಚರಿಕೆ ನೀಡಿದ್ದು, ಇದರಿಂದ ರೊಚ್ಚಿಗೆದ್ದ ಅಶ್ರಫ್ ಮೊಂತೆರೊ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ತಡೆಯಲು ಬಂದ ಮೊಂತೆರೊ ಪತ್ನಿ ಹಾಗೂ ಮಗಳ ಮೇಲೆಯೂ ಹಲ್ಲೆ ಈತ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಅಪಾರ್ಟ್‍ಮೆಂಟ್‍ನವರ ಸ್ಥಳಕ್ಕಾಗಾಮಿಸಿ ಅಶ್ರಫ್‍ಗೆ ಕಾರು ಸರಿಸುವಂತೆ ತಿಳಿಸಿದ್ದು, ತಕ್ಷಣ ಅಶ್ರಫ್ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಬಳಿಕ ಅಶ್ರಫ್ ವಿರುದ್ಧ ದೂರು ಮೊಂತೆರೊ ಅವರು ಮಂಗಳೂರು ಉತ್ತರ ಠಾಣೆಯಲ್ಲಿ ಸಲ್ಲಿಸಿದ್ದು, ಅಶ್ರಫ್ ಬಾಲಕಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಅಶ್ರಫ್ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಸಿ ಅಶ್ರಫ್‍ನನ್ನು ಬಂಧಿಸಲಾಗಿದೆ.
ಪ್ರಕರಣದ ಬಗ್ಗೆ ಅಶ್ರಫ್ ಕೂಡಾ ಮೊಂತೆರೊ ಅವರ ವಿರುದ್ಧ ಪ್ರತಿ ದೂರು ನೀಡಿದ್ದಾರೆ ಎನ್ನಲಾಗಿದೆ.
Comments are closed.