ನವದೆಹಲಿ: ರಾಜ್ಯಸಭೆಯಲ್ಲಿ ಸತತ 7 ಗಂಟೆಗಳ ಚರ್ಚೆ ನಂತರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ ಟಿ ಮಸೂದೆ ಅಂಗೀಕಾರಗೊಂಡಿದೆ.
ಮಸೂದೆ ಬಗ್ಗೆ ಅರುಣ್ ಜೇಟ್ಲಿ ನೀಡಿದ ಉತ್ತರಕ್ಕೆ ತೃಪ್ತರಾಗದೆ ಎಐಎಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿ ವಿರೋಧ ವ್ಯಕ್ತಪಡಿಸಿದರೆ, ಮಸೂದೆಯಲ್ಲಿ ತಾನು ಸೂಚಿಸಿದ್ದ ಕೆಲವೊಂದು ಅಂಶಗಳನ್ನು ಅಳವಡಿಸಲು ಮತ್ತೆ ಕೆಲವು ಅಂಶಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಹ ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಬೆಂಬಲಿಸಿದ್ದು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಿದೆ.
ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಮಾಡಿ ಮಾತನಾಡಿದ್ದ ಅರುಣ್ ಜೇಟ್ಲಿ, ಜಿಎಸ್ ಟಿ ಮಸೂದೆಯನ್ನು ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಆದಾಯ ಹೆಚ್ಚಿಸುತ್ತದೆ ಎಂದು ಹೇಳಿದ್ದರು, ರಾಜಕೀಯ ಪಕ್ಷಗಳ ನಡುವಿನ ಮಾತುಕತೆಯ ಪರಿಣಾಮವಾಗಿ ಜಿಎಸ್ ಟಿ ಮಸೂದೆ ಬಗ್ಗೆ ಒಮ್ಮತ ಮೂಡುವುದು ಸಾಧ್ಯವಾಗಿದ್ದು, ಜಿಎಸ್ ಟಿ ಮಸೂದೆ ಅಂಗೀಕಾರ ಸಾಧ್ಯವಾಗಿದ್ದು, ರಾಜ್ಯಸಭೆಯಲ್ಲಿ ಅವಿರೋಧವಾಗಿ ಕೇಂದ್ರ ಸರ್ಕಾರದ ಮಸೂದೆ ಅಂಗೀಕಾರವಾಗಿದೆ
ಎನ್’ಡಿಎ ಸರ್ಕಾರದ ಮಹತ್ವದ ಮಸೂದೆ ಸರಕು ಮತ್ತು ಸೇವೆಗಳ ಏಕರೂಪ ರೀತಿಯ ಜಿಎಸ್’ಟಿ’-2014 ತೆರಿಗೆಯಿಂದ ಸಾರ್ವಜನಿಕರಿಗೆ ಯಾವ ವಸ್ತುಗಳು ಅಗ್ಗವಾಗಲಿದೆ ಮತ್ತು ಯಾವುದು ದುಬಾರಿಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ. ಈ ತೆರಿಗೆಗಳು ಏಪ್ರಿಲ್ 1, 2017ರಂದು ಜಾರಿಯಾಗಲಿವೆ.
ದುಬಾರಿಯಾಗುವ ವಸ್ತುಗಳು
-ಸಣ್ಣ ಕಾರುಗಳು
-ಪ್ರವಾಸ
-ವಿಮಾನ ಪ್ರಯಾಣ
-ಆಂಬುಲೆನ್ಸ್ ಸೇವೆ
-ಸಾಂಸ್ಕೃತಿಕ ಚಟುವಟಿಕೆ
-ಕೆಲವು ತೀರ್ಥಯಾತ್ರೆ
-ಹೋಟೆಲ್ನಲ್ಲಿ ಸೇವಿಸುವ ಆಹಾರ
-ಸಿಗರೇಟ್
-ಮೊಬೈಲ್ ಕರೆಗಳ ದರ
-ಪ್ರಸ್ತುತ ಶೇ 6 ರಿಂದ ಶೇ 8 ರಷ್ಟು ತೆರಿಗೆ ಇರುವ ಕಚ್ಚಾ ಆಹಾರ ಪದಾರ್ಥ
-ಬ್ರಾಂಡೆಡ್ ಆಭರಣಗಳು ಇತ್ಯಾದಿ
ಅಗ್ಗ
-ಕೈಗಾರಿಕಾ ಉತ್ಪನ್ನಗಳು
-ಎಸ್ಯುವಿ, ಐಷಾರಾಮಿ ಕಾರುಗಳು
-ದ್ವಿಚಕ್ರ ವಾಹನ
-ಎಲೆಕ್ಟ್ರಾನಿಕ್ ವಸ್ತುಗಳು
ಇವು ಜಿಎಸ್’ಟಿ ವ್ಯಾಪ್ತಿಗೆ ಬರುವುದಿಲ್ಲ
-ಆಲ್ಕೋಹಾಲ್
-ಪೆಟ್ರೋಲಿಯಂ
-ಹೈಸ್ಪೀಡ್ ಡೀಸೆಲ್
-ಪೆಟ್ರೋಲ್
-ನೈಸರ್ಗಿಕ ಅನಿಲ
-ವೈಮಾನಿಕ ಇಂಧನ
Comments are closed.