ಕರಾವಳಿ

ಗರ್ಭ ನಿರೋಧಕ ಬಳಸುವ ಮುನ್ನ ಈ ಅಘಾತಕಾರಿ ವರದಿಯನ್ನೊಮ್ಮೆ ಓದಿ..

Pinterest LinkedIn Tumblr

Gharbha_nirodhaka1

__ಮಾರುಕಟ್ಟೆಗೆ ಸಾಕಷ್ಟು ಗರ್ಭನಿರೋಧಕ ಸಾಧನ ಮತ್ತು ಮಾತ್ರೆಗಳು ಲಗ್ಗೆ ಇಟ್ಟಿವೆ. ಕಂಪನಿಗಳು ಅವರದೆ ರೀತಿಯಲ್ಲಿ ಜಾಹೀರಾತುಗಳನ್ನು ಮಾಡಿ ಗ್ರಾಹಕರನ್ನು ಆಕರ್ಷಿಸ್ತಾ ಇವೆ. ತಾಯಿಯಾಗಲು ಬಯಸದ ಮಹಿಳೆಯರು ಈ ಸಾಧನಗಳ ಮೊರೆ ಹೋಗ್ತಿದ್ದಾರೆ. ಆದ್ರೆ ವೈದ್ಯರೊಬ್ಬರು ನೀಡಿದ ವರದಿ ಮಹಿಳೆಯರನ್ನು ಚಿಂತೆಗೆ ತಳ್ಳಿದೆ.

ವಾಷಿಂಗ್ಟನ್ ನ ನರಶಾಸ್ತ್ರಜ್ಞ ಡಾ ಬ್ರಿಯಾನ್ ಗರ್ಭ ನಿರೋಧಕ ಸಾಧನಗಳು ಸುರಕ್ಷಿತವಲ್ಲ. ಇದನ್ನು ಬಳಸಿದ್ರೂ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದಾರೆ. ಮಹಿಳೆಯೊಬ್ಬಳು ಪತಿ ಜೊತೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಾಳೆ. ಆದ್ರೂ ಆಕೆ ಗರ್ಭ ಧರಿಸಿದ್ದಾಳಂತೆ. ಇದರಿಂದ ಕಂಗಾಲಾದ ಮಹಿಳೆ ಬ್ರಿಯಾನ್ ಬಳಿ ಬಂದಿದ್ದಾಳೆ.

ಗರ್ಭಪಾತ ಮಾಡಿಸಿದ ವೈದ್ಯರು ಆಕೆಯನ್ನು ಪರೀಕ್ಷೆ ನಡೆಸಿದ್ದಾರೆ. ಆಗ ಆಕೆ cloacal malformation ಎಂಬ ಖಾಯಿಲೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದಕ್ಕೆ ಗರ್ಭ ನಿರೋಧಕ ಬಳಸಿರುವುದೇ ಕಾರಣ ಎಂದು ವೈದ್ಯರು ಹೇಳಿದ್ದಾರೆ. 50 ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆಯಂತೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ನಂತರವೂ ಆಕೆ ಗರ್ಭ ಧರಿಸಿರುವುದು ನಂಬಲಸಾಧ್ಯವಾದ ಸಂಗತಿ ಎಂದು ವೈದ್ಯರು ವರದಿಯಲ್ಲಿ ಹೇಳಿದ್ದಾರೆ.

Comments are closed.