ಮಂಗಳೂರು, ಆ.7: ಚಾಲನೆಯಾಗಿ ಎಂಟು ವರ್ಷಗಳ ಕಾಲ ಇನ್ನೂ ನಿರ್ಮಾಣ ಹಂತದಲ್ಲೇ ಉಳಿದಿದ್ದ ತುಳು ವಿಕಿಪೀಡಿಯಾ ಇದೀಗ ಸಾವಿರಕ್ಕೂ ಹೆಚ್ಚು ಲೇಖನಗಳೊಂದಿಗೆ ಆನ್ಲೈನ್ನಲ್ಲಿ ಲೈವ್ ಆಗಿ ಮಾರ್ಪಟ್ಟಿದೆ. http://tcy.wikipedia.org ಮೂಲಕ ತುಳು ವಿಕಿಪೀಡಿಯಾ ವೀಕ್ಷಿಸಬಹುದು.
ವಿಕಿಮೀಡಿಯಾ ಫೌಂಡೇಷನ್ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ಮಹೆರ್ ಈ ಸಂಬಂಧ, ಚಂಡೀಗಢದಲ್ಲಿ ನಡೆಯುತ್ತಿರುವ ಮೂರು ದಿನಗಳ ವಿಕಿ ಕಾನ್ಫರೆನ್ಸ್ ಇಂಡಿಯಾ-2016 ಸಮಾರಂಭದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಇದರಲ್ಲಿ 1,100ಕ್ಕೂ ಹೆಚ್ಚು ಲೇಖನಗಳಿವೆ ಎಂದು ತುಳು ವಿಕಿಪೀಡಿಯಾಗೆ ಮಾರ್ಗದರ್ಶನ ನೀಡಿದ್ದ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯ ಭಾರತೀಯ ಭಾಷೆಗಳ ಯೋಜನಾ ವ್ಯವಸ್ಥಾಪಕ ಯು.ಬಿ.ಪವನಜ ಹೇಳಿದ್ದಾರೆ.
ಸುಮಾರು 200 ಮಂದಿ ನೊಂದಾಯಿತ ಬಳಕೆದಾರರಿದ್ದು, 100ಕ್ಕೂ ಹೆಚ್ಚು ಮಂದಿ ತಲಾ 10ಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದಾರೆ. 8-10 ಮಂದಿ ಸಕ್ರಿಯವಾಗಿ ಲೇಖನಗಳನ್ನು ಸಂಪಾದಿಸಿದ್ದಾರೆ. ಕನ್ನಡ ಪ್ರಾಧ್ಯಾಪಕ ವಿಶ್ವನಾಥ ಬಡಿಕಾನ, ಭರತೇಶ ಅಲಸಂಡೆಮನಲು ಅವರ ಕೊಡುಗೆ ಅನನ್ಯ ಎಂದು ಅವರು ವಿವರಿಸಿದರು.
Comments are closed.