ಮಂಗಳೂರು,ಜುಲೈ.29:ಬ್ಯಾಂಕ್ ಗಳ ವಿಲೀನ, ವಿದೇಶಿ ನೇರ ಬಂಡವಾಳಕ್ಕೆ ವಿರೋಧ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ಸಿಬಂದಿಗಳು ದೇಶಾದ್ಯಂತ ಹಮ್ಮಿಕೊಂಡಿರುವ ಒಂದು ದಿನದ ಮುಷ್ಕರದ ಪ್ರಯುಕ್ತ ಇಂದು ಬೆಳಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಸಮೀಪವಿರುವ ಎಸ್.ಬಿ.ಐ ಕಚೇರಿ ಮುಂಭಾಗ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಜಿಲ್ಲಾ ಘಟಕದ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ನೌಕರರು ನಡೆಸಿದ ಮುಷ್ಕರದಿಂದಾಗಿ ಬ್ಯಾಂಕಿಂಗ್ ವಹಿವಾಟಿಗೆ ಧಕ್ಕೆಯಾಗಿದೆ. ಹಣ ಠೇವಣಿ ಇಡುವ, ಹಣ ಪಡೆಯುವ, ಚೆಕ್ ಕ್ಲಿಯರೆನ್ಸ್ ಮತ್ತಿತರ ಸೇವೆಗಳು ಸ್ಥಗಿತಗೊಂಡಿದ್ದು, ವ್ಯಾಪಾರ ವಹಿವಾಟಿಗೆ ಧಕ್ಕೆಯುಂಟುಮಾಡಿತು. ಬ್ಯಾಂಕ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಕೆಲ ಗ್ರಾಹಕರು ಬ್ಯಾಂಕ್‌ಗಳ ಮುಚ್ಚಿದ ಬಾಗಿಲುಗಳನ್ನು ನೋಡಿ ಹಿಂತಿರುಗುವಂತಾಯಿತು.
Comments are closed.