ಕರಾವಳಿ

ಬೋಲ್ಡ್ ನಟಿ ನರ್ಗೀಸ್ ಫಖ್ರಿ ಮುಖಕ್ಕೆ ಬಟ್ಟೆಮುಚ್ಚಿಕೊಂಡು ಭಾರತಕ್ಕೆ ಎಂಟ್ರಿ ಕೊಟ್ಟಿದ್ದೇಕೆ..?

Pinterest LinkedIn Tumblr

Nargis_Fakhri_Photo

ಅಜರ್, ಹೌಸ್ಫುಲ್ 3 ಚಿತ್ರದ ಪ್ರಮೋಶನ್’ಗೆ ಬಾರದೆ ಅಮೆರಿಕದಲ್ಲಿ ಕುಳಿತಿದ್ದ ನರ್ಗೀಸ್ ಫಖ್ರಿ ಬಗ್ಗೆ ಏನೇನೋ ಮಾತುಗಳು ಕೇಳಿಬಂದಿದ್ದವು. ಉದಯ್ ಚೋಪ್ರಾ ಜೊತೆಗೆ ಲವ್ ಬ್ರೇಕಪ್ ಆಗಿದೆ, ನರ್ಗೀಸ್ ಮತ್ತೆ ಬಾಲಿವುಡ್ ಗೆ ಬರೋದಿಲ್ಲ, ಭಾರತಕ್ಕೂ ಕಾಲಿಡೋದಿಲ್ವಂತೆ- ಹೀಗೆ ಆಳಿಗೊಬ್ಬರು ಆಡಿಕೊಂಡಿದ್ದರು.

ಗ್ರೀಸ್‍‍ನ ದ್ವೀಪಗಳಲ್ಲಿ ಬಿಕಿನಿಯಲ್ಲಿ ಸೂರ್ಯನ ಶಾಖ ಹೀರಿಕೊಳ್ಳುತ್ತಿದ್ದ ನರ್ಗೀಸ್ ಇವನ್ನು ಕೇಳಿಸಿಕೊಂಡೂ, ಇನ್ಸ್ಟಗ್ರಾಮ್ನಲ್ಲಿ ಹಾಟ್ ಹಾಟ್ ಫೋಟೋ ಹಾಕುತ್ತಿದ್ದರು. ಯಾರಿಗೂ ಗೊತ್ತಾಗದಂತೆ ನರ್ಗೀಸ್ ಈಗ ಭಾರತಕ್ಕೆ ಬಂದಿದ್ದಾರೆ. ಮುಂಬೈನ ಏರ್ಪೋರ್ಟ್‌ನಲ್ಲಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಮಧ್ಯ ರಾತ್ರಿ ವೇಳೆ ಅಮೆರಿಕದ ವಿಮಾನದಿಂದ ಇಳಿದಿದ್ದಾರೆ.

ಗ್ರೀಸ್‌ನಲ್ಲಿ ಟೂ ಪೀಸ್‌ನಲ್ಲಿದ್ದ ಈ ನಟಿ ಭಾರತದಲ್ಲಿ ಕಣ್ಣೆರಡು ಬಿಟ್ಟುಕೊಂಡು ಬಟ್ಟೆ ಮುಚ್ಕೊಂಡಿದ್ದೇಕೆ ಎಂಬುದರ ಕಾರಣ ತಿಳಿಯಲಿಲ್ಲ. ನರ್ಗೀಸ್ ಗೆನಾದರೂ ಅಪರಾಧಿ ಪ್ರಜ್ಞೆ ಕಾಡ್ತಿದೆಯಾ?.. ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

Comments are closed.