ಮಂಗಳೂರು,ಆ.08: ಚೆನ್ನೈನ ರಾಧಾಕೃಷ್ಣ ಸಲಾ ವುಡ್‌ಲ್ಯಾಂಡ್ಸ್‌ನ ಜಾನಕಿ ಕೃಷ್ಣ ಸಭಾಂಗಣದಲ್ಲಿ ನಿನ್ನೆ ಜರಗಿದ ಸಮಾರಂಭದಲ್ಲಿ ದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ಚೆನ್ನೈ ವತಿಯಿಂದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರಿಗೆ ವಿಪ್ರ ಸಮಾಜ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ಅಧ್ಯಕ್ಷೆ ಡಾ| ಶ್ರೀಮತಿ ಅಮಿತಾ ಪೃಥ್ವಿ, ಮದ್ರಾಸ್ ಸರಕಾರದ ಮಾಜಿ ಉನ್ನತ ಶಿಕ್ಷಣ ಸಚಿವರಾಗಿದ್ದ ಎಚ್.ವಿ. ಹಂದೆ, ಹಿರಿಯ ನೃತ್ಯಗುರು ಪದ್ಮವಿಭೂಷಣ ಚಿತ್ರಾ ವಿಶ್ವೇಶ್ವರನ್, ಉಪಾಧ್ಯಕ್ಷ, ಮದ್ರಾಸ್ ವುಡ್‌ಲ್ಯಾಂಡ್ಸ್ ಹೋಟೆಲ್‌ನ ಕಡಂದಲೆ ಮುರಳಿರಾವ್, ಡಾ. ಎಂ.ಜಿ. ಭಟ್, ಕೆ. ರಾಜೇಶ್ ರಾವ್, ಕಾರ್‍ಯದರ್ಶಿ ಪಿ. ನಾರಾಯಣ ಭಟ್, ಗೌರವಾಧ್ಯಕ್ಷ ಹಿರಿಯ ಉದ್ಯಮಿ ಕೆ. ಮೋಹನ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಕನ್ನಡ ತುಳು ಚಲನಚಿತ್ರ ಗಾಯಕಿ ಆರೂರು ಸರೋಜಿನಿ ಪಟ್ಟಾಭಿರಾವ್ ಹಾಗೂ ಹಿರಿಯ ವಿದ್ವಾಂಸರಾದ ಶ್ರೀಮತಿ ವೃಂದಾರಮಣ್ ಅವರನ್ನು ಗೌರವಿಸಲಾಯಿತು.
Comments are closed.