ಕರಾವಳಿ

ಗಂಗೊಳ್ಳಿ: ದೇವಸ್ಥಾನ ಕೆರೆಗೆ ಬಿದ್ದು ವಿಶೇಷಚೇತನ ಬಾಲಕ ಸಾವು

Pinterest LinkedIn Tumblr

ಕುಂದಾಪುರ: ಆಕಸ್ಮಿಕವಾಗಿ ಕಾಲು ಜಾರಿ ದೇವಸ್ಥಾನದ ಕೆರೆಗೆ ಬಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಗಂಗೊಳ್ಳಿ ಅಂಚೆಕಛೇರಿ ಸಮೀಪದ ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಸರ್ಫ್‌ರಾಜ್(13) ಮೃತ ಬಾಲಕ.

Gangolli_Pond_Youth Death (1) Gangolli_Pond_Youth Death (2) Gangolli_Pond_Youth Death (3)

ಘಟನೆ ವಿವರ: ಅಬ್ದುಲ್ ರಝಾಕ್ ಅವರ 7 ಮಕ್ಕಳ ಪೈಕಿ ಸರ್ಫ್‌ರಾಜ್ ಕಿರಿಯವನಾಗಿದ್ದು ಹುಟ್ಟಿನಿಂದ ವಿಶೇಷಚೇತನನಾಗಿದ್ದ. ಮನೆಯಿಂದ ಸಮೀಪದ ದೇವಸ್ಥಾನವೊಂದರ ಕೆರೆಯ ದಂಡೆಯಲ್ಲಿ ನಡೇದು ಸಾಗುತ್ತಿರುವಾಗ ಆಯತಪ್ಪಿ ಕೆರೆಗೆ ಬಿದ್ದ ಸರ್ಫ್‌ರಾಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮನೆಯಿಂದ ಹೊರಗೆ ತೆರಳಿದ ಬಾಲಕ ಮನೆಗೆ ಬಾರದೇ ಇದ್ದು ಮನೆಮಂದಿ ಹುಡುಕಾಟ ನಡೆಸುತ್ತಿದ್ದ ವೇಳೆ ಸಮೀಪದ ನಿವಾಸಿಯೋರ್ವರಿಗೆ ಕೆರೆಯಲ್ಲಿ ಶವ ತೇಲುತ್ತಿರುವುದು ಗೋಚರಿಸಿದೆ. ಪರಿಶೀಲನೆ ನಡೆಸುವಾಗ ಅದು ಸರ್ಫ್‌ರಾಜ್ ಶವ ಎಂದು ತಿಳಿದುಬಂದಿದೆ.

ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.