*ಯೋಗೀಶ್ ಕುಂಭಾಸಿ
ಕುಂದಾಪುರ: ಯಮರೂಪಿಯಾಗಿ ಬಂದ ಟ್ಯಾಂಕರೊಂದು ಒಬ್ಬನ ಪ್ರಾಣಕ್ಕೆ ಕಂಠಕವಾದ ಘಟನೆ ತೆಕ್ಕಟ್ಟೆ ಬಸ್ಸು ನಿಲ್ದಾಣದ ಸಮೀಪ ಶನಿವಾರ ಬೆಳಿಗ್ಗೆ ನಡೆದಿದ್ದು ಈ ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತೆಕ್ಕಟ್ಟೆ ಬಾಳಿಬೆಟ್ಟು ನಿವಾಸಿ ಅಣ್ಣಪ್ಪ(54) ಮೃತ ದುರ್ದೈವಿ.
ಘಟನೆ ವಿವರ: ಅಣ್ಣಪ್ಪ ಅವರು ತೆಕ್ಕಟ್ಟೆಯವರಾಗಿದ್ದು ಕಲ್ಲುಕೆತ್ತುವ ಕೆಲಸವನ್ನು ಮಾಡಿಕೊಂಡಿದ್ದು ನಿತ್ಯದಂತೆ ತನ್ನ ಜೊತೆಕೆಲಸದವರ ಜೊತೆ ಕೆಲಸಕ್ಕೆ ತೆರಳುವ ಮೊದಲು ತೆಕ್ಕಟ್ಟೆ ಬಸ್ ಸ್ಟಾಂಡ್ ಸಮೀಪದಲ್ಲಿ ನಿಂತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ವಾಹನವೊಂದನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ತೀರಾ ಎಡಭಾಗಕ್ಕೆ ಚಲಿಸಿದ್ದಲ್ಲದೇ ರಸ್ತೆ ಸಮೀಪ ನಿಂತಿದ್ದ 407 ಗೂಡ್ಸ್ ವಾಹನ, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಎದುರು ನಿಂತಿದ್ದ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಡಿಕ್ಕಿಯಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅಣ್ಣಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಟ್ಯಾಂಕರ್ ಮುಂದಕ್ಕೆ ಸಾಗಿ ಬಟ್ಟೆಮಳಿಗೆಯ ಕಾಂಪೋಂಡ್ ಗೋಡೆಗೆ ಡಿಕ್ಕಿಹೊಡೆದು ನಿಂತಿದೆ.
ಟ್ಯಾಂಕರ್ ಅಡಿಭಾಗದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿದ್ದ ಅಣ್ಣಪ್ಪ ಮ್ರತದೇಹ ಮೊದಲು ಯಾರಿಗೂ ಕಾಣಿಸಿರಲಿಲ್ಲ. ಹಲವು ಸಮಯದ ಬಳಿಕ ವ್ಯಕ್ತಿಯೋರ್ವರಿಗೆ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೋರ್ವರ ಕಾಲಿನ ಭಾಗವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮೃತದೇಹದ ಮೇಲಿದ್ದ ಮಣ್ಣು ಮೊದಲಾದವ್ಗಳನ್ನು ಸರಿಸಿ ಪರಿಶೀಲಿಸುವಾಗ ಅದು ಸ್ಥಳೀಯ ಅಣ್ಣಪ್ಪ ಅವರ ಶವ ಎಂದು ಗುರುತಿಸಲಾಗಿದೆ.
ನಿತ್ಯ ಮುಂಜಾನೆ ಈ ಭಾಗದಲ್ಲಿ ಕೆಲಸಗಾರರು ನಿಲ್ಲುವುವುದು ಮಾಮೂಲಿಯಾಗಿದ್ದು ಈ ವೇಳೆ ಟ್ಯಾಂಕರ್ ಅವರ ಮೇಲೆರಗಿರಭುದೆಂದು ಅಂದಾಜಿಸಲಾಗಿದೆ. ಗಾಯಾಳು ಮೂವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.