ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ನೀವು ಸೇವಿಸುವ ಆಹಾರ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಿ ನಿಮ್ಮನ್ನು ಸುದೃಢಗೊಳಿಸುತ್ತದೆ. ಆದಷ್ಟು ಕೃತಕ ಆಹಾರಗಳಿಗೆ ಮಾರುಹೋಗದೇ ನೈಸರ್ಗಿಕ ಉತ್ಪನ್ನಗಳನ್ನು ನಾವು ಬಳಸಿದಷ್ಟೂ ನಮ್ಮ ಆರೋಗ್ಯ ಸಂಪತ್ತಾಗಿರುತ್ತದೆ.
ನಾವು ಹೆಚ್ಚು ಬಾಯಾರಿಕೆ ಆದಾಗ ಕೋಕಾಕೋಲ, ಪೆಪ್ಸಿ, ಮಿರಿಂಡಾ ಮೊದಲಾದ ಕೃತಕ ಪಾನೀಯಗಳ ಮೊರೆ ಹೋಗುತ್ತೇವೆ. ಇದು ಕ್ಷಣ ಕಾಲ ನಿಮ್ಮ ಬಾಯಾರಿಕೆಯನ್ನು ನೀಗಿಸಿದರೂ ಬಾಯಾರಿಕೆಯನ್ನು ಹೋಲಾಡಿಸದು. ಇದಕ್ಕಿಂತ ನೈಸರ್ಗಿಕ ಪೇಯ ಎಳೆ ನೀರನ್ನು ನೀವು ಬಳಸಿಕೊಂಡರೆ ನಿಮ್ಮ ದಣಿವು ಬಾಯಾರಿಕೆ ನೀಗಿ ದೇಹ ಉಲ್ಲಾಸಿತವಾಗುತ್ತದೆ.
ಕೃತಕ ಪಾನೀಯದಂತೆ ಅದೇ ಬೆಲೆಯಲ್ಲಿ ದೊರೆಯುವ ಎಳೆ ನೀರು ತನ್ನಲ್ಲಿ ಅಪಾರ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಎಲ್ಲಾ ಕಾಲದಲ್ಲಿಯೂ ಸೇವಿಸಬಹುದಾದ ಈ ಪಾನೀಯ ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಕಲ್ಪವೃಕ್ಷವೇ ಆಗಿದೆ. ಬೇಡಿದ್ದನ್ನು ನೀಡುವ ಫಲ ಎಂಬ ಮಾತಿನಂತೆ ಎಳೆ ನೀರು ಅಥವಾ ಸಿಯಾಳ ದೇಹದಲ್ಲಿ ರೋಗನಿರೋಧಕ ಅಂಶವನ್ನು ಬಲಪಡಿಸಿ ಹಲವಾರು ರೋಗಗಳಿಗೆ ಔಷಧವಾಗಿ ಪರಿಣಮಿಸಿದೆ.
ಮಕ್ಕಳಿಗೆ ಎಳೆನೀರಿನಿಂದ ಉಂಟಾಗುವ ಪ್ರಯೋಜನಗಳನ್ನು ಕುರಿತು ನೋಡೋಣ…
1.ಅಜೀರ್ಣ, ಗ್ಯಾಸ್ಟ್ರಿಕ್ ಹುಣ್ಣು, ಅತಿಸಾರ, ಭೇದಿ, ಮೂಲವ್ಯಾಧಿ, ವಾಯು, ವಾಂತಿ, ಅಗ್ನಿಮಾಂದ್ಯ ಮೊದಲಾದ ಮಕ್ಕಳಲ್ಲಿ ಉಂಟಾಗುವ ಜಠರಗರುಳಿನ ಕಾಯಿಲೆಗಳಿಗೆ ಎಳನೀರು ಅತ್ಯುತ್ತಮವಾಗಿದೆ.
2.ಮಕ್ಕಳಲ್ಲಿ ಉಂಟಾಗುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಎಳನೀರು ಹೆಚ್ಚು ಉಪಯುಕ್ತವಾದುದಾಗಿದೆ. ನಿರಂತರವಾಗಿ ಆಗಾಗ್ಗೆ ಎಳೆ ನೀರು ನೀಡುವುದು ಅವರ ಹೈಡ್ರೇಶನ್ ಮಟ್ಟವನ್ನು ಹೆಚ್ಚಿಸಿ ಮಕ್ಕಳಲ್ಲಿ ಈ ಸಮಸ್ಯೆಯಿಂದ ಮುಕ್ತಿಯನ್ನು ಒದಗಿಸುತ್ತದೆ.
3.ಮಕ್ಕಳು ಮತ್ತು ಕಂದಮ್ಮಗಳಲ್ಲಿ ವಾಂತಿ ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎಳನೀರು ಪ್ರಮುಖವಾಗಿದ್ದು, ನಿತ್ಯವೂ ಇದರ ಸೇವನೆ ಮಕ್ಕಳಲ್ಲಿ ವಾಂತಿ ಸಮಸ್ಯೆ ನಿವಾರಿಸುತ್ತದೆ.
4.ಮಕ್ಕಳನ್ನು ಕಾಡುವ ಮೂತ್ರ ಸಮಸ್ಯೆಗೆ ಎಳನೀರು ಅತ್ಯುತ್ತಮವಾದುದಾಗಿದೆ. ಎಳೆ ನೀರು ಮೂತ್ರವರ್ಧಕ ಎಂದೆನಿಸಿದ್ದು, ಮೂತ್ರಕೋಶ ಮತ್ತು ಮೂತ್ರದ ಹಾದಿಯಲ್ಲಿರುವ ಯಾವುದೇ ಸೋಂಕನ್ನು ನಿವಾರಿಸುತ್ತದೆ. ಮೂತ್ರ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸೇವನೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
5.ಎಳೆ ನೀರು ಮಕ್ಕಳ ತ್ವಚೆಗೆ ಮಾಯಿಶ್ಚರೈಸರ್ ಮತ್ತು ಟೋನರ್ನಂತೆ ಕೆಲಸ ಮಾಡುತ್ತದೆ. ಹೆಚ್ಚುವರಿ ಜಿಡ್ಡನ್ನು ತ್ವಚೆಯಿಂದ ಹೋಗಲಾಡಿಸಿ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಎಳನೀರಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ನಿರೋಧಕ ಮತ್ತು ವೈರಸ್ ವಿರೋಧಿ ಅಂಶಗಳು ತ್ವಚೆಯ ಸೋಂಕುಗಳನ್ನು ತ್ವರಿತವಾಗಿ ನಿವಾರಿಸುತ್ತದೆ.
6.ತ್ವಚೆಯ ಮೇಲಿನ ಕಲೆಗಳು ಮತ್ತು ಮೊಡವೆಗಳನ್ನು ದೂರಾಗಿಸಿ ತ್ವಚೆಯ ಸೋಂಕನ್ನು ನಿವಾರಿಸುತ್ತದೆ. ಬಯೋ ಕೆಮಿಕಲ್ ಆದ ಪೆಪ್ಟೈಡ್ಸ್ ಎಳೆ ನೀರಿನಲ್ಲಿದ್ದು ಇದು ಇತ್ತೀಚಿನ ದಿನಗಳಲ್ಲಿ ಮೈಕ್ರೊಬಯಲ್ ಸೋಂಕುಗಳಿಗೆ ಮದ್ದಾಗಿದೆ.
Comments are closed.