ಕರಾವಳಿ

ಹೊಸ ಸಿಮ್ ನೀಡಿದ ಸುಳಿವು : ಇಲ್ಲಿ ನಾಪತ್ತೆಯಾದ ಸಫಾನಾ ಬೆಂಗಳೂರಿನಲ್ಲಿ ಪತ್ತೆ

Pinterest LinkedIn Tumblr

Missing_Girl_Safana

ಮಂಗಳೂರು / ಉಳ್ಳಾಲ: ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂಪಲ ಬೈಪಾಸ್ ನಿವಾಸಿ ಸಫಾನ(20) ಬೆಂಗಳೂರಿನ ಹೊಸೂರಿನಲ್ಲಿ ಪತ್ತೆಯಾಗಿದ್ದು, ಉಳ್ಳಾಲ ಪೊಲೀಸರು ಅವರನ್ನು ವಾಪಸ್ ಕರೆತಂದಿದ್ದಾರೆ. ತೊಕ್ಕೊಟ್ಟು ಟೈಲರ್ ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಫಾನ ಕೆಲಸಕ್ಕೆಂದು ತೆರಳಿದವಳು ಕಳೆದ ಜು.21 ರಂದು ನಾಪತ್ತೆಯಾಗಿದ್ದಳು.

ಈ ಕುರಿತು ಉಳ್ಳಾಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಈ ಕುರಿತ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ತೊಕ್ಕೊಟ್ಟು ಮೊಬೈಲಿನ ಅಂಗಡಿಯೋರ್ವರು ಸಫಾನ ಖರೀದಿಸಿರುವ ನೂತನ ಸಿಮ್ ಕುರಿತ ಮಾಹಿತಿಯನ್ನು ಉಳ್ಳಾಲ ಪೊಲೀಸರಿಗೆ ನೀಡಿದ್ದರು.

ಅದರ ಜಾಡು ಹಿಡಿದ ಪೊಲೀಸರು ಸಫಾನ ಬೆಂಗಳೂರಿನಲ್ಲಿರುವುದು ಗೊತ್ತಾಗಿದೆ. . ಇದರಿಂದ ಆಕೆಯನ್ನು ಪತ್ತೆ ಹಚ್ಚಲು ಪೊಲೀಸರು ಬೆಂಗಳೂರು ತೆರಳಿದಾಗ ಸಫಾನ ಪತ್ತೆಯಾದಳು. ಆಕೆಯನ್ನು ಈ ಸಂದರ್ಭದಲ್ಲಿ ಪೊಲೀಸರು ವಿಚಾರಿಸಿದ್ದು, ಈ ವೇಳೆ ಆಕೆ ಪತ್ರಿಕೆಯಲ್ಲಿ 25,000 ರೂ. ಸಂಬಳದ ಕೆಲಸದ ಜಾಹೀರಾತು ನೋಡಿ ಬೆಂಗಳೂರಿಗೆ ಬಂದಿರುವುದಾಗಿ ತಿಳಿಸಿದ್ದಾಳೆ. ಸದ್ಯ ಸಫಾನಾಳನ್ನು ವಾಪಸ್ಸು ಕರೆತರಲಾಗಿದೆ.

Comments are closed.