ಕರಾವಳಿ

ಅಮೇರಿಕದಲ್ಲಿರುವ ಮುಸ್ಲಿಂ ವಿರೋಧಿ ಭಾವನೆ ಬಗ್ಗೆ ಮುಸ್ಲಿಂ ಮಹಿಳೆಯ ಕ್ಷಮೆ ಕೋರಿದ ಅಪರಿಚಿತ

Pinterest LinkedIn Tumblr

Amercan_Muslim_sorry

__ಅಮೆರಿಕ ಸಮಾಜದಲ್ಲಿರುವ ಮುಸ್ಲಿಂ ವಿರೋಧಿ ಭಾವನೆ ಬಗ್ಗೆ ಅಪರಿಚಿತ ಯಹೂದಿ ವೃದ್ಧರೊಬ್ಬರು ಮುಸ್ಲಿಂ ಮಹಿಳೆಯ ಕ್ಷಮೆ ಕೋರಿದ ಅಪರೂಪದ ಘಟನೆ, ಇಬ್ಬರು ಮಕ್ಕಳ ತಾಯಿಯಾದ ಮುಸ್ಲಿಂ ಮಹಿಳೆಗೆ ರೋಮಾಂಚನ ಮೂಡಿಸಿದೆ.

ಮಹಿಳೆ ಈ ಹೃದಯಸ್ಪರ್ಶಿ ಘಟನೆಯನ್ನು ಪೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೈಯಲ್ಲಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಬೋಸ್ಟನ್ನ ಪುಸ್ತಕಾಲಯಕ್ಕೆ ಲೀನಾ ಅಲ್-ಅರಿಯನ್ ಹೋಗಿದ್ದಾಗ ದಿಢೀರನೇ ಪಕ್ಕಕ್ಕೆ ಬಂದ ವೃದ್ಧರೊಬ್ಬರು ಆಗಮಿಸಿ ಸಾಮಾನ್ಯವಾಗಿ ಸಮಾಜದಲ್ಲಿ ಇರುವ ಮುಸ್ಲಿಂ ವಿರೋಧಿ ಭಾವನೆಗಳ ಬಗ್ಗೆ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದರು.

ಲೆನ್ನಿ ಎಂಬ 90 ವರ್ಷದ ಇವರು, ನಾವು ಯಹೂದಿಯರು. ನಮ್ಮ ತಂದೆ ತಾಯಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ತಪ್ಪುಕಲ್ಪನೆ ಮತ್ತು ತಾರತಮ್ಯದಿಂದ ಆಗಿರಬಹುದಾದ ನೋವಿಗೆ ಕ್ಷಮೆ ಇರಲಿ ಎಂದು ಕೇಳಿಕೊಂಡರು.

ಮಕ್ಕಳು ಕೂಡಾ ಈ ಮುಸ್ಲಿಂ ವಿರೋಧಿ ಪ್ರಚಾರದಿಂದ ತೊಂದರೆಗೆ ಸಿಲುಕಬಹುದು ಎಂದು ಅವರು ಹೇಳಿದರು. ಅಮೆರಿಕನ್ನರು ಸಭ್ಯ ಜನ. ನನ್ನಂಥವರನ್ನು ಅವರು ದ್ವೇಷಿಸುವುದಿಲ್ಲ. ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಇಬ್ಬರೂ ಮಕ್ಕಳಿಗೆ ಉಡುಗೊರೆಗಳನ್ನೂ ತಂದಿದ್ದರು . “ಜನಾಂಗೀಯ ವಿರೋಧಿ ಹೃದಯಗಳಿಗೆ ಆಧುನಿಕ ಚಿಕನ್ಸೂಪ್” ಎಂಬ ಶೀರ್ಷಿಕೆಯಡಿ ಮಾಡಿದ ಪೋಸ್ಟನ್ನು 1200ಕ್ಕೂ ಹೆಚ್ಚು ಮಂದಿ ಷೇರ್ ಮಾಡಿದ್ದಾರೆ.

ವರದಿ ಕೃಪೆ : ವಾಭಾ

Comments are closed.