ಕರಾವಳಿ

ಒಂದು ಅಡುಗೆ ಅನಿಲ ಸಿಲಿಂಡರ್ ಹೊಂದಿರುವವರಿಗೆ ಇನ್ನೊಂದು ಸಿಲಿಂಡರ್ ಉಚಿತ

Pinterest LinkedIn Tumblr

Khader_Gas_Press_1

ಮಂಗಳೂರು,ಜು.20: ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ನಗರ ಪ್ರದೇಶದಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್ ಹೊಂದಿರುವವರಿಗೆ ಇನ್ನೊಂದು ಸಿಲಿಂಡರನ್ನು ಸರಕಾರದಿಂದ ಉಚಿತವಾಗಿ ವಿತರಿಸುವ ವಿನೂತನ ಯೋಜನೆಯನ್ನು ರೂಪಿಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Khader_Gas_Press_2

ಮಂಗಳೂರಿನಲ್ಲಿ  ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಒಂದು ಸಿಲಿಂಡರ್ ಹೊಂದಿರುವವರು ಅದು ಖಾಲಿಯಾದ ಬಳಿಕ ಮತ್ತೊಂದು ಸಿಲಿಂಡರ್ ದೊರೆಯುವವರೆಗೆ ಅಡುಗೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆ ಈ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಈಗಾಗಲೇ ಈ ಬಗ್ಗೆ ಸರಕಾರದ ಮುಂದೆ ಪ್ರಸ್ತಾವನೆ ಇರಿಸಲಾಗಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಾಕ್ಷಣ ವಿತರಣೆ ಕಾರ್ಯ ಆರಂಭಗೊಳ್ಳಲಿದೆ ಎಂದು ಹೇಳಿದರು.

Khader_Gas_Press_3

ಪಡಿತರ ವ್ಯವಸ್ಥೆಯಡಿ ಅಡುಗೆ ಅನಿಲ ಹೊಂದಿದವರಿಗೆ ಪ್ರಸ್ತುತ ಸೀಮೆಎಣ್ಣೆ ಸಿಗುತ್ತಿಲ್ಲ. ಆದರೆ ಮಲೆನಾಡು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ನ ವ್ಯವಸ್ಥೆಯೂ ಇಲ್ಲದೆ ಕತ್ತಲಲ್ಲಿ ಬದುಕುವಂತಹ ಪರಿಸ್ಥಿತಿ ಇದೆ. ಹಾಗಾಗಿ ಮಲೆನಾಡು ಪ್ರದೇಶಗಳಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ವರೆಗೆ ಮೂರು ತಿಂಗಳ ಅವಧಿಗೆ ಸೀಮೆಎಣ್ಣೆ ಪೂರೈಕೆಗೆ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.

Comments are closed.