ಕರಾವಳಿ

ಯಾವುದಕ್ಕೊ ಕಂಡು ಹಿಡಿದ ಮದ್ದುಗಳು ಇನ್ಯಾವುದಕ್ಕೊ ಬಳಕೆಯಾಗುತ್ತಿದೆ : ಇಲ್ಲಿದೆ ಇಂತಹ ಔಷಧಿಗಳ ಸಮಗ್ರ ವಿವರಣೆ

Pinterest LinkedIn Tumblr

medicin

ಮಂಗಳೂರು : ಸಂಶೋಧನೆಗಳೇ ಹಾಗೆ, ಯಾವುದನ್ನೊ ಕಂಡು ಹಿಡಿಯಲು ಹೋದಾಗ, ಮತ್ತೇನೋ ಫಲಿತಾಂಶ ದೊರೆಯುತ್ತದೆ. ಯಾವುದೋ ವಸ್ತುವನ್ನು ಯಾವುದೋ ಉದ್ದೇಶಕ್ಕಾಗಿ ಕಂಡು ಹಿಡಿದರೆ, ಅದು ಇನ್ಯಾವುದೋ ಉದ್ದೇಶಕ್ಕೆ ಬಳಕೆಯಾಗಲು ಆರಂಭವಾಗುತ್ತದೆ. ಅವು ಸಹ ಒಂದು ಸಂಶೋಧನೆಯೇ ಬಿಡಿ…! ಈ ವಿಚಾರದಲ್ಲಿ ನಾವು ನಮ್ಮ ಹಿಂದಿನ ಸಂಶೋಧಕರರನ್ನು ನೆನೆಯಬೇಕು.

ಇವರು ತಮ್ಮ ತನು ಮನ ಧನ ಮತ್ತು ಸಮಯವನ್ನೆಲ್ಲ ಪಣಕ್ಕಿಟ್ಟು ನಮಗಾಗಿ ಎಷ್ಟೆಲ್ಲಾ ಸಂಶೋಧನೆಗಳನ್ನು ಮಾಡಿದ್ದಾರಲ್ಲವೆ? ಅವರು ಅಂದು ಕಂಡು ಹಿಡಿದ ವಸ್ತುಗಳನ್ನು ನಾವು ಇಂದು ನಮ್ಮ ನಿತ್ಯದ ಉಪಯೋಗಗಳಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಂಡಿದ್ದೇವೆ. ಇಂದು ನಾವು ಹಿಂದೆ ಒಂದು ಉದ್ದೇಶಕ್ಕೆ ಬಳಸಲು ಕಂಡು ಹಿಡಿದಂತಹ ಹಾಗೂ ಇಂದು ಬೇರೆ ಉದ್ದೇಶಕ್ಕೆ ಬಳಸುತ್ತಿರುವ ಕೆಲವು ವಸ್ತುಗಳನ್ನು ನಿಮಗೆ ತಿಳಿಸುತ್ತೇವೆ.

ಇಂಟರ್‌ನೆಟ್ ಮತ್ತು ಮೊಬೈಲ್ ಇಲ್ಲದ ಆ ಕಾಲದಲ್ಲಿ ಎಷ್ಟು ಸಂಶೋಧನೆಗಳು ನಡೆದವು ಎಂದು!. ಅವರ ಅವಿರತ ಅಧ್ಯಯನಗಳು ಮತ್ತು ಶ್ರಮಗಳು ನಮ್ಮನ್ನು ಸುಖವಾಗಿ ಜೀವಿಸುವಂತೆ ಮಾಡಲು ಯಶಸ್ವಿಯಾದವು. ಹಿಂದೆ ಕಂಡುಹಿಡಿದ ಅನೇಕ ವಸ್ತುಗಳು ಹಿಂದಿಗೂ ಬಳಕೆಯಲ್ಲಿವೆ.

ಕೆಲವೊಮ್ಮೆ ಆಕಸ್ಮಿಕವಾಗಿ ಕೆಲವೊಂದು ವಸ್ತುಗಳು ಕಂಡುಹಿಡಿಯಲ್ಪಡುತ್ತವೆ. ಅಂತಹದರಲ್ಲಿ ವಯಾಗ್ರ ಸಹ ಒಂದು. ಗಂಡಸರ ತಲೆಯ ಮೇಲೆ ಕೂದಲು ಬೆಳೆಸಲು ಮತ್ತು ಬ್ರಾಂದಿ ತಯಾರಿಸಲು ಇದನ್ನು ಕಂಡುಹಿಡಿಯಲಾಯಿತು. ಕೆಲವೊಂದು ಸಂಶೋಧನೆಗಳನ್ನು ವಿಶೇಷವಾಗಿ ರೋಗ ಪರಿಹಾರಕ್ಕಾಗಿ ಕಂಡುಹಿಡಿಯಲಾಯಿತು. ಇವುಗಳ ಮೇಲೆ ಮತ್ತೆ ಅಧ್ಯಯನ ನಡೆಸಿ ಹಲವಾರು ಪ್ರಾಣಗಳನ್ನು ಉಳಿಸುವ ಕಾರ್ಯಗಳನ್ನು ವಿಜ್ಞಾನಿಗಳು ಯಶಸ್ವಿಯಾಗಿ ಮಾಡಿದ್ದಾರೆ.

ಬನ್ನಿ ಇನ್ನು ತಡ ಮಾಡದೆ ಹಿಂದೆ ಯಾವ ಉದ್ದೇಶದಿಂದ ಕೆಲವು ವಸ್ತುಗಳನ್ನು ಕಂಡುಹಿಡಿಯಲಾಯಿತು ಮತ್ತು ಇಂದು ಅವುಗಳನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ ಎಂದು ನೋಡಿಕೊಂಡು ಬರೋಣ….

viagra_photo_a

1.ವಯಾಗ್ರ:
ವಯಾಗ್ರ ಈ ಔಷಧವನ್ನು ಎದೆ ನೋವು ಮತ್ತು ಅಧಿಕ ರಕ್ತದೊತ್ತಡ ನಿವಾರಿಸಲು ಬಳಸಲಾಗುತ್ತಿತ್ತು. ಆದರೆ ಒಂದು ದಿನ ಒಬ್ಬಾತ ಇದನ್ನು ತನ್ನ ಜನನಾಂಗದ ಮೇಳೆ ಉಜ್ಜಿಕೊಂಡನಂತೆ, ಆಗ ಅವನ ಜನನಾಂಗ ನಿಮಿರಿತಂತೆ. ಅಂದಿನಿಂದ ವಯಾಗ್ರವನ್ನು ಹಿಂದಿನ ಉದ್ದೇಶಕ್ಕೆ ಬಿಟ್ಟು, ಜನನಾಂಗ ನಿಮಿರುವಿಕೆ ಮತ್ತು ಲೈಂಗಿಕ ಸಾಮರ್ಥ್ಯ ವೃದ್ಧಿಗಾಗಿ ಬಳಸಲು ಆರಂಭಿಸಿದರಂತೆ.

kichan_dish_infcatst - Copy

2.ಕಿಚನ್ ಡಿಸ್‌ಇನ್‌ಫೆಕ್ಟೆಂಟ್:
ಕಿಚನ್ ಡಿಸ್‌ಇನ್‌ಫೆಕ್ಟೆಂಟ್ ಇದನ್ನು ಮೊದಲು ಸ್ತ್ರೀಯರ ಜನನಾಂಗದ ಇನ್‌ಫೆಕ್ಷನ್ ದೂರ ಮಾಡಲು ಬಳಸಲಾಗುತ್ತಿತ್ತು. ಸ್ತ್ರೀಯರ ಜನನಾಂಗದ ತೇವಾಂಶ ಹೆಚ್ಚಿಸಲು ಮತ್ತು ಸ್ವಚ್ಛಗೊಳಿಸಲು ಇದು ಬಳಕೆಯಾಗುತ್ತಿತ್ತು. ಇದು ಸ್ತ್ರೀಯರಿಗೆ ವಿಪರೀತ ನೋವನ್ನು ಉಂಟು ಮಾಡುತ್ತಿತ್ತು.ಅಲ್ಲದೆ ಇದರಿಂದ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತಿದ್ದವು. ಅದೃಷ್ಟವಶಾತ್ ಇಂದು ಇದನ್ನು ಅಡುಗೆ ಮನೆ ಸ್ವಚ್ಛಗೊಳಿಸಲು ಬಳಸಲಾಗುತ್ತಿದೆ.

anestiya_photo_1

3.ಅನಸ್ತೇಷಿಯಾ:
ಅನಸ್ತೇಷಿಯಾ ಅಥವಾ ಅರಿವಳಿಕೆ ಮದ್ದನ್ನು ಈಗ ಶಸ್ತ್ರ ಚಿಕಿತ್ಸೆಗೆ ಮುನ್ನ ನೋವು ತಿಳಿಯದೆ ಇರಲು ರೋಗಿಗಳ ಪ್ರಜ್ಞೆಯನ್ನು ತಪ್ಪಿಸಲು ಬಳಸಲಾಗುತ್ತಿದೆ.ಆದರೆ ಮೊದಲು ಇದನ್ನು ಖಿನ್ನತೆಯಿಂದ ಬಳಲುವ ರೋಗಿಗಳನ್ನು ಸಂತೋಷವಾಗಿ ಇಡಲು ಬಳಸಲಾಗುತ್ತಿತ್ತು. ಖಿನ್ನತೆಯಿಂದ ಬಳಲುವರಿಗೆ ವಿಶ್ರಾಂತಿಯನ್ನು ನೀಡಲು ಇದನ್ನು ಬಳಸಲಾಗುತ್ತಿತ್ತು.

mouth_wash_photo - Copy

4.ಮೌತ್ ವಾಶ್:
ಇವುಗಳನ್ನು ಮೊದಲು ಲೈಂಗಿಕವಾಗಿ ವರ್ಗಾವಣೆಗೊಳ್ಳುತ್ತಿದ್ದ ಗೊನೊರಿಯಾಗಳಂತಹ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಜೊತೆಗೆ ತಲೆ ಹೊಟ್ಟನ್ನು ನಿವಾರಿಸಲು ಸಹ ಇದು ಬಳಕೆಯಾಗುತ್ತಿತ್ತು. ಇಂದು ನಾವು ಇದನ್ನು ಬಾಯಿ ಮುಕ್ಕಳಿಸಲು ಮಾತ್ರ ಬಳಸುತ್ತಿದ್ದೇವೆ.

soft_drink_1

5.ಲಘು ಪಾನೀಯಗಳು :
ಲಘು ಪಾನೀಯಗಳು ಎಂದರೆ ನಾವು ಇಂದು ಕುಡಿಯುತ್ತಿರುವ ಕೋಕ್ ಅಥವಾ ಇನ್ನಿತರ ಪಾನೀಯಗಳಂತಲ್ಲ. ಮೊದಲು ಇವುಗಳನ್ನು ಮಾರ್ಪಿನ್‌ಗಳ ಚಟಕ್ಕೆ ಬಿದ್ದವರನ್ನು ಅದರಿಂದ ವಿಮುಕ್ತರನ್ನಾಗಿಸಲು ಬಳಸಲಾಗುತ್ತಿತ್ತಂತೆ. ಮಾರ್ಪಿನ್ ಬಿಟ್ಟಾಗ ಜನರಲ್ಲಿ ಉಂಟಾಗುವ ಭಾವೋದ್ರೇಕಗಳನ್ನು ತಡೆಯಲು ಇದನ್ನು ಬಳಸಲಾಗುತ್ತಿತ್ತಂತೆ. ಇದರಲ್ಲಿ ಕೊಕೊವಾ ಎಲೆಗಳು ಮತ್ತು ಆಲ್ಕೋಹಾಲ್ ಸಹ ಇರುತ್ತಿತ್ತು. ಇವುಗಳು ದುಶ್ಚಟ ನಿವಾರಿಸಿಕೊಳ್ಳುವ ಜನರಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡುತ್ತಿತ್ತು.

Comments are closed.