ಕರಾವಳಿ

ಮಂಜೇಶ್ವರದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ : ಸಾವಿರಾರು ಭಕ್ತರಿಂದ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Pinterest LinkedIn Tumblr

Manjeshwara_Nagara_1

ಕಾಸರಗೋಡು, ಆ.7 : ತುಳುನಾಡಿನಲ್ಲಿ ಹಿಂದಿನಿಂದಲೂ ನಾಗ ದೇವರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ನಾಗರಪಂಚಮಿ ಪ್ರಯುಕ್ತ ಕಾಸರಗೋಡಿನ ಹದಿನೆಂಟು ಪೇಟೆದೇವಳವಾದ ಮಂಜೇಶ್ವರದ ಅನಂತೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಗೆ ಗರುಡ ಪಂಚಮಿ ಮತ್ತು ನಾಗರ ಪಂಚಮಿ ಎಂದು ಹೆಸರಿದೆ. ನಾಗರ ಪಂಚಮಿಯಂದು ಅಕ್ಕಿ, ತೆಂಗಿನಕಾಯಿ ಇಟ್ಟು ನಾಗರ ಕಲ್ಲಿಗೆ ಪಂಚಾಮೃತ ಅಭಿಷೇಕ ಮಾಡಿ ಆರಾಧಿಸುವ ಸಂಪ್ರದಾಯವಿದೆ.

Manjeshwara_Nagara_2 Manjeshwara_Nagara_3

ಮಂಜೇಶ್ವರದಲ್ಲಿ ನಾಗಪಂಚಮಿಯಂದು ಸಾವಿರಾರು ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. . ಬೆಳಗ್ಗೆಯಿಂದ ಸಾವಿರಾರು ಭಕ್ತಾದಿಗಳು ಮಂಜೇಶ್ವರದ ಅನಂತೇಶ್ವರ ದೇವಾಲಯಕ್ಕೆ ಆಗಮಿಸಿ ದೇವಸ್ಥಾನದ ಆವರಣದಲ್ಲಿರುವ ನಾಗರಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿದರು.

ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಹಾವು, ಹುತ್ತಗಳಿಗೆ ಹಾಲು ಎರೆದು ಪೂಜೆ ಮಾಡುವುದರ ಮೂಲಕ ಬಹಳ ವಿಶೇಷವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಶ್ರಾವಣ ಶುಕ್ಲ ಪಂಚಮಿ ತಿಥಿಯಂದು ಆರಂಭವಾಗುವ ನಾಗರ ಪಂಚಮಿಯ ವಿಶೇಷ,

ಶ್ರೀ ದೇವಳದಲ್ಲಿ ಬೆಳಗಿನಿಂದ ವೈದಿಕ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮಗಳು ಜರಗಿದವು ಬಳಿಕ ಮಧ್ಯಾನ ಮಹಾಪೂಜೆ ಬಳಿಕ ಶ್ರೀ ದೇವರಿಗೆ ವಿಶೇಷ ವಾಸುಕಿ ಪೂಜೆ ನೆರವೇರಿತು .

Manjeshwara_Nagara_4 Manjeshwara_Nagara_5

ಮಂಜೇಶ್ವರಕ್ಕೆ ಹರಿದು ಬಂದ ಭಕ್ತಸಾಗರ:

ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿ ಪಡೆದಿರುವ ಅನಂತೇಶ್ವರ ದೇವಾಲಯಕ್ಕೆ ನಾಗರ ಪಂಚಮಿಯಂದು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೂರ-ದೂರದಿಂದ ಬಂದರು ಪುರಾಣ ಪ್ರಸಿದ್ಧ ಅನಂತೇಶ್ವರ ದೇವಾಲಯಕ್ಕೆ ಮಂಗಳೂರು, ಬಂಟ್ವಾಳ , ಪುತ್ತೂರು , ಕಾರ್ಕಳ , ಉಡುಪಿ , ಕುಂದಾಪುರ , ಹಾಸನ, ಮಡಿಕೇರಿ, ಮುಂಬೈ , ದೆಹಲಿ , ಮುಂತಾದ ಪ್ರದೇಶಗಳಿಂದಸಾವಿರಾರು ಭಕ್ತರು ಆಗಮಿಸಿದ್ದರು.

ಚಿತ್ರಗಳು : ಮಂಜು ನೀರೆಶ್ವಾಲ್ಲ್ಯ

Comments are closed.