ಕರಾವಳಿ

ಆಲ್ಕೋಹಾಲ್ ಕುಡಿಯುವ ಮುನ್ನ…ನಿಮ್ಮ ದೇಹದಲ್ಲಿ 900 ಜೀನ್ಸ್‌ಗಳ ಬೆಂಬಲವಿದೆಯಾ.. ಪರೀಕ್ಷಿಸಿ..

Pinterest LinkedIn Tumblr

alcohol_Habits_Think

ನ್ಯೂಯಾರ್ಕ್ : ನಿಮಗೆ ಆಲ್ಕೋಹಾಲ್ ಕುಡಿಯುವ ಹವ್ಯಾಸವಿದೆಯಾ.. ಹಾಗಾದರೆ ಈ ವರದಿಯನ್ನೊಮ್ಮೆ ಓದಿ.. ಆಲ್ಕೋಹಾಲ್ ಕುಡಿಯಬೇಕು ಎನಿಸಿದರೆ ಅದಕ್ಕೆ ನಿಮ್ಮೊಳಗಿನ ಬರೋಬ್ಬರಿ 900 ಜೀನ್ಸ್‌ಗಳ (ವಂಶವಾಹಿ) ಬೆಂಬಲ ಬೇಕೇ ಬೇಕು!

ಇದೊಂಥರಾ ವಿಚಿತ್ರ ಎನಿಸುವ ಸುದ್ಧಿ, ಆದರೆ ಅನಿವಾರ್ಯವಾಗಿ ನಂಬಲೇಬೇಕಾಗಿರುವಂಥ ಸುದ್ದಿ. ಏಕೆಂದರೆ, ಇದನ್ನು ಸ್ವತಃ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಸಂಶೋಧನಾ ತಂಡ ವೈಜ್ಞಾನಿಕ ಅಧ್ಯಯನ ಮತ್ತು ಸತತ ಸಂಶೋಧನೆಗಳ ಮೂಲಕ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ. ಈ ಸಮೀಕ್ಷೆಯ ಪ್ರಕಾರ, ನಿಮ್ಮೊಳಗಿನ ಬರೋಬ್ಬರಿ 900 ಜೀನ್‌ಗಳ (ವಂಶವಾಹಿ) ಬೆಂಬಲವಿದ್ದರೆ ಮಾತ್ರ ನಿಮಗೆ ಆಲ್ಕೋಹಾಲ್ ಕುಡಿಯಲು ಸಾಧ್ಯವಾಗ ಬಹುದು.

ಆದರೆ ಈ ಸಂಶೋಧನೆಯಲ್ಲಿ ನೇರವಾಗಿ ಮನುಷ್ಯನನ್ನು ಇನ್ನೂ ಪ್ರಯೋಗಕ್ಕೆ ಒಳಪಡಿಸಿಲ್ಲ. ಬದಲಾಗಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಯೋಗಾಲಯದಲ್ಲಿನ ಇಲಿಗಳಿಗೆ ಬ್ರೆಡ್‌ಗಳ ಮೂಲಕ ಮತ್ತು ನೇರವಾಗಿ ಆಲ್ಕೋಹಾಲ್ ಅಂಶ ನೀಡಿದಾಗ ಅವುಗಳಲ್ಲಿ ಕೆಲವು ಆ ಆಹಾರವನ್ನು ತಿಂದಿವೆ, ಕೆಲವು ಇಲಿಗಳು ಮುಟ್ಟಿಯೇ ಇಲ್ಲ. ಈ ಎರಡೂ ಗುಂಪಿನ ಇಲಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಆಲ್ಕೋಹಾಲ್ ಸೇವನೆ ಮಾಡಬೇಕೆಂದರೆ ವಂಶವಾಹಿಗಳ ಪ್ರಯೋಚನೆ ಅಥವಾ ಸಹಾಯ ಅತ್ಯಂತ ಅಗತ್ಯ ಎಂಬುದು ಬೆಳಕಿಗೆ ಬಂದಿದೆ.

”ಇಲಿಗಳಲ್ಲಿನ ಆಲ್ಕೋಹಾಲ್ ಸೇವನೆ ಕುರಿತು ಸೂಕ್ಷ್ಮ ಅಧ್ಯಯನ ನಡೆಸಿದಾಗ, ಅವುಗಳಲ್ಲಿನ ವಂಶವಾಹಿಗಳು ಆಲ್ಕೋಹಾಲ್ ಸೇವನೆಗೆ ಭಾಗಶಃ ಪ್ರಚೋದನೆ ನೀಡಿದ್ದು ಕಂಡುಬಂದಿದೆ. ಯಾವುದೇ ಒಂದು ವಂಶವಾಹಿ ಇಂಥ ಪ್ರಯೋಚನೆಗೆ ಕಾರಣವಾಗಿರಲಿಲ್ಲ. ಹಾಗಾಗಿ ಹಲವು ನೂರು ವಂಶವಾಹಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಬಹುದು ಎಂದು ಸಂಶೋಧನೆ ಮುಂದುವರಿಸಿದಾಗ ಮಹತ್ವದ ಸಂಗತಿಗಳು ಬಯಲಾದವು,” ಎನ್ನುತ್ತಾರೆ, ಸಂಶೋಧನಾ ತಂಡದ ಸದಸ್ಯರಾದ ಪ್ರೊ.ವಿಲಿಯಂ ಮ್ಯೂರ್.

Comments are closed.