ಮಂಗಳೂರು: ಯುವಕನೋರ್ವ ಬಹುಮಹಡಿ ಕಟ್ಟಡವೊಂದರ ರೂಫ್ಗೆ ಏರಿ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡುವ ಮೂಲಕ ಹೈಡ್ರಾಮ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ನಗರದ ಜಿ.ಎಚ್.ಎಸ್ ರಸ್ತೆಯಲ್ಲಿ ನಡೆದಿದೆ.
ಹೈಡ್ರಾಮ ಸೃಷ್ಟಿಸಿದ ಯುವಕನನ್ನು ಕಾಸರಗೋಡಿನ ಪೈಝ್ ಸಲ್ಮಾನ್ (30) ಎಂದು ಗುರುತಿಸಲಾಗಿದೆ..
ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಮಂಗಳೂರಿನ ಹಂಪನಕಟ್ಟೆಯ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಕಟ್ಟಡವೊಂದರ ಮೇಲ್ಛಾವಣೆಗೆ ಏರಿ ಅಲ್ಲಿಂದ ಪಕ್ಕದ ಐಡಿಯಲ್ ಐಸ್ ಕ್ರೀಂ ಪಾರ್ಲರ್ನ ಕಟ್ಟಡಕ್ಕೆ ಜಿಗಿದು ಕಟ್ಟಡದ ಮೇಲೆ ಹಾಕಲಾಗಿದ್ದ ರೂಫ್ ಶೀಟ್ ಮೇಲೇರಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಿದಾನೆ..ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಬಂದರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಈತನನ್ನು ಕೆಳಗಿಳಿಯುವಂತೆ ಮನವೊಲಿಸಿದಾಗ ಅತ ಹಣಕ್ಕಾಗಿ ಹಾಗೂ ಸಿಗರೇಟ್ಗಾಗಿ ಬೇಡಿಕೆಯಿಡುತ್ತಾ ಆತ್ಮಹತ್ಯೆಯ ಪ್ರಹಸನ ಮುಂದುವರಿಸಿದ್ದಾನೆ.
ಪಾಂಡೇಶ್ವರ ಹಾಗೂ ಕದ್ರಿ ಠಾಣೆಯ ಅಗ್ನಿಶಾಮಕ ದಳದ ಶೇಖರ, ಸುರೇಶ್, ರಮೇಶ್, ನವೀನ್, ಅಣ್ಣಪ್ಪ, ಬಸಪ್ಪ ಹಾಗೂ ಸುರತ್ಕಲ್ ನಿವಾಸಿ ರಿಜ್ವಾನ್ ಆತನನ್ನು ರಕ್ಷಿಸಲು ಸಾಕಷ್ಠು ಪ್ರಯತ್ನಪಟ್ಟರು.ಕೊನೆಗೆ ಅತ ಕಟ್ಟಡದ ಇನ್ನೊಂದು ಭಾಗದಲ್ಲಿ ಜಾರಿ ಹಾರಲು ಮುಂದುವರಿದಾಗ ಕೂಡಲೇ ಆತನಿರುವ ಸ್ಥಳಕ್ಕೆ ಧಾಮಿಸಿದ ಸುರತ್ಕಲ್ ನಿವಾಸಿ ರಿಜ್ವಾನ್ ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಈ ವೇಳೆ ಉಳಿದವರು ಆತನಿಗೆ ರೋಪ್ ಬಿಗಿದು ಕೆಳಗಿಸುವಲ್ಲಿ ಯಶಸ್ವಿಯಾದರು.
ಆತನ ಅತ್ಮಹತ್ಯೆ ಪ್ರಹಸನ ನಡೆಯುತ್ತಿದ್ದ ವೇಳೆ ನೂರಾರು ಜನರು ಜಿ.ಎಚ್.ಎಸ್ ರಸ್ತೆಯಲ್ಲಿ ಜಮಾಯಿಸಿದ್ದರಿಂದ ಸುಮಾರು ೨ ಗಂಟೆಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಆಡಚಣೆಯುಂಟಾಯಿತು.
ಪೈಝ್ ಸಲ್ಮಾನ್ ನನ್ನು ಇದೀಗ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Comments are closed.