ಮಂಗಳೂರು: ಮಂಗಳೂರಿನ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ತಾಣವಾದ ಪುರಭವನಕ್ಕೆ ಶೀಘ್ರದಲ್ಲೇ ದಲಿತೋದ್ಧಾರಕ ‘ಕುದ್ಮುಲ್ ರಂಗರಾವ್ ಸ್ಮಾರಕ’ ಎಂಬ ಹೆಸರು ಬರಲಿದೆ. ದಲಿತರ ಉದ್ಧಾರಕಾಗಿ ಹಲವಾರು ಕೊಡುಗೆಗಳನ್ನು ನೀಡಿದಂತಹ ಮಹಾನ್ ಚೇತನಾ ಕುದ್ಮುಲ್ ರಂಗರಾವ್ ಅವರು (1859 ಜೂ.29-1928 ಜ.30) ಅವರು 1897ರಲ್ಲಿ ಹಿಂದುಳಿದ ವರ್ಗದ ಮಂಡಳಿ ಸ್ಥಾಪಿಸಿ, ಆ ಮೂಲಕ ದಲಿತರಿಗೆ ಶಿಕ್ಷಣ, ಉತ್ತಮ ಮನೆ, ಕುಡಿಯುವ ನೀರು, ಆರೋಗ್ಯ, ಸಶಕ್ತೀಕರಣ ಯೋಜನೆಗಳನ್ನು ರೂಪಿಸಿ, ಶೋಷಣೆಯಿಂದ ಮುಕ್ತಗಾಗಿ ಹೋರಾಟ ನಡೆಸಿದ್ದರು.
ಇದೀಗ ಶುಕ್ರವಾರ ಮಂಗಳೂರು ಮೇಯರ್ ಹರಿನಾಥ್ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿರುವ ಪುರಭವನಕ್ಕೆ ‘ಕುದ್ಮುಲ್ ರಂಗರಾವ್ ಸ್ಮಾರಕ’ ಎಂದು ಹೆಸರಿಡಲು ನಿರ್ಣಯಿಸಲಾಯಿತು.ಮುಖ್ಯ ಸಚೇತಕ ಶಶಿಧರ ಹೆಗ್ಡೆ ಕಾರ್ಯಸೂಚಿ ಮಂಡಿಸಿದ್ದು, ಒಪ್ಪಿಗೆ ಸೂಚಿಸಲಾಯಿತು.
ಈ ಬಗ್ಗೆ ಪತ್ರಿಕಾ ಜಾಹೀರಾತಿನ ಮೂಲಕ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಿ, ಪಾಲಿಕೆ ಅನುಮೋದನೆ ಪಡೆದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿ ಪರಿಶೀಲಿಸಿ, ಅಲ್ಲಿಯೂ ಪತ್ರಿಕಾ ಜಾಹೀರಾತು ಮೂಲಕ ಸಾರ್ವಜನಿಕರ ಅಭಿಪ್ರಾಯ ಪಡೆದು, ಪೊಲೀಸ್ ಇಲಾಖೆ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಹಿತ ಪ್ರಕ್ರಿಯೆ ಮುಗಿಸಿದ ಬಳಿಕ ಜಿಲ್ಲಾಧಿಕಾರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ಬಳಿಕ ಅಧಿಕೃತವಾಗಿ ನಾಮಕರಣ ನಡೆಯಲಿದೆ.
ಪುರಭವನದ ಎದುರಿನ ಮೈದಾನ ರಸ್ತೆಯಲ್ಲಿ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿರುವ ಕುರಿತು ಸಭೆಯ ಕಾರ್ಯಸೂಚಿಯಲ್ಲಿ ವಿಷಯ ಪ್ರಸ್ತಾಪವಾಗಿ ನಗರ ಯೋಜನಾ ಸ್ಥಾಯಿ ಸಮಿತಿಯಲ್ಲಿ ಚರ್ಚೆಗೆ ನಿರ್ಣಯಿಸಲಾಯಿತು.
ಸ್ಕೈವಾಕ್ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ. 95ರಷ್ಟು ಭಾಗವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶೇ. 5ರಷ್ಟನ್ನು ಮಹಾನಗರ ಪಾಲಿಕೆ ಭರಿಸಬೇಕಿದೆ ಎಂದು ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ ಪ್ರಸ್ತಾವನೆ ಮಂಡಿಸಿದರು.
ಈ ಸಂದರ್ಭದಲ್ಲಿ ವಿಧಾ ಪರಿಷತ್‌ನ ಮುಖ್ಯ ಸಚೇತಕರಾಗಿ ನೇಮಕವಾದ ಐವನ್ ಡಿಸೋಜಾರನ್ನು ಸನ್ಮಾನಿಸಲಾಯಿತು. ಉಪ ಮೇಯರ್ ಸುಮಿತ್ರ ಕರಿಯ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅಪ್ಪಿ, ಕವಿತಾ ಸನಿಲ್, ಬಶೀರ್ ಅಹಮ್ಮದ್ ಉಪಸ್ಥಿತರಿದ್ದರು.
Comments are closed.