ಕರಾವಳಿ

ಸೆಕ್ಸ್ ವೇಳೆ ಲೈಂಗಿಕಾಸಕ್ತಿ ಕಡಿಮೆಯಾಗುತ್ತಿದೆಯೇ…ಈ ಬಗ್ಗೆ ಖ್ಯಾತ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.

Pinterest LinkedIn Tumblr

 

Sex_Umhappy-People

ಬೆಂಗಳೂರು : ಲೈಂಗಿಕ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹಲವು ಪುರುಷರು ಇಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಸುಖೀ ಕ್ಲಿನಿಕ್`ನಲ್ಲಿ ವೈದ್ಯರು ನೀಡಿರುವ ಟಿಪ್ಸ್ ಇಲ್ಲಿವೆ.

1) ನನಗೆ 30 ವರ್ಷ. ವಿವಾಹಿತೆ. ಈಗಾಗಲೇ ಒಂದು ಮಗುವಾಗಿ ಮೂರು ವರ್ಷವಾಗಿದೆ. ಸಂಭೋಗದ ವೇಳೆ ಕಾಂಡೋಮ್ ಅನ್ನು ಬಳಸುತ್ತಿದ್ದೇವೆ. ಹೆಚ್ಚೆಚ್ಚು ಕಾಂಡೋಮ್ ಬಳಸಿದಾಗಲೆಲ್ಲ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಂತಾಗುತ್ತದೆ. ವಿಚಿತ್ರ ತೇಗು ಬರುತ್ತದೆ. ಇದು ಕಾಂಡೋಮ್ನ ಅಡ್ಡಪರಿಣಾಮವೇ? ಪರಿಹಾರ ತಿಳಿಸಿ. – ಹೆಸರುಬೇಡ, ಊರುಬೇಡ

ಕಾಂಡೋಮ್ ಬಳಸುವುದರಿಂದ ಹೀಗಾಗುವುದಿಲ್ಲ. ಗ್ಯಾಸ್ಟ್ರೈಟಿಸ್ ಅಥವಾ ಜಠರದುರಿಯಿಂದ ಹೀಗಾಗಿರಬಹುದು. ಮಾನಸಿಕವಾಗಿ ಹಾಗನಿಸುತ್ತಿರಲೂಬಹುದು. ಒಬ್ಬ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅಥವಾ ಜಠರ- ಕರುಳು ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.

2) 25 ವರ್ಷದ ನಾನು ಈಗಷ್ಟೇ ಮದುವೆ ಆಗಿದ್ದೇನೆ. ಸೆಕ್ಸ್ ವೇಳೆ ಬೇಗನೆ ನಿಶ್ಶಕ್ತನಾಗುತ್ತೇನೆ. ನೋಡಲೂ ತುಂಬಾ ಸಪೂರ ಇರುವ ಕಾರಣ ಹೀಗಾಗುತ್ತದಾ? ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ನಾನು ಸೇವಿಸಲೇಬೇಕಾದ ಆಹಾರಗಳು ಯಾವುವು? ಯಾವ ಆಹಾರದಿಂದ ನಾನು ದೂರವಿರಬೇಕು?- ಎಂಎಚ್’ಕೆ, ಮದ್ದೂರು

ಸಪೂರ, ಅಂದರೆ ಬೊಜ್ಜಿದ್ದರೆ, ದೈಹಿಕ ಚಟುವಟಿಕೆ, ಲವಲವಿಕೆಗಳು ಕಡಿಮೆಯಾಗಿ ಸ್ವಲ್ಪ ನಿಶ್ಶಕ್ತಿಯಾಗಬಹುದು. ದೇಹದ ಭಾರದಿಂದ ಆಯಾಸವಾಗಬಹುದು. ವ್ಯಾಯಾಮ, ಆಹಾರ ನಿಯಂತ್ರಣಗಳಿಂದ ದೇಹತೂಕ ಕಡಿಮೆ ಮಾಡಿಕೊಳ್ಳಿ. ವೈದ್ಯರ ಸಲಹೆಯನ್ನೂ ಪಡೆಯಿರಿ. ಸಂಭೋಗಪೂರ್ವ ಪ್ರಣಯದಾಟಗಳಲ್ಲಿ ಹೆಚ್ಚು ಹೊತ್ತು ತೊಡಗಿಕೊಳ್ಳಿ. ನಿಮಗೆ ಭಾರವಾಗದ ಭಂಗಿಗಳನ್ನು ಆರಿಸಿಕೊಳ್ಳಿ. ಲೈಂಗಿಕಶಕ್ತಿ ಹೆಚ್ಚಿಸಿಕೊಳ್ಳಲು ತಿನ್ನಬೇಕಾದ, ತಿನ್ನಬಾರದ ಆಹಾರಗಳೆಂದೇನಿಲ್ಲ. ಉತ್ಸಾಹ, ಚೈತನ್ಯ ಹೆಚ್ಚಿಸುವ ಆಹಾರಗಳಿಂದ ಲೈಂಗಿಕಾಸಕ್ತಿಯೂ ಹೆಚ್ಚುತ್ತದೆ. ಆಯುರ್ವೇದದ ದೃಷ್ಟಿಯಿಂದ ಹಾಲು, ಈರುಳ್ಳಿ, ನುಗ್ಗೇಕಾಯಿ, ಅಶ್ವಗಂಧ ಲೇಹ್ಯ ಮೊದಲಾದವುಗಳು ಲೈಂಗಿಕಾಸಕ್ತಿಯನ್ನು ವರ್ಧಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಆಯುರ್ವೇದ ತಜ್ಞರನ್ನು ಭೇಟಿಯಾಗಿ. ಆದರೆ ಆಯುರ್ವೇದವೇ ಹೇಳುವಂತೆ, ಚೆನ್ನಾಗಿ ಸಹಕರಿಸುವ, ಪ್ರಚೋದಿಸುವ, ಸ್ಪಂದಿಸುವ ಸಂಗಾತಿಯೇ ಅತ್ಯುತ್ತಮ ಔಷಧಿ!

: ವೈದ್ಯರು: ಡಾ. ಬಿ.ಆರ್.ಸುಹಾಸ್
(ಕೃಪೆ: ಕನ್ನಡಪ್ರಭ)

Comments are closed.