ಕರಾವಳಿ

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿಕ್ಕಿದ ಅವಕಾಶವನ್ನು ತಿರಸ್ಕರಿದ ಶ್ರೀದೇವಿ ಪುತ್ರಿ ಜಾಹ್ನವಿ

Pinterest LinkedIn Tumblr

Mahesh_Babu_Jahnavi

ಮುಂಬೈ : 15ನೇ ವಯಸ್ಸಿನಲ್ಲೇ ಬಾಲಿವುಡ್ ಚಿತ್ರ ನಿರ್ಮಾಪಕರನ್ನ ಸೆಳೆದ ಸುಂದರಿ ಬಾಲಿವುಡ್`ನ ಖ್ಯಾತ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿಗೆ ಹತ್ತಾರು ಸಿನಿಮಾ ಆಫರ್`ಗಳು ಬಂದಿದ್ದರೂ ಇನ್ನೂ ಜಾಹ್ನವಿ ಗ್ರೀನ್ ಸಿಗ್ನಲ್ ನೀಡಿಲ್ಲ. ಅಷ್ಟು ಮಾತ್ರವಾದರೆ ಪರವಾಗಿಲ್ಲ… ಟಾಲಿವುಡ್ ಸುಪರ್ ಸ್ಟಾರ್ ಒಬ್ಬರ ಚಿತ್ರದಲ್ಲಿ ಅವಕಾಶ ಅರಸಿ ಬಂದಗಲೂ ಈ ಆಫರನ್ನೂ ತಿರಸ್ಕರಿಸುವ ಮೂಲಕ ಜಾಹ್ನವಿ ಮತ್ತೆ ಸುದ್ಧಿಯಾಗಿದ್ದಾರೆ.

ಸಿನಿಮಾದಲ್ಲಿ ನಟಿಸುವ ಬಯಕೆ ವ್ಯಕ್ತಪಡಿಸಿದ ಬಳಿಕ ಜಾಹ್ನವಿಗೆ ಹತ್ತಾರು ಸಿನಿಮಾ ಆಫರ್`ಗಳು ಬಂದಿದ್ದವು. ಆದರೆ, ಯಾವೊಂದಕ್ಕೂ ಜಾಹ್ನವಿ ಗ್ರೀನ್ ಸಿಗ್ನಲ್ ನೀಡಿಲ್ಲ. ಇದೀಗ. ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ನೀಡಿದ್ದ ಆಫರನ್ನೂ ಜಾಹ್ನವಿ ತಿರಸ್ಕರಿಸಿದ್ದಾಳೆ ಎಂಬ ವರದಿ ಬಂದಿದೆ.

ಘಜಿನಿ ಮತ್ತು ಹಾಲಿಡೇ ಸಿನಿಮಾ ಖ್ಯಾತಿಯ ನಿರ್ದೇಶಕ ಮುರುಗದಾಸ್, 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ, ಮಹೇಶ್ ಬಾಬು ನಾಯಕ ನಟನಾಗಿರುವ ಚಿತ್ರದ ಮೂಲಕ ಜಾಹ್ನವಿಯನ್ನ ಚಿತ್ರರಂಗಕ್ಕೆ ಪರಿಚಯಿಸುವ ಬಗ್ಗೆ ಬೋನಿ ಕಪೂರ್ ಮತ್ತು ಶ್ರೀದೇವಿ ಮುಂದೆ ಪ್ರಸ್ತಾಪ ಇಟ್ಟಿದ್ದರಂತೆ.

ನಿರ್ದೇಶಕರು ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಈ ವಾರಾಂತ್ಯಕ್ಕೆ ಜಾಹ್ನವಿ ಶೂಟಿಂಗ್`ನಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ. ಈ ಆಫರನ್ನ ಜಾಹ್ನವಿ ಸಾರಸಗಟಾಗಿ ತಿರಸ್ಕರಿಸಿದ್ದಾರೆ.

ನಾನಿನ್ನೂ ನಟನೆಗೆ ಸಂಪೂರ್ಣವಾಗಿ ತಯಾರಾಗಬೇಕಿದೆ ಎಂದಿರುವ ಜಾಹ್ನವಿ, ಫಿಟ್ನೆಸ್`ನತ್ತ ಗಮನಹರಿಸಿದ್ದಾರೆ. ಅಲ್ಲದೆ, ಲಾಸ್ ಏಂಜಲೀಸ್`ನ ಲೀ ಸ್ತ್ಟ್ರಾಸ್ ಬರ್ಗ್`ನ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್`ಟಿಟ್ಯೂಟ್`ನಲ್ಲಿ ವಿವಿಧ ರೀತಿಯ ನೃತ್ಯ ಪ್ರಾಕಾರಗಳನ್ನೂ ಕಲಿಯುತ್ತಿದ್ದಾರಂತೆ.

ಸಿನಿಮಾ ರಂಗದಲ್ಲಿ ಏನೂ ಬೇಕಾದರೂ ಆಗ ಬಹುದು ಆದರೆ ಕೆಲವೊಂದು ಸಂದರ್ಭ ಮಾತ್ರ ಭವಿಷ್ಯ ರೂಪಿಸುವ ಕೆಲಸವನ್ನು ಮಾಡಲು ಕೆಲವೊಂದು ನಿರ್ಧಾರಗಳೇ ಪ್ರಮುಖವಾಗುತ್ತದೆ ಎಂಬ ಸತ್ಯ ತಿಳಿಯುವಾಗ ತಡವಾಗುತ್ತದೆ.

Comments are closed.