ಮಂಗಳೂರು: ಮಂಡಿ ನೋವು ಅಥವಾ ಮಂಡಿ ನೋವು ಅನ್ನೋದು ಈಗ ಸಾಮಾನ್ಯ ಅನ್ನಿಸಿಬಿಟ್ಟಿದೆ. ಮೊದಲು ವಯಸ್ಸಾದವರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಡಿ ನೋವು ಇದೀಗ ಎಲ್ಲ ವಯೋಮಾನದವರಿಗೂ ಹಂಚಿಹೋಗಿದೆ. ನಮ್ಮ ದೇಹ ತೂಕದ ನಾಲ್ಕರಷ್ಟು ಹೆಚ್ಚು ಭಾರ ನಮ್ಮ ಮಂಡಿಯ ಮೇಲೆ ಇರುವ ಕಾರಣ ನೋವು ಆಗಾಗೆ ಹೆಚ್ಚುತ್ತಲೇ ಇರುತ್ತದೆ.
ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಇವು ಮಂಡಿಗಳನ್ನು ಗಟ್ಟಿ ಮಾಡುತ್ತದೆ, ಹಾಗೂ ಇದರಿಂದ ಜನರು ಆಗಾಗ ಕಾಲುಗಳನ್ನು ನೇರ ಮಾಡಿ ಸಡಿಲ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅಲದೆ ಇದರ ನೋವು ಯಾತನದಾಯಕವಾಗಿರುತ್ತದೆ.
ಸಾಮಾನ್ಯವಾಗಿ ಇದು 60 ವರ್ಷ ಮೇಲ್ಪಟ್ಟವರು ಈ ಮಂಡಿ ನೋವಿಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಆದರೆ ಇದು ಈಗ ತಾರ್ಕಿಕವಾಗಿ ಸಮ್ಮತವಲ್ಲ. ಏಕೆಂದರೆ ಹಲವಾರು ಯುವ ಜನರು ಇದಕ್ಕೆ ಈಗಾಗಲೇ ಗುರಿಯಾಗಿದ್ದಾರೆ.ಅವರಲ್ಲಿಯೂ ಸಹ ಮಂಡಿ ಊತ ಕಂಡು ಬರುತ್ತಿದೆ. ಇದಕ್ಕಾಗಿ ಇಂದು ಹಲವಾರು ಔಷಧಿಗಳು ದೊರೆಯುತ್ತಿದ್ದರೂ, ಮನೆ ಮದ್ದುಗಳನ್ನು ಬಳಸಿ ಇವುಗಳನ್ನು ಸುಲಭವಾಗಿ ಗುಣ ಮುಖ ಮಾಡಿಕೊಳ್ಳಬಹುದು.
ಈ ಮನೆಮದ್ದುಗಳು ತುಂಬಾ ಸುರಕ್ಷಿತ, ಇವು ತೀರಾ ಅಪರೂಪಕ್ಕೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಬಹುತೇಕ ಮಂದಿ ಇದರಿಂದ ಪ್ರಯೋಜನಗಳನ್ನು ಈಗಾಗಲೇ ಪಡೆದಿದ್ದಾರೆ. ನಿಮಗೂ ಮಂಡಿ ನೋವಿದ್ದಲ್ಲಿ, ನೀವು ಸಹ ಈ ಮನೆ ಮದ್ದುಗಳ ಸಹಾಯದಿಂದ ಅದನ್ನು ನಿವಾರಿಸಿಕೊಳ್ಳಬಹುದು. ಬನ್ನಿ ಅವು ಯಾವುವು ಎಂದು ತಿಳಿದುಕೊಂಡು ಬರೋಣ…
1.ಆರೋಗ್ಯಕರವಾದ ಆಹಾರವನ್ನು ಸೇವಿಸಿ ನಮಗೆಲ್ಲ ತಿಳಿದಿರುವಂತೆ ನಾವು ಸೇವಿಸುವ ಆಹಾರವು ಸಹ ಮಂಡಿ ನೋವಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒಳಗೊಂಡಿರುವ ಶುಚಿಯಾದ ಆಹಾರವನ್ನು ಸೇವಿಸಿ. ವಿಟಮಿನ್ ಬಿ ಮತ್ತು ಡಿ ಹಾಗು ಒಮೆಗಾ 3 ಕೊಬ್ಬಿನ ಆಮ್ಲಗಳು ಇರುವ ಆಹಾರವನ್ನು ಸೇವಿಸಿ. ಈ ಆಹಾರಗಳು ನೋವನ್ನು ಮತ್ತು ಊತವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
2.ಒಬ್ಬ ಡಯಟೀಷಿಯನ್ ಜೊತೆಗೆ ಚರ್ಚಿಸಿ, ಒಂದು ಡಯಟ್ ಪಟವನ್ನು ರಚಿಸಿಕೊಳ್ಳಿ. ಸೋಡಿಯಂ ಇರುವ ಆಹಾರ ಪದಾರ್ಥವನ್ನು ಸೇವಿಸುವುದನ್ನು ನಿಲ್ಲಿಸಿ. ಇದು ನಿಮ್ಮ ದೇಹಕ್ಕೆ ಹಾನಿಕಾರಕ
3.ಅಗತ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಿರಿ ಮಂಡಿಗಳನ್ನು ಕಾಪಾಡಿಕೊಳ್ಳುವ ಒಂದು ಒಳ್ಳೆಯ ಉಪಾಯವೇನೆಂದರೆ, ಅದಕ್ಕೆ ಅಗತ್ಯವಾದಷ್ಟು ವಿಶ್ರಾಂತಿಯನ್ನು ನೀಡುವುದು. ವಿಶ್ರಾಂತಿಯನ್ನು ತೆಗೆದುಕೊಂಡರೆ, ಅದರಿಂದ ಮಂಡಿಯು ಸ್ವಲ್ಪ ಆರಾಮವಾಗುತ್ತದೆ. ಅದರ ಮೇಲೆ ಭಾರ ಬೀಳುವುದು ತಪ್ಪಿದರೆ, ಅದರ ನೋವು ಸಹ ಕಡಿಮೆಯಾಗುತ್ತದೆ. ಆದ್ದರಿಂದ ಅಗತ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಿರಿ
4.ಮಂಜುಗಡ್ಡೆಯನ್ನು ಇರಿಸಿ ಮಂಜುಗಡ್ಡೆಯು ಊದಿಕೊಂಡ ಮಂಡಿಗಳಿಗೆ ಒಳ್ಳೆಯ ಮನೆ ಮದ್ದಾಗಿರುತ್ತದೆ. ಮಂಡಿಗಳು ಊದಿಕೊಂಡಾಗ ಅದರ ಮೇಲೆ ಮಂಜುಗಡ್ಡೆಯನ್ನು ಇರಿಸಿ. ಇದಕ್ಕಾಗಿ ಮಂಜುಗಡ್ಡೆಗಳನ್ನು ದಪ್ಪನಾದ ಬಟ್ಟೆಯಲ್ಲಿ ಸುತ್ತಿ,ಅದು ಕರವಸ್ತ್ರವಾದರು ಸರಿ, ಅದರಲ್ಲಿ ಸುತ್ತಿ ನೋವಿರುವ ಭಾಗದಲ್ಲಿ ಎಲ್ಲಿ ಬೇಕೋ, ಅಲ್ಲಿ ಈ ಪ್ಯಾಕ್ ಇಟ್ಟುಕೊಳ್ಳಿ. 20-30 ನಿಮಿಷದ ಅವಧಿಯಲ್ಲಿ 3-4 ಬಾರಿ ಇದನ್ನು ಇಡಿ. ಆಗ ನೋವು ಕಡಿಮೆಯಾಗುತ್ತದೆ.
5.ವ್ಯಾಯಾಮ ಮಾಡಿ ಮಂಡಿಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ದಿನವೂ ವ್ಯಾಯಾಮ ಮಾಡಿ. ನಿಯಮಿತವಾಗಿ ಓಡಾಡುವುದರಿಂದಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆಂದು ಜಿಮ್‍ಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಬೆಳಗ್ಗೆ ಎದ್ದು ಓಡಾಡಿ ಸಾಕು
Comments are closed.