ಕರಾವಳಿ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಕಾಶಿ ಇನ್ನಿಲ್ಲ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಸಂಕೇತ್ ಕಾಶಿ(57) ಅವರು ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

Sandalwood_Actor Kashi_Death

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾಶಿ ಅವರು ಮೂರು ದಿನಗಳ ಹಿಂದೆ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 3.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಉಲ್ಟಾ ಪಲ್ಟಾ,ಕಿರಾತಕ, ಮನೆದೇವ್ರು, ಅಣ್ಯಯ್ಯ, ಮಾಂಗಲ್ಯ ತಂತು ನಾನೇನಾ ಚಿತ್ರ ಸೇರಿದಂತೆ 115ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದರು.

ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಕಾಶಿ ಅವರು ಕನ್ನಡದ ನಟ ಶಂಕರ್ ನಾಗ್, ಕಾಶಿ ಹಾಗೂ ರಮೇಶ್ ಭಟ್ ಸೇರಿಕೊಂಡು ಸಂಕೇತ್ ಸ್ಟುಡಿಯೋ ಆರಂಭಿಸಿದ್ದರು. ಆ ಹಿನ್ನೆಲೆಯಲ್ಲಿ ಸಂಕೇತ್ ಕಾಶಿ ಎಂದೇ ಹೆಸರಾಗಿದ್ದರು.  ಖ್ಯಾತ ನಟರಾದ ರವಿಚಂದ್ರನ್, ರಮೇಶ್ ಅರವಿಂದ್ ಮೊದಲಾದವರ ಜೊತೆ ಸ್ನೇಹಿತನ ಪಾತ್ರ ಮಾಡುವ ಮೂಲಕ ಆ ಪಾತ್ರಕ್ಕೆ ಜೀವ ತುಂಬಿದದರು.

Comments are closed.