ಮಂಗಳೂರು: ಇದು ಪ್ಲಾಸ್ಟಿಕ್ ದುನಿಯಾ. ಪ್ಲಾಸ್ಟಿಕ್ ಎಷ್ಟು ಅಪಾಯಕಾರಿ ಅಂತಾ ತಿಳಿದಿದ್ದರೂ ಜನ ಪ್ಲಾಸ್ಟಿಕ್ ನಂಟನ್ನು ಬಿಡ್ತಾ ಇಲ್ಲ. ನೀರು ಕುಡಿಯುವುದರಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಪ್ಲಾಸ್ಟಿಕ್ ಬೇಕೇ ಬೇಕು. ಶಿಶುವಿಗೆ ಕೂಡ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಸಲಾಗುತ್ತದೆ.
ಆದ್ರೆ ಮಕ್ಕಳಿಗೆ ನೀರು ಕುಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಕೊಲಂಬಿಯಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಶ್ವವಿದ್ಯಾಲಯದ ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ. ಈಗಷ್ಟೆ ಹುಟ್ಟಿದ ಮಕ್ಕಳಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದೆ.
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿದ ತಕ್ಷಣ ರಾಸಾಯನಿಕ ಕ್ರಿಯೆ ಶುರುವಾಗುತ್ತದೆ. ಪ್ಲಾಸ್ಟಿಕ್ ನಲ್ಲಿರುವ ರಾಸಾಯನಿಕ ನೀರಿಗೆ ಸೇರಿಕೊಳ್ಳುತ್ತದೆ. ಇದು ಮಕ್ಕಳಲ್ಲಿ ಸ್ಥೂಲಕಾಯ ರೋಗಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ಗರ್ಭಿಣಿಯರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿದರೆ ಇದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಂತೆ.
Comments are closed.