ಉಡುಪಿ: ಜಿಲ್ಲೆಯ ಪಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯವರು ನಾಪತ್ತೆಯಾದ ಬಗ್ಗೆ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕಾಣೆಯಾದ ಶರ್ಮಿಳಾ…
ಪಡುಬಿದ್ರೆ ಪೊಲೀಸ್ ಠಾಣಾ ಸರಹದ್ದಿನ ಎಲ್ಲೂರು ಗ್ರಾಮದ ವಾಸಿ ದಿ.ಜಯರಾಮ ಕುಲಾಲ್ರವರ ಮಗಳು ಸುಮಾರು 23 ವರ್ಷ ಪ್ರಾಯದ ಶರ್ಮಿಳಾ ಎಂಬವರು ಆಗಸ್ಟ್ 1 ರಂದು ಬೆಳಗ್ಗೆ 9 ಗಂಟೆಗೆ ಮನೆಯಿಂದ ಗುಡ್ಡಗೆ ಹೋದವರು ಮನೆಗೆ ಹಿಂದಿರುಗಿ ಬಾರದೆ ಕಾಣೆಯಾಗಿದ್ದು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾದ ಹುಡುಗಿಯ ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ದುಂಡು ಮುಖ ಹಾಗೂ ಮೂಗಲ್ಲಿ ಮೂಗುತಿ ಇದ್ದು, ಕಪ್ಪು ಬಣ್ಣದ ಚೂಡಿದಾರ್ ಹಾಗೂ ನೇರಳೆ ಬಣ್ಣದ ಟಾಪ್ ಧರಿಸಿರುತ್ತಾರೆ. ತುಳು, ಕನ್ನಡ ಹಾಗೂ ಸ್ವಲ್ಪ ಹಿಂದಿ ಮತ್ತು ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ.
ರಮ್ಲತ್ ಕಾಣೆಯಾದ ಬಗ್ಗೆ..
ಪಡುಬಿದ್ರೆ ಪೊಲೀಸ್ ಠಾಣಾ ಸರಹದ್ದಿನ ತೆಂಕ ಎರ್ಮಾಳು ಗ್ರಾಮದ ವಾಸಿ ಹಾಸಿಂ ರವರ ಮಗಳು ಸುಮಾರು 23 ವರ್ಷ ಪ್ರಾಯದ ರಮ್ಲತ್ ಎಂಬವರು ಜುಲೈ 30 ರಂದು ರಾತ್ರಿ 8.30 ಗಂಟೆಗೆ ಮನೆಯಿಂದ ಹೊರಗೆ ಹೋದವರು ಮನೆಗೆ ಹಿಂದಿರುಗಿ ಬಾರದೆ ಕಾಣೆಯಾಗಿದ್ದು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾದ ಹುಡುಗಿಯ ಎತ್ತರ ೫ ಅಡಿ, ಗೋಧಿ ಮೈ ಬಣ್ಣ, ಸಪೂರ ಶರೀರ, ಕೋಲು ಮುಖ ಹೊಂದಿದ್ದು, ನೀಲಿ ಬಣ್ಣದ ಚಿತ್ತಾರವಿರುವ ಚೂಡಿದಾರ್ ಟಾಪ್ ಹಾಗೂ ಕೆಂಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ. ತುಳು, ಕನ್ನಡ ಹಾಗೂ ಬ್ಯಾರಿ ಭಾಷೆ ಬಲ್ಲವರಾಗಿರುತ್ತಾರೆ.
ಈರ್ವರು ಹುಡುಗಿಯರ ಬಗೆ ಮಾಹಿತಿ ದೊರೆತಲ್ಲಿ ಠಾಣಾ ದೂರವಾಣಿ ಸಂಖ್ಯೆ 0820-2555452 ಅಥವಾ ಮೊಬೈಲ್ ಸಂಖ್ಯೆ 99480805450ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Comments are closed.