ಮೂಲ್ಕಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್ಸುಗಳ ಚಾಲಕರು ಕರ್ಕಶವಾಗಿರುವ ವ್ಯಾಕ್ಯೂಮ್ ಹಾರ್ನ್‌ನ್ನು ಬಳಸುತ್ತಿದ್ದುದರ ಬಗ್ಗೆ ಸಾರ್ವಜನಿಕರ ದೂರು ಬಂದ ಹಿನ್ನಲೆಯಲ್ಲಿ ನಿನ್ನೆ ಸುರತ್ಕಲ್‌ನ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್‌ರವರು ವಿಶೇಷ ಕಾರ್ಯಾಚರಣೆ ನಡೆಸಿ ಕರ್ಕಶ ಹಾರ್ನ್ ಹೊಂದಿರುವ ಬಸ್ ಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಸುರತ್ಕಲ್ ಶಿಕ್ಷಣ ಸಂಸ್ಥೆಗಳ ಬಳಿಯಲ್ಲಿ ಇಂತಹ ಹಾರ್ನ್‌ಗಳ ಬಳಕೆಗೆ ನಿಷೇಧವಿದ್ದರು ಅದನ್ನು ಬಳಸುತ್ತಿದ್ದ ಎಕ್ಸ್‌ಪ್ರೆಸ್ ಬಸ್ಸುಗಳನ್ನು ಸುರತ್ಕಲ್ ಬಸ್ ನಿಲ್ದಾಣದಲ್ಲಿ ತಪಾಸಣೆ ನಡೆಸಿ ಬಳಸುತ್ತಿದ್ದ ಕರ್ಕಶ ಹಾರ್ನ್‌ಗಳನ್ನು ಕಳಚಿ ಪ್ರಕರಣವನ್ನು ದಾಖಲಿಸಿದ್ದಾರೆ.
ಸುರತ್ಕಲ್ ಬಸ್ ನಿಲ್ದಾಣದಲ್ಲಿ ಆಸ್ಪತ್ರೆಗಳು ಇರುವುದರಿಂದ ಇಲ್ಲಿಯೂ ಇಂತಹ ವ್ಯಾಕ್ಯೂಮ್ ಹಾರ್ನ್‌ಗಳ ಬಳಕೆಯನ್ನು ಕಡಿತಗೊಳಿಸಿದ್ದರು ವಿನಕಾರಣ ಬಸ್ಸಿನ ಚಾಲಕರು ಇದನ್ನು ಬಳಸುತ್ತಿದ್ದರಿಂದ ಈ ಕ್ರಮವನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುರತ್ಕಲ್ ಸಂಚಾರಿ ಇನ್ಸ್‌ಪೆಕ್ಟರ್ ಆಗಿ ಮಂಜುನಾಥ್‌ರವರು ಅಧಿಕಾರ ವಸಹಿಕೊಂಡ ನಂತರ ಹೆದ್ದಾರಿಯ ಉದ್ದಕ್ಕೂ ಹಲವಾರು ಬದಲಾವಣೆ ತಂದಿದ್ದು, ಮುಕ್ಕ, ಹಳೆಯಂಗಡಿ, ಕೊಲ್ನಾಡು ಪ್ರದೇಶದಲ್ಲಿ ಬ್ಯಾರಿಕ್ಯಾಡ್‌ಗಳನ್ನು ಬಳಸಿ ಸಂಚಾರ ವೇಗವನ್ನು ನಿಯಂತ್ರಣಗೊಳಸಿದ್ದಾರಲ್ಲದೆ, ಅಪಘಾತಗಳಿಗೂ ಕಡಿವಾಣ ಹಾಕಿರುವುದು ವಿಶೇಷವಾಗಿದೆ.
ಕರ್ಕಶ ಹಾರ್ನ್‌ಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಸುರತ್ಕಲ್ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
Comments are closed.