ಕರಾವಳಿ

ರಿಚಾರ್ಜ್‌ಗೆ ಬರುವ ಯುವತಿಯರಿಗೆ ಅಶ್ಲೀಲ ಸಂದೇಶ ರವಾನೆ : ಮೊಬೈಲ್ ಅಂಗಡಿ ಮಾಲಕನ ಸೆರೆ

Pinterest LinkedIn Tumblr

Imran_Mobail_arest

ಮಂಗಳೂರು / ಉಳ್ಳಾಲ : ಮೊಬೈಲ್ ಮೂಲಕ ಯುವತಿಯರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತೊಕ್ಕೊಟ್ಟು ಸ್ಪೀಡ್ ಮೊಬೈಲ್ ಸೆಂಟರಿನ ಮಾಲಕ ಉಳ್ಳಾಲ ಕೋಟೆಪುರ ನಿವಾಸಿ ಇಮ್ರಾನ್ (35) ಬಂಧಿತ ಆರೋಪಿ. ಈತ ತನ್ನ ಅಂಗಡಿಗೆ ಮೊಬೈಲ್ ರಿಚಾರ್ಜ್ ಮಾಡಲು ಬರುವ ಯುವತಿಯರ ನಂಬರ್ ಪಡೆದು ಅವರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ ಹಾಗೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಕೆಲವು ಸಮಯಗಳಿಂದ ತೊಕ್ಕೊಟ್ಟಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಈತ ತನ್ನ ಬಳಿ ರೀಚಾರ್ಜ್‍ಗೆಂದು ಬರುವ ಯುವತಿಯರ ಮೊಬೈಲ್ ನಂಬರ್‍ಗಳನ್ನು ಪಡೆದು ಪ್ರೀತಿ ಪ್ರೇಮದ ಹೆಸರಿನಲ್ಲಿ ವಂಚಿಸುತ್ತಿದ್ದನು. ಈ ಸಂಬಂಧ ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 200 ಕ್ಕೂ ಹೆಚ್ಚು ಯುವತಿಯರು ಮೌಖಿಕ ದೂರು ನೀಡಿದ್ದರು. ಹೀಗಾಗಿ ಈ ಹಿಂದೆ ಉಳ್ಳಾಲ ಪೊಲೀಸರು ಈತನ ಅಂಗಡಿಗೆ ದಾಳಿ ನಡೆಸಿದ್ದರೂ ಯಾವುದೇ ದಾಖಲೆಗಳು ಲಭ್ಯವಾಗಿರಲಿಲ್ಲ.ಈ ಮೊದಲು ಇಮ್ರಾನ್ ಮೇಲೆ 50ಕ್ಕೂ ಹೆಚ್ಚು ದೂರುಗಳು ಉಳ್ಳಾಲ ಪೊಲೀಸರಿಗೆ ಬಂದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್ ನಿವಾಸಿ ಸಫಾನ(20) ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ಆಕೆಯ ಕಾಲ್ ಲಿಸ್ಟ್ ದಾಖಲೆ ಪರಿಶೀಲಿಸಿದಾಗ ತೊಕ್ಕೊಟ್ಟು ಮೊಬೈಲ್ ಅಂಗಡಿ ಮಾಲೀಕ ಇಮ್ರಾನ್‍ನ ಮೊಬೈಲ್ ನಂಬರ್ ಪತ್ತೆಯಾಗಿದೆ. ಅದರಂತೆ ಇಮ್ರಾನ್‍ ನನ್ನು ಉಳ್ಳಾಲ ಪೊಲೀಸರು ವಿಚಾರಣೆ ನಡೆಸಿದ್ದು, ಈ ಸಂದರ್ಭ ಆತ ಯುವತಿಯರಿಗೆ ಮಾಡುತ್ತಿದ್ದ ವಂಚನೆಯ ಬಗ್ಗೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಿ ಈತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Comments are closed.