ಕರಾವಳಿ

ಗಂಗೊಳ್ಳಿ ಉರ್ದು ಶಾಲೆ : ಸುಸಜ್ಜಿತ ಅಕ್ಷರದಾಸೋಹ ಕಟ್ಟಡ ‘ಅನ್ನಪೂರ್ಣ’ ಉದ್ಘಾಟನೆ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಸುಮಾರು 120 ವರ್ಷಗಳಿಗೂ ಅಧಿಕ ಇತಿಹಾಸವಿರುವ ಗಂಗೊಳ್ಳಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 3.31 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಅಕ್ಷರದಾಸೋಹ ಕಟ್ಟಡ ’ಅನ್ನಪೂರ್ಣ’ ಇದರ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು.

‘ಅನ್ನಪೂರ್ಣ’ ಕಟ್ಟಡವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಮಾತನಾಡಿ, ಸರಕಾರವು ಈ ಉತ್ತಮವಾದ ಯೋಜನೆಯ ಮೂಲಕ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಎಲ್ಲಾ ಶಾಲೆಗಳಲ್ಲಿ ಸುಸಜ್ಜಿತವಾದ ಅಡುಗೆ ಕೋಣೆ ನಿರ್ಮಾಣ ಮಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದೂಟ ನೀಡಲು ಕ್ರಮಕೈಗೊಂಡಿದೆ ಎಂದರು.

Gangolli_Urdhu School_News (1) Gangolli_Urdhu School_News (2) Gangolli_Urdhu School_News (3) Gangolli_Urdhu School_News (4) Gangolli_Urdhu School_News (5) Gangolli_Urdhu School_News (6) Gangolli_Urdhu School_News (7) Gangolli_Urdhu School_News (8) Gangolli_Urdhu School_News (9) Gangolli_Urdhu School_News (10) Gangolli_Urdhu School_News (11) Gangolli_Urdhu School_News (12) Gangolli_Urdhu School_News (13) Gangolli_Urdhu School_News (14) Gangolli_Urdhu School_News (15) Gangolli_Urdhu School_News (16) Gangolli_Urdhu School_News (17) Gangolli_Urdhu School_News (18) Gangolli_Urdhu School_News (19)

ಕುಂದಾಪುರ ತಾಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಮಾತನಾಡಿ, ಸರಕಾರದ ಇಂತಹ ಉತ್ತಮ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಂಘಟಿತವಾಗಿ ಪ್ರಯತ್ನ ಅತ್ಯಗತ್ಯ. ಹಳೆ ವಿದ್ಯಾರ್ಥಿ ಸಂಘ ಹಾಗೂ ಎಸ್.ಡಿ.ಎಂ.ಸಿ. ಹಗೂ ಇತರರ ಸಂಪೂರ್ಣ ಪರಿಶ್ರಮದ ಮೂಲಕ ಜಿಲ್ಲೆಯಲ್ಲಿಯೇ ಮಾದರಿಯಾದ ಅಕ್ಷರ ದಾಸೋಹ ಕಟ್ಟಡ ನಿರ್ಮಾಣವಾಗಿದೆ. ಸ್ವಚ್ಚತೆ, ಗುಣಾತ್ಮಕ ಹಾಗೂ ಪೌಷ್ಠಿಕತೆಯುಳ್ಳ ಆಹಾರವನ್ನು ಮಕ್ಕಳಿಗೆ ನೀಡುವ ಮೂಲಕ ಈ ಸೇವೆಯನ್ನು ಸಾರ್ಥಕಗೊಳಿಸಬೇಕೆಂದರು.

ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಹಾದಿ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದ್ದರು. ಶಾಲೆಯ ನಿವ್ರತ್ತ ಮುಖ್ಯ ಶಿಕ್ಷಕಿ ಸಯೀದಾ ಬಾನು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಗಂಗೊಳ್ಳಿ ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಗಂಗೊಳ್ಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ತಿಲೋತ್ತಮ, ಶಾಲೆಯ ಎಸ್‌ಡಿ‌ಎಂಸಿ ಅಧ್ಯಕ್ಷ ಮುಜಾಮಿಲ್, ಉದ್ಯಮಿ ಮೌಲಾನಾ ರಿಜ್ವಾನ್, ಶಾಲೆಯ ನಿವ್ರತ್ತ ಮುಖ್ಯ ಶಿಕ್ಷಕಿ ಸಯೀದಾ ಬಾನು, ಶಾಲೆಯ ಎಸ್‌ಡಿ‌ಎಂಸಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಶಾಲೆಯ ಸಹಶಿಕ್ಷಕಿ ರಾಗಿಣಿ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಶಕೀಲಾ ತಬಸ್ಸುನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಭಾರತಿ ಕಲ್ಕೂರ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಬಾನು ವಂದಿಸಿದರು.

Comments are closed.